9:32 PM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಲಕ್ಷಾಂತರ ರೂ. ವೇತನದ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದ ವಿರಾಜಪೇಟೆಯ ಬಿ. ಟೆಕ್ ಪದವೀಧರ: ಬೆಂಗಳೂರಲ್ಲಿ ಬಂಧನ

17/07/2025, 14:45

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಬೆಂಗಳೂರಿನಲ್ಲಿ ಬಿ. ಟೆಕ್ ಪದವಿ, ವೈಟ್ ಫೀಲ್ಡ್ ನ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗ ಮಾಸಿಕ ಲಕ್ಷಕ್ಕೂ ಹೆಚ್ಚು ರೂಪಾಯಿ ಸಂಬಳ ಎಣಿಸಿಕೊಳ್ಳುತ್ತಿದ್ದ ವಿರಾಜಪೇಟೆ ಮೂಲದ ಯುವಕನೊಬ್ಬ ವಿಲಾಸಿ ಜೀವನ ನಡೆಸಲು ಇರುವ ಕೆಲಸವನ್ನು ಬಿಟ್ಟು ಹಾಡ ಹಗಲೇ ಚಿನ್ನಾಭರಣ ಮಳಿಗೆಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಮಾಲೀಕರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಯುವಕನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆಯ ನೆಹರು ನಗರ ನಿವಾಸಿ ರಿಚರ್ಡ್ (25) ಬಂಧಿತ ಆರೋಪಿಯಾಗಿದ್ದು, ಹಣದಾಸೆಗೆ ಅಪರಾಧ ಪ್ರಕರಣಗಳಲ್ಲಿ ರಿಚಾರ್ಡ್ ಭಾಗಿಯಾಗುತ್ತಿದ್ದ ಎನ್ನಲಾಗಿದ್ದು ಬಂಧಿತನಿಂದ 13 ಲಕ್ಷ ಮೌಲ್ಯದ 134 ಗ್ರಾಂ ಚಿನ್ನಭರಣ ವಶಕ್ಕೆ ಪಡೆಯಲಾಗಿದೆ.
ಮಲ್ಲೇಶ್ವರಂ ನ ಜನನಿಬಿಡ ಸಂಪಿಗೆ ರಸ್ತೆ ಯಲ್ಲಿನ ಕನಿಷ್ಕಾ ಜ್ಯುವೆಲರಿ ಶಾಪ್ ನಲ್ಲಿ ಚಿನ್ನದ ಸರ ಖರೀದಿ ನೆಪದಲ್ಲಿ ಬೇರೆ ಬೇರೆ ಡಿಸೈನ್ ತೋರಿಸವಂತೆ ಹೇಳಿ ಮೂರು ಸರ ಕಳುವು ಮಾಡಿ ಪರಾರಿಯಾಗಿದ್ದ, ಇದೇ ರೀತಿ ಬ್ಯಾತಾರಾಯಪುರ ದಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇರುವ ಕೆಲಸ ಬಿಟ್ಟು ಪೂರ್ಣವದಿ ಕಳ್ಳತನಕ್ಕೆ ಇಳಿದಿದ್ದ ರಿಚರ್ಡ್ ಪತ್ತೆಗೆ ಬಲೆ ಬೀಸಿದ್ದು, ಈತ ವಾಸವಿದ್ದ ವೈಟ್ ಫೀಲ್ಡ್ ಪಿಜಿ ನಲ್ಲಿ ಬಂಧಿಸಲಾಗಿದೆ. ಈತನ ಮೇಲೆ ಮೈಸೂರು, ಮಂಗಳೂರು, ಕೇರಳ ಸೇರಿದಂತೆ ಒಟ್ಟು 9 ಪ್ರಕರಣ ಈತನ ಮೇಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು