6:20 AM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಅಪರೂಪದ ಗೊಂಬೆ ಪ್ರತಿಷ್ಠಾಪನೆ: ವಾಮಾಚಾರದ ಶಂಕೆ; ಕೌತುಕದ ಕಥೆ ಹಣೆಯುತ್ತಿರುವ ಗ್ರಾಮಸ್ಥರು

27/08/2021, 09:52

ವಿ.ಜಿ.ವೃಷಭೇಂದ್ರ  ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ತುಪ್ಪಕನಹಳ್ಳಿ ಗ್ರಾಮದ, ಹೊರವಲಯ ಅರಣ್ಯ ಪ್ರದೇಶದಲ್ಲಿ ಮಾಗಡಿಕಲ್ಲು ಕಟ್ಟೆ ಎಂಬಲ್ಲಿ ಅಪರೂಪದ ಗೊಂಬೆ ಕಂಡುಬಂದಿದ್ದು, ವಾಮಾಚಾರ ಪ್ರಯೋಗಕ್ಕಾಗಿ ಅದನ್ನು ವಿಧಿವತ್ತಾಗಿ ಪ್ರತಿಷ್ಠ‍ಾಪಿಸಲಾಗಿದೆ ಎಂದು ಗ್ರ‍ಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಕಾಲಕ್ಕೆ ಮಳೆ ಬಾರದಿದ್ದಾಗ ಅಥವಾ  ಗ್ರ‍ಾಮಕ್ಕೆ ಯಾವುದೋ ದುಷ್ಠ ಶಕ್ತಿಯ ಉಪಟಳ ಇದ್ದಾಗ, ಈ ರೀತಿಯಲ್ಲಿ  ವಾಮಾಚಾರ ಪ್ರಯೋಗದ ಮೂಲಕ ಗ್ರಾಮದಿಂದ ಹೊರಹಾಕಿ ದಿಗ್ಭಂದನ ಹಾಕಲಾಗುತ್ತದೆ ಎಂದು ಕೆಲ ಹಿರಿಯ ಗ್ರ‍ಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಗೊಂಬೆ ಪ್ರತಿಷ್ಠಾಪನೆಯನ್ನು ಯಾರು.!?ಯಾವ ಉದ್ದೇಶಕ್ಕಾಗಿ ಇಲ್ಲಿ ಪ್ರತಿಷ್ಠಾಪಿಸಿದ್ದಾರೆ..!?

ಎಂಬುದು ಇಡೀ ತುಪ್ಪಕ್ಕನಹಳ್ಳಿ ಗ್ರಾಮಸ್ಥರಲ್ಲಿ ಯಕ್ಷ ಪ್ರೆಶ್ನೆಯಾಗಿ ಮನೆ ಮಾಡಿದೆ. ಗೊಂಬೆ ಇರುವಲ್ಲಿಗೆ ತುಪ್ಪಕ್ಕನಹಳ್ಳಿ ಗ್ರಾಮಸ್ಥರು ತೀವ್ರ ಕುತೂಹಲ ಹಾಗೂ ದುಗುಡದೊಂದಿಗೆ, ಗುಂಪು ಗುಂಪಾಗಿ ದೌಡಾಯಿಸಿ ಗೊಂಬೆ ಯನ್ನು ಕಂಡು ಕೌತುಕ ಕಥೆಗಳನ್ನ ಎಣೆಯುತ್ತಿದ್ದಾರೆ. ಅಲ್ಲದೇ ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಸ್ಥರು ಗುಂಪು ಗುಂಪಾಗಿ, ಗೊಂಬೆ ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ಮುತ್ತಿಗೆ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಈ ಗೊಂಬೆ ನೋಡುಗರಲ್ಲಿ  ಕೌತುಕ ಹಾಗೂ ದುಗುಡ ಸೃಷ್ಟಿಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು