6:25 PM Sunday7 - June 2026
ಬ್ರೇಕಿಂಗ್ ನ್ಯೂಸ್
Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ… Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ

ಇತ್ತೀಚಿನ ಸುದ್ದಿ

ಅಥಣಿ: ಆಮ್ಲಜನಕ ಪೂರೈಕೆ, ಹಾಸಿಗೆ ವ್ಯವಸ್ಥೆ ಕುರಿತು ಡಿಸಿಎಂ ಲಕ್ಷಣ ಸವದಿ ತುರ್ತುಸಭೆ

12/05/2021, 17:35

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ  ತಾಲ್ಲೂಕಿನಲ್ಲಿ ಕೋವಿಡ್ ಉಲ್ಭಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ‌ ಸ್ಥಿತಿಗತಿಯ ಬಗ್ಗೆ ಹಾಗೂ ಆಮ್ಲಜನಕ ,ಹಾಸಿಗೆ ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಕುರಿತು , ಅಥಣಿ ಗಣ್ಯರು, ಐಎಂ ಎ ವೈಧ್ಯರು ಉನ್ನತ ಅಧಿಕಾರಿಗಳ ಜತೆ ಅಥಣಿಯಲ್ಲಿ ಡಿಸಿಎಂ

ಲಕ್ಷ್ಮಣ ಸವದಿ ತುರ್ತು  ಸಭೆ  ನಡೆಸಿದರು.

ಪಟ್ಟಣದಲ್ಲಿ ಆರ್. ಹೆಚ್. ಕುಲಕರ್ಣಿ ಸಭಾಂಗಣದಲ್ಲಿ ವೈದ್ಯರು , ಅಧಿಕಾರಿಗಳು ಮತ್ತು ವ್ಯಾಪಾರಸ್ಥರೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿ, ತುರ್ತಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಲ್ಯಾಣ ಮಂಟಪದಲ್ಲಿ  50 ಹಾಸಿಗೆಗಳ ಆಮ್ಲಜನಕ ಸಹಿತ ಆಸ್ಪತ್ರೆಯನ್ನು  ಶಿಘ್ರ ಆರಂಭಿಸುವುದು ಹಾಗೂ ಅಲ್ಲಿ  ಸಿಬ್ಬಂದಿ ನೇಮಿಸುವುದು, ತುರ್ತಾಗಿ ಇರುವ ಎಲ್ಲಾ  ಆಸ್ಪತ್ರೆಗಳಲ್ಲಿ ಆಮ್ಲಜನಕ ,ಔಷಧಿ ಗುಳಿಗೆ ಯಾವುದೇ  ಕೊರತೆಯಾಗದಂತೆ ನೊಡಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಗಂಭೀರ ಚರ್ಚೆಯಾಯಿತು. 

ಕರೊನಾ ನಿರ್ವಹಣೆಗೆ ಸಿಬ್ಬಂದಿ ನೇಮಕ ಸೇರಿ ಅಗತ್ಯ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ .ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಜನರ ಹೆಚ್ಚಳದಿಂದಾಗಿ ಬೆಡ್ ಪುಲ್ ಆಗಿವೆ . ಈ ನಿಟ್ಟಿನಲ್ಲಿ ಹೆಚ್ಚಿನ ಬೆಡ್ ಗಳಿಗಾಗಿ ಹೊಸ ಕೋವಿಡ್ ಕೇಂದ್ರ ಆರಂಭಿಸಲು ಮತ್ತು ಮುಂದಿನ ಪರಿಹಾರಗಳ ಚರ್ಚೆ ಮಾಡಿದ್ದೇವೆ . ಅಥಣಿಯಲ್ಲಿ ಸರ್ಕಾರದಿಂದ ಬರುವ ಔಷಧಗಳು ಕೊರತೆ ಆಗದಂತೆ ಸರಿಯಾದ ಸಮಯದಲ್ಲಿ ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದೇವೆ ಅಥಣಿಯಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್ ಮತ್ತು ಆಮ್ಲಜನಕ 

ಕೊರತೆ ನೀಗಿಸಿದ್ದು  ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಲ್ಯಾಣ ಮಂಟಪದಲ್ಲಿ 

ಐವತ್ತು ಬೆಡ್‌ಗಳ ಉಚಿತ ಚಿಕಿತ್ಸಾ ಕೇಂದ್ರವನ್ನಾಗಿಸುವ ಚಿಂತನೆ ನಡೆದಿದೆ . ಇದಕ್ಕೆ ಬೇಕಾದ ವೈದ್ಯಕೀಯ ಸಿಬ್ಬಂದಿ , ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲು ಎರಡು ದಿನ ಅಥಣಿಯಲ್ಲಿ ಉಳಿದು ಉಸ್ತುವಾರಿ ನಡೆಸಿ ಕೋವಿಡ್ ಕೇಂದ್ರ ನಿರ್ಮಿಸಿ ಉಚಿತವಾಗಿ ಸೇವೆ ನೀಡುವ ಕೆಲಸ ಆರಂಭಿಸಲಿದ್ದೇವೆ 

ತಾಲೂಕಿನ ಖಾಸಗಿ ವೈದ್ಯರು ಇದಕ್ಕೆ  ಸಹಕರಿಸುವ ನಂಬಿಕೆ ಇದೆ ಎಂದು ಹೇಳಿದರು .ಈಗಿರುವ ವ್ಯವಸ್ಥೆಯಲ್ಲಿ 35 ಆಕ್ಸಿಜನ್ ಕಾನ್ ಸ್ಟಂಟರ ಯಂತ್ರಗಳನ್ನು ಹೆಚ್ಚುವರಿಯಾಗಿ ಖರೀದಿಸಿದ್ದು ಬುಧವಾರ  ಯಂತ್ರಗಳು ಅಥಣಿ ತಲುಪಲಿವೆ .ಪುಣೆಯಿಂದ ಮೂವತ್ತೈದು ಏಳು ಲೀಟರ್ ಕೆಪಾಸಿಟಿ ಆಕ್ಸಿಜನ್ ಕಾನ್ ಸ್ಟಂಟರ ಮಷಿನ್ ಬರಲಿವೆ ಇನ್ನೂ ಹತ್ತು ಮಶೀನ್ ದೆಹಲಿಯಿಂದ ಬರಲಿವೆ . ಸುಮಾರು ಎಂಬತ್ತು ಸಾವಿರ ರೂಪಾಯಿ ಒಂದು ಮಷಿನ್ ಮೌಲ್ಯ ಇದೆ . ಅಷ್ಟೇ ಅಲ್ಲದೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಆಕ್ಸಿಜನ್ ಪ್ರೊಡಕ್ಷನ್ ಯುನಿಟ್ ಇರುವ ಪ್ಲಾಂಟ್ ಮಾಡಲಾಗುತ್ತಿದೆ . ದಿನವೊಂದಕ್ಕೆ ಸುಮಾರು 390 ಲೀಟರ್ ಉತ್ಪಾದನೆ ಆಗುವ ನಾಲ್ಕು ನೂರ ಬೆಡ್ ಗಳಿಗೆ ಉಪಯೋಗವಾಗಲಿದೆ ಯಾವುದೇ ಕಾರಣಕ್ಕೂ ಜನರು ಭಯಪಡಬಾರದು ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ . ಕ್ಷೇತ್ರದ ಜನತೆಯೊಂದಿಗೆ ನಾವಿದ್ದೇವೆ ಭಯಪಡುವ ಅಗತ್ಯವಿಲ್ಲ  ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು