12:04 PM Sunday10 - May 2026
ಬ್ರೇಕಿಂಗ್ ನ್ಯೂಸ್
ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ

ಇತ್ತೀಚಿನ ಸುದ್ದಿ

ಅಪ್ರಾಪ್ತ ವಯಸ್ಸಿನ 10ನೇ ತರಗತಿಯ ಬಾಲಕನ ಅಪಹರಣ; ಲೈಂಗಿಕ ಬಳಕೆ: ವಿವಾಹಿತ ಯುವತಿಯ ಬಂಧನ

23/01/2025, 12:38

ಚೆನ್ನೈ(reporterkarnataka.com): ಅಪ್ರಾಪ್ತ ವಯಸ್ಸಿನ‌ ಬಾಲಕನ ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿಯಲ್ಲಿ ಗೃಹಿಣಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು 28ರ ಹರೆಯದ ವಿನೋಧಿನಿ ಎಂದು ಗುರುತಿಸಲಾಗಿದೆ.
ಈ ಘಟನೆ ನಡೆದದ್ದು ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ. ನಾಪತ್ತೆಯಾಗಿದ್ದ 10ನೇ ತರಗತಿ ಹುಡುಗನ್ನು ಆತನ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಮಹಿಳೆ ಜತೆ ಪತ್ತೆ ಹಚ್ಚಿದ ಪೊಲೀಸರು 17 ವರ್ಷದ ಹುಡುಗನ ರಕ್ಷಣೆ ಮಾಡಿದ್ದಾರೆ.
ವಿನೋಧಿನಿ ಹಾಗೂ10ನೇ ತರಗತಿ ಹುಡುಗ ಕುಟುಂಬ ಒಂದೇ ಗ್ರಾಮದಲ್ಲಿ ವಾಸಿಸುತ್ತಿತ್ತು. ಗಂಡ ಹಾಗೂ ಇಬ್ಬರು ಮಕ್ಕಳು ಜತೆಗಿದ್ದ ವಿನೋಧಿನಿ 17ರ ಹುಡುಗನ ಪ್ರೀತಿಸಲು ಶುರು ಮಾಡಿದಳು. ಫೋನ್ ನಂಬರ್ ಪಡೆದು ಪ್ರತಿ ದಿನ ಆತನಿಗೆ ಕರೆ ಮಾಡುತ್ತಿದ್ದಳು. ಗಂಡ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಕರೆಯಿಸಿ ಹುಡುಗನ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಹುಡುಗನ ಕುಟುಂಬಸ್ಥರಿಗೆ ಈ ವಿಷಯ ತಿಳಿದಿರಲಿಲ್ಲ.
ಮೊನ್ನೆ ಶಾಲೆಗೆ ತೆರಳಿದ ಬಾಲಕ ಮನೆಗೆ ಮರಳಲಿಲ್ಲ. ರಾತ್ರಿಯಾದರೂ ಮನೆಗೆ ಮರಳಲೇ ಇಲ್ಲ. ಗಾಬರಿಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ಪೋಷಕರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಬಾಲಕನ ಗೆಳೆಯರು ಸೇರಿದಂತೆ ಹಲವರಿಂದ ಮಾಹಿತಿ ಪಡೆದರು. ಈ ವೇಳೆ ವಿನೋಧಿನಿ ಎಂಬ ಮಹಿಳೆ ವಿಷಯ ತಿಳಿಯಿತು. ಈ ಮಾಹಿತಿ ಆಧರಿಸಿದ ಪೊಲೀಸರು ಮರು ದಿನ ಬೆಳಗ್ಗೆ
ವಿನೋಧಿನಿ ಮನೆಗೆ ತೆರಳಿದಾಗ ಆಕೆಯೂ ನಾಪತ್ತೆಯಾಗಿರುವುದು ಕಂಡು ಬಂತು. ಅಲ್ಲಿಗೆ ಪೊಲೀಸರ ಅನುಮಾನ ನಿಜವಾಯಿತು. ಟವರ್ ಲೊಕೇಶನ್ ಸೇರಿದಂತೆ ಎಲ್ಲ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದರು. ಇತ್ತ ವಿನೋಧಿನಿ ತನ್ನ ಸಂಬಂಧಿಕರ ಮನೆಯನ್ನು ಬಾಡಿಗೆ ರೂಪದಲ್ಲಿ ಪಡೆದಿದ್ದಳು. ಈ ಬಾಡಿಗೆ ಮನೆಗೆ ಬಾಲಕನ ಕರೆದುಕೊಂಡು ಹೋಗಿದ್ದಾಳೆ. ಪ್ರೀತಿ ಹೆಸರಲ್ಲಿ ಬಾಲಕನ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ. ಇದೀಗ ಪೊಲೀಸರು ವಿನೋಧಿನಿಯನ್ನು ಬಂಧಿಸಿ ಬಾಲಕನ ರಕ್ಷಣೆ ಮಾಡಿದ್ದಾರೆ. ವಿನೋಧಿನಿ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಇತ್ತ ಬಾಲಕನ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ತಮಿಳುನಾಡಿನಲ್ಲಿ 2024ರಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಸತ್ಯಪ್ರಿಯಾ ಎಂಬ ಮಹಿಳೆ ತನ್ನ ಪುತ್ರನ ತರಗತಿಯ ಸಹಪಾಠಿಯನ್ನೇ ಲೈಂಗಿಕವಾಗಿ ಬಳಸಿಕೊಂಡು ಅರೆಸ್ಟ್ ಆಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು