4:07 AM Thursday3 - October 2024
ಬ್ರೇಕಿಂಗ್ ನ್ಯೂಸ್
ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ ಶ್ರೀನಿವಾಸಪುರ ವಿದ್ಯಾರ್ಥಿಗಳ ವಸತಿ ನಿಲಯ ದುರವಸ್ಥೆ: ಉಪ ಲೋಕಾಯುಕ್ತರು ಗರಂ; ಸರಕಾರಿ ಆಸ್ಪತ್ರೆಗೂ… ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊದಲ ಪದವಿ ಪ್ರದಾನ; 23 ಮಂದಿ ವಿದ್ಯಾರ್ಥಿಗಳಿಗೆ… ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾ‌ಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ

ಇತ್ತೀಚಿನ ಸುದ್ದಿ

ಬಾಣಂತಿಯರ ಆಹಾರ ಸೇವನೆ: ಪೋಷಕಾಂಶಯುಕ್ತ ಆಹಾರ ಯಾವುದು? ಯಾವ ಆಹಾರ ಸೇವಿಸಬಾರದು?

16/04/2022, 07:50

ಹೆರಿಗೆಯ ನಂತರದ ಅವಧಿಯಲ್ಲಿ ಆಹಾರ ಸೇವನೆಯ ಕ್ರಮ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ.

ಹಿಂದಿನ ಕಾಲದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಅಸುರಕ್ಷಿತ ಹೆರಿಗೆಯಿಂದಾಗಿ ಗಾಯ ಒಣಗದೇ ನಂಜಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು, ಹಾಗಾಗಿ ಆಹಾರದಲ್ಲಿ ಹೆಚ್ಚಿನ ಪತ್ಯವನ್ನು ಅನುಸರಿಸುತ್ತಿದ್ದರು. ಆದರೆ ಈಗಿನ ಸುಧಾರಿತ ವೈದ್ಯಕೀಯ ಸೌಲಭ್ಯಗಳಿಂದ ಅಂತಹ ಯಾವುದೇ ರೀತಿಯ ಭಯವಿಲ್ಲ. ಆದರೆ ಇನ್ನೂ ಸಹ ನಮ್ಮಲ್ಲಿ ಹೆರಿಗೆಯ ನಂತರ ಸರಿಯಾದ ಪೋಷಕಾಂಶಯುಕ್ತ ಆಹಾರ ಸೇವಿಸಲು ಹಿಂಜರಿಯುವುದನ್ನು ನೋಡಬಹುದು.

ಮಹಿಳೆಯ ಜೀವನದಲ್ಲಿ ಹಾಲುಣಿಸುವ ಸಮಯದಲ್ಲಿ ಪೌಷ್ಠಿಕಾಂಶದ ಅವಶ್ಯಕತೆಗಳು ಇತರ ಯಾವುದೇ ವಯಸ್ಸಿನಲ್ಲಿರುವುದಕ್ಕಿಂತ ಗರಿಷ್ಠವಾಗಿರುತ್ತದೆ.ಆದ್ದರಿಂದ, ಸಮತೋಲಿತ ಆಹಾರವನ್ನು ಸೇವಿಸಬೇಕು
ki
ಕೆಲವೊಂದು ಆಹಾರ ಮಾರ್ಗಸೂಚಿಗಳು

1. ಪ್ರತಿ ಮೂರು ಗಂಟೆಗಳಿಗೊಮ್ಮೆ ಸಣ್ಣ ಪ್ರಮಾಣದಲ್ಲಿ ಊಟವನ್ನು ತೆಗೆದುಕೊಳ್ಳುವುದು.

2. ಪ್ರತಿ ಊಟದ ಸಮಯದಲ್ಲಿ, ನಿಮ್ಮ ತಟ್ಟೆಯ ಅರ್ಧದಷ್ಟು ಭಾಗವನ್ನು ವಿವಿಧ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿಸಿ.

3. ಆಹಾರದಲ್ಲಿ  ಧಾನ್ಯಗಳನ್ನು ಬಳಸಿ.

4. ಪ್ರತಿ ದಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆ. ಇದರಿಂದ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ನ ಅಂಶ ದೊರಕುತ್ತದೆ.

5. ಪ್ರತಿದಿನ  ಕಡು ಹಸಿರು ಎಲೆಗಳ ತರಕಾರಿ, ಹಣ್ಣುಗಳ ಸೇವನೆ.

6. ಮೊಟ್ಟೆ, ಮೀನು ಮತ್ತು ಕೋಳಿಯಂತಹ ಉತ್ತಮ ಗುಣಮಟ್ಟದ ಪ್ರೋಟೀನ್ ಆಹಾರಗಳನ್ನು ತೆಗೆದುಕೊಳ್ಳಿ. 

ಸಸ್ಯಾಹಾರಿಗಳು ಸೋಯಾ, ಪನೀರ್ ಮತ್ತು ಕಡಿಮೆ ಕೊಬ್ಬಿನ ಚೀಸ್ ಅನ್ನು ಆರಿಸಿಕೊಳ್ಳಿ. ಚನಾ, ರಾಜ್ಮಾ, ಬಟಾಣಿ, ಮೂಂಗ್,  ಮುಂತಾದ ಬೀನ್ಸ್ ದಿನಕ್ಕೆ ಕನಿಷ್ಠ ಒಂದು ಸರ್ವಿಂಗ್ನಷ್ಟು  ಸೇವನೆ ಒಳಿತು.

7. ಎಣ್ಣೆಯನ್ನು ಮಿತವಾಗಿ ಬಳಸಿ. 

8. ವಾಲ್ನಂಟ್ , ಪಿಸ್ತಾ, ಅಗಸೆ ಬೀಜಗಳು ಮತ್ತು ಖರ್ಜೂರ, ಅಂಜೂರದ ಹಣ್ಣುಗಳು, ಒಣದ್ರಾಕ್ಷಿಗಳಂತಹ ಒಣಗಿದ ಹಣ್ಣುಗಳು ಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು.

9. ನೀರು : ಪ್ರತಿದಿನ ಸೂಕ್ತವಾದ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡುವುದು.ನೀರಿನ ಹೊರತಾಗಿ,

ತಾಜಾ ಸೂಪ್, ಮಜ್ಜಿಗೆ ಮತ್ತು ತೆಂಗಿನ ನೀರು, ಆರೋಗ್ಯಕರ ಆಯ್ಕೆಗಳಾಗಿವೆ.

ನಿರ್ಬಂಧಿತ ಆಹಾರಗಳು :

ಚಹಾ, ಕಾಫಿಯಂತಹ ಪಾನೀಯಗಳು ಆಹಾರದ ಕಬ್ಬಿಣವನ್ನು ಅಂಶದ ಹೀರಿಕೆಯನ್ನು ಕಡಿಮೆ ಮಾಡುತ್ತದೆ  .

ಆದ್ದರಿಂದ ಊಟದ ಮೊದಲು, ಸಮಯದಲ್ಲಿ ಅಥವಾ ನಂತರ ತಕ್ಷಣ ಅವುಗಳನ್ನು ತೆಗೆದುಕೊಳ್ಳಬಾರದು.

ಉಪ್ಪಿನಕಾಯಿ, ಹೆಚ್ಚು ಉಪ್ಪುಸಹಿತ ಆಹಾರಗಳಾದ ಚಿಪ್ಸ್, ಪಪ್ಪಡ್‌ಗಳು,ಸಿಹಿತಿಂಡಿಗಳು, ತಂಪು ಪಾನೀಯಗಳು, ಚಾಕೊಲೇಟ್‌ಗಳಂತಹ ಸಕ್ಕರೆ ಮತ್ತು ಎಣ್ಣೆಯಲ್ಲಿ ಕರಿದ  ಆಹಾರಗಳನ್ನು  ಸೇವನೆ ಕಡಿತಗೊಳಿಸುವುದು.

6 ತಿಂಗಳವರೆಗೆ ವಿಶೇಷ ಸ್ತನ್ಯಪಾನ ಮಾಡುವುದು 

ದೈಹಿಕ ಚಟುವಟಿಕೆ :

ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ದೈಹಿಕವಾಗಿ ಸಕ್ರಿಯರಾಗಿರಿ.

ಈ ಎಲ್ಲಾ ಕ್ರಮಗಳನ್ನು ಅನುಸರಿಸಿದಲ್ಲಿ, ನಿಮ್ಮ ಆರೋಗ್ಯ ಹಾಗೂ ಮಗುವಿನ ಬೆಳವಣಿಗೆಗೆ ಪೂರಕವಾಗಿರುವ ಪೋಷಕಾಂಶಗಳು ದೊರೆತಂತಾಗುತ್ತದೆ ಅಲ್ಲದೆ, ತೂಕ ಕಳೆದುಕೊಳ್ಳಲು ಸಹ ಸಹಾಯಕಯಾಗಿರುತ್ತದೆ.

ಇನ್ನಾದರೂ ಸಹ ಯಾವುದೇ ಭಯವಿಲ್ಲದೇ, ಸರಿಯಾದ ಆಹಾರವನ್ನು ಸೇವಿಸಲು ತಾಯಂದಿರಿಗೆ ಪ್ರೋತ್ಸಾಹ ನೀಡಬೇಕು.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು