5:56 PM Monday8 - June 2026
ಬ್ರೇಕಿಂಗ್ ನ್ಯೂಸ್
ಮಳೆಗಾಲ ಎಫೆಕ್ಟ್: ಜೂನ್ 10ರಿಂದ ಕೊಡಗು ಜಿಲ್ಲೆಯಲ್ಲಿ ಬುಲೆಟ್ ಟ್ಯಾಂಕರ್ ಸಹಿತ ಭಾರೀ… ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ… Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:…

ಇತ್ತೀಚಿನ ಸುದ್ದಿ

ಬ್ಯಾಂಕುಗಳಲ್ಲಿ ಕನ್ನಡಿಗರ ಅನುಪಸ್ಥಿತಿ ಆತಂಕಕಾರಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ

28/01/2025, 23:19

ಬೆಂಗಳೂರು(reporterkarnataka.com): ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳ ಆಡಳಿತದಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಇದು ಮುಂದಿನ ದಿನಗಳಲ್ಲಿ ತೀವ್ರವಾದ ಸಾಮಾಜಿಕ ಸಂಘರ್ಷವನ್ನು ಸೃಷ್ಟಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ (ಎಸ್ ಎಲ್ ಬಿ ಸಿ) ಯ ಅಧಿಕಾರಿಗಳೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ತಾವು ಕೇಂದ್ರ ಸಚಿವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಪಡೆದ ಭರವಸೆಯಂತೆ ಬ್ಯಾಂಕುಗಳು ಸಾರ್ವಜನಿಕ ಸಂಪರ್ಕ ವಿಭಾಗಗಳಲ್ಲಿ ಸ್ಥಳೀಯ ಭಾಷೆ ಬಲ್ಲವರನ್ನು ನೇಮಿಸುವುದು ಬಹಳ ಮುಖ್ಯವಾಗಿದ್ದು, ಇದು ವಿಳಂಬವಾದಲ್ಲಿ ನಾಡಿನೆಲ್ಲೆಡೆ ಸಾಮಾಜಿಕ ಸಂಘರ್ಷ ಏರ್ಪಡಲಿದೆ. ಎಸ್ ಎಲ್ ಬಿ ಸಿ ಈ ನಿಟ್ಟಿನಲ್ಲಿ ಕೂಡಲೇ ತನ್ನ ಅಧೀನದ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದಿದ್ದಾರೆ.
*ಶೀಘ್ರದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ:*
ಆಡಳಿತದಲ್ಲಿ ಕನ್ನಡ ಭಾಷೆಗೆ ಆದ್ಯತೆಯನ್ನು ಒದಗಿಸುವ ಮೂಲಕ ಬ್ಯಾಂಕುಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಬ್ಯಾಂಕುಗಳ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ವಿವರವಾದ ಸೂಚನೆಗಳನ್ನು ನೀಡಲಾಗುತ್ತದೆ ಎಂದ ಡಾ.ಬಿಳಿಮಲೆ ಇಷ್ಟರಲ್ಲಿಯೇ ಎಸ್ ಎಲ್ ಬಿ ಸಿ ಈ ಸಭೆಯನ್ನು ಆಯೋಜಿಸಲಿದೆ ಎಂದು ಹೇಳಿದ್ದಾರೆ.
ಬ್ಯಾಂಕುಗಳಲ್ಲಿ ನಿರ್ವಹಣೆಯಾಗುವ ಹೊರಗುತ್ತಿಗೆ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸುವುದು ಬಹುಮುಖ್ಯವಾಗಿದ್ದು, ಈ ಕುರಿತಂತೆ ಟೆಂಡರ್ ನಿಯಮಗಳಲ್ಲಿ ಸ್ಪಷ್ಟವಾಗಿ ಷರತ್ತುಗಳನ್ನು ವಿಧಿಸಬೇಕು. ಸ್ಥಳೀಯರಿಗೆ ನೇಮಕಾತಿ ನೀಡುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಎಸ್ ಎಲ್ ಬಿ ಸಿ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂಬ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ ಡಾ. ಬಿಳಿಮಲೆ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಬ್ಯಾಂಕುಗಳ ತರಬೇತಿ ಕೇಂದ್ರಗಳಲ್ಲಿ ಕನ್ನಡ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಕ್ರಮವಹಿಸಬೇಕೆಂದು ತಿಳಿಸಲಾಗಿದೆ ಎಂದಿದ್ದಾರೆ. ಈ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವೈಜ್ಞಾನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವ ಪಠ್ಯಕ್ರಮವನ್ನು ಅವಶ್ಯಕತೆಗೆ ಅನುಗುಣವಾಗಿ ಒದಗಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು