10:31 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಬೆಂಗಳೂರಿನ ಸಿಎಂಆರ್ ಯುನಿವರ್ಸಿಟಿ ಕಾಲೇಜಿನ ಎಂಬಿಎ ವಿದ್ಯಾರ್ಥಿ, ಬಂಟ್ವಾಳ ಮೂಲದ ರಾಧೇಶ್ ಮಯ್ಯಗೆ ಫ್ರೆಶರ್ ಅವಾರ್ಡ್

01/05/2023, 00:40

ಬೆಂಗಳೂರು(reporterkarnataka.com): ಬೆಂಗಳೂರಿನ ಗ್ರೇಟ್ ಸಿಎಂಆರ್ ಯುನಿವರ್ಸಿಟಿ ಕಾಲೇಜಿನ ಎಂಬಿಎ ವಿದ್ಯಾರ್ಥಿ ರಾಧೇಶ್ ಮಯ್ಯ ಅವರು ಕಾಲೇಜಿನ ಫ್ರೆಶರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಕಾಲೇಜಿನಲ್ಲಿ ಕಳೆದ ವಾರ ನಡೆದ 2023ನೇ ಸಾಲಿನ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ರಾಧೇಶ್ ಮಯ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಬೆಂಗಳೂರಿನ 12 ಕಾಲೇಜುಗಳಿಂದ ರೇವಾ ವಿಶ್ವವಿದ್ಯಾಲಯದ ಕಾಲೇಜು ಭಾಗವಹಿಸುವವರಲ್ಲಿ 2ನೇ ಸ್ಥಾನವನ್ನು ಗೆದ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ
ರಾಧೇಶ್ ಮಯ್ಯ ಅವರು ಮಾರ್ಕೆಟಿಂಗ್ ಪ್ರಮೋಶನ್ ಮಾಡುವ ಚಾಲೆಂಜ್ ನಲ್ಲಿ ಕೂಡ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದರಲ್ಲಿ 12 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದು ಎಂಬಿಎ ವಿದ್ಯಾರ್ಥಿ ಗಳಿಗೆ ಮೀಸಲಾದ ಚಾಲೆಂಜ್ ಆಗಿದೆ. ಇನ್ನು ಫ್ರೆಶರ್ ಅವಾರ್ಡ್ ಕಾಲೇಜಿನಲ್ಲಿ ಹಾಡುಗಾರಿಕೆ, ಕಲಿಕೆ ಇನ್ನಿತರ ಎಲ್ಲಾ ಚಟುವಟಿಕೆಗಳಲ್ಲಿ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಗೆ ಮೀಸಲಾದ ಅವಾರ್ಡ್ ಆಗಿದೆ. ಅದು ಈ ಬಾರಿ ರಾಧೇಶ್ ಮಯ್ಯ ಅವರ ಪಾಲಾಗಿದೆ.
ರಾಧೇಶ್ ಮಯ್ಯ ಅವರು ನಿವೃತ್ತ ಕಂದಾಯ ಅಧಿಕಾರಿ ಹಾಗೂ ಸಂಗೀತ ವಿದ್ವಾಂಸ ಡಾ. ಎನ್. ಸೋಮಶೇಖರ್ ಮಯ್ಯ ಬಂಟ್ವಾಳ ಹಾಗೂ ಶಿಕ್ಷಕಿ ಶ್ರೀವಾಣಿ ಮಯ್ಯ ಅವರ ಪುತ್ರ. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿ. ಈಗ ಬೆಂಗಳೂರಿನ ಸಿಎಂಆರ್ ಯುನಿವರ್ಸಿಟಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು