3:47 AM Sunday18 - October 2026
ಬ್ರೇಕಿಂಗ್ ನ್ಯೂಸ್
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20…

ಇತ್ತೀಚಿನ ಸುದ್ದಿ

ಬ್ಯಾಂಕ್‌ ಆಫ್‌ ಬರೋಡಾದ ಎರಡನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶ ಘೋಷಣೆ

02/11/2025, 20:02

ಮಂಗಳೂರು(reporterkarnataka.com): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ ಸೆಪ್ಟೆಂಬರ್‌ನಲ್ಲಿ ಅಂತ್ಯ ಕಂಡ ಎರಡನೇ ತ್ರೈಮಾಸಿಕ ಅವಧಿ ಲಾಭದಲ್ಲಿ ಶೇ.8ರಷ್ಟು ಕುಸಿತ ಕಂಡಿದೆ. ಬಡ್ಡಿ ಆದಾಯವು ಮಧ್ಯಮ ಮಟ್ಟದಲ್ಲಿರುವುದು ಇದಕ್ಕೆ ಕಾರಣ. ಪರಿಣಾಮ ಕಳೆದ ವರ್ಷ ಇದೇ ಅವಧಿಯಲ್ಲಿ 5238 ಕೋಟಿ ರು.ಗಳಷ್ಟಿದ್ದ ನಿವ್ವಳ ಲಾಭ 4809 ಕೋಟಿ ರು.ಗೆ ತಲುಪಿದೆ.
ಇನ್ನು ಬ್ಯಾಂಕ್‌ ಆಫ್‌ ಬರೋಡಾದ ಒಟ್ಟು ಆದಾಯದಲ್ಲಿಯೂ ಕುಸಿತ ಕಂಡಿದೆ. ಕಳೆದ ವರ್ಷ ಈ ಅವಧಿಯಲ್ಲಿ 35.445 ಕೋಟಿ ರು.ಗಳಷ್ಟಿದ್ದ ಆದಾಯ ಈ ವರ್ಷ 35, 026 ಕೋಟಿ ರು.ಗೆ ಇಳಿದಿದೆ ಎಂದು ಬ್ಯಾಂಕ್‌ ಬರೋಡಾ ಫೈಲಿಂಗ್‌ ವೇಳೆ ನಮೂದಿಸಿದೆ.
ಈ ನಡುವೆ ಬ್ಯಾಂಕ್‌ ಆಫ್‌ ಬರೋಡಾದ ಬಡ್ಡಿ ಆದಾಯ ಕೊಂಚ ಸುಧಾರಿಸಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 30, 278 ಕೋಟಿ ರು.ಗಳಷ್ಟಿದ್ದ ಆದಾಯ ಈ ವರ್ಷ 31, 511 ಕೋಟಿ ರು.ಗೆ ತಲುಪಿದೆ. ನಿವ್ವಳ ಬಡ್ಡಿ ಆದಾಯ ಕಳೆದ ವರ್ಷವಿದ್ದ 11,637 ಕೋಟಿ ರು.ಗಿಂತ ಅಲ್ಪ ಏರಿಕೆಯಾಗಿ 11, 954 ಕೋಟಿ ರು.ಗೆ ತಲುಪಿದೆ. ಇನ್ನು ಕಾರ್ಯಾಚರಣೆ ಲಾಭವು ಕಳೆದ ವರ್ಷ 9, 477 ಕೋಟಿ ರು.ಗಳಷ್ಟಿತ್ತು. ಈ ವರ್ಷ ಅದು 7576 ಕೋಟಿ ರು.ಬ್ಯಾಂಕ್ ಆಫ್‌ ಬರೋಡಾದ ಮಾಹಿತಿಯ ಪ್ರಕಾರ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ ಶೇ.2.16ಕ್ಕೆ ಇಳಿದಿದೆ. ಕಳೆದ ವರ್ಷ ಶೇ.2.50ರಷ್ಟಿತ್ತು. ನಿವ್ವಳ ಎನ್‌ಪಿಗಳು ಕುಸಿದಿದ್ದು ಕಳೆದ ಸೆಪ್ಟೆಂಬರ್‌ ಅಂತ್ಯದಲ್ಲಿ 0.6ರಷ್ಟಿತ್ತು. ಈ ವರ್ಷ 0.3ರಷ್ಟು ಕುಸಿದು 0.57ಕ್ಕೆ ತಲುಪಿದೆ.
ಇನ್ನು ಅನುಶ್ಚಿತತೆ ಮೊತ್ತವು 2024ರ ಸೆಪ್ಟೆಂಬರ್‌ನಲ್ಲಿ 2336 ಕೋಟಿ ರುಗಳಷ್ಟಿತ್ತು. ಈ ವರ್ಷ 1232 ಕೋಟಿ ರು.ಗೆ ಇಳಿದಿದೆ. ಇನ್ನು ತ್ರೈಮಾಸಿಕದಲ್ಲಿ ಪಿಸಿಆರ್‌ 93.21ಕ್ಕೆ ಇಳಿದಿದೆ. ಕಳೆದ ವರ್ಷ 93.61ರಷ್ಟಿತ್ತು. ಇನ್ನು ಸಿಆರ್‌ಎಆರ್‌ ಶೇ.16.26 ರಿಂದ 16.54ಕ್ಕೆ ಏರಿಕೆ ಆಗಿದೆ ಎಂದು ಬ್ಯಾಂಕ್‌ ಹೇಳಿದೆ.

ಇತ್ತೀಚಿನ ಸುದ್ದಿ

ಜಾಹೀರಾತು