9:21 PM Monday23 - February 2026
ಬ್ರೇಕಿಂಗ್ ನ್ಯೂಸ್
ಹೊನ್ನಾರು ರಂಗೋತ್ಸವ: 26ರ ವರೆಗೆ ಕಲಾಸಕ್ತರಿಗೆ ನಾಟಕ ವೀಕ್ಷಿಸುವ ಸದಾವಕಾಶ ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು… ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಅರಣ್ಯ ಬೆಂಕಿಗೆ ಅಹುತಿ:ಅಪಾರ ಪ್ರಮಾಣದ ಬಿದಿರು… ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ…

ಇತ್ತೀಚಿನ ಸುದ್ದಿ

ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿದ ಟೈಗರ್ ಕಾರ್ಯಾಚರಣೆ ತಕ್ಷಣ ನಿಲ್ಲಿಸಿ: ಮಾಜಿ ಸಚಿವ ರಮಾನಾಥ ರೈ ಆಗ್ರಹ

04/08/2024, 19:16

ಮಂಗಳೂರು‌(reporterkarnataka.com): ಬೀದಿಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಮಹಾನಗರಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುವಂತೆ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆಗ್ರಹಿಸಿದ್ದಾರೆ.
ಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿದೆ. ಕೂಡಲೆ ಟೈಗರ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೀದಿ ಪಾಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡದೆ ಅವರ ಸೊತ್ತುಗಳನ್ನು ಜೆಸಿಬಿ ಬಳಸಿ ಧ್ವಂಸ ಮಾಡಿ ತೆರವು ಮಾಡಿರುವ ಪಾಲಿಕೆಯ ಕಾರ್ಯಾಚರಣೆ ಅನ್ಯಾಯ ಮತ್ತು ಅಮಾನವೀಯ. ಬೀದಿ ಬದಿ ವ್ಯಾಪಾರದ ಕುರಿತು ಸರಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ ಪಾಲಿಕೆಯ ಬಿಜೆಪಿ ಆಡಳಿತ ಬಡವರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡಿದೆ. ದೇಶದ ಎಲ್ಲಾ ಮಹಾ ನಗರಗಳಲ್ಲೂ ಬೀದಿ ಬದಿ ವ್ಯಾಪಾರ ಇದೆ. ಮಂಗಳೂರು ನಗರದಲ್ಲೂ ಬೀದಿ ಬದಿ ವ್ಯಾಪಾರವನ್ನು ಅವಲಂಬಿಸಿರುವ ಬಡ ವ್ಯಾಪಾರಿಗಳು ಹಾಗೂ ಖರೀದಿದಾರರಾದ ಕಡಿಮೆ ಆದಾಯದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ಹಿತಾಸಕ್ತಿಗಳನ್ನೂ ಕಾಪಾಡುವುದು ಪರವಾಗಿ ನಿಲ್ಲುವುದೂ ಸಹ ಆಡಳಿತದ ಜವಾಬ್ದಾರಿಯಾಗಿದೆ. ಟೈಗರ್ ಕಾರ್ಯಾಚರಣೆ ಬಿಜೆಪಿ ಆಡಳಿತದ ನಗರ ಪಾಲಿಕೆಯ ಬಡವರ ವಿರೋಧಿ ಮನಸ್ಥಿತಿಯ ದ್ಯೋತಕವಾಗಿದೆ‌ ಎಂದು ರೈ ಹೇಳಿದ್ದಾರೆಮ
ಮಂಗಳೂರಿನಲ್ಲಿ ಹತ್ತಾರು ಸಮಸ್ಯೆಗಳಿದ್ದು. ಡೆಂಗ್ಯು ಸೇರಿ ಹಲವು ರೋಗಗಳು ಹರಡುತ್ತಿವೆ, ಗುಡ್ಡ ಜರಿತ ಆಗುತ್ತಿದೆ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಅವಾಂತರಗಳಿವೆ, ಚರಂಡಿ ಸಮಸ್ಯೆ, ರಸ್ತೆಯಲ್ಲಿ ಮಳೆನೀರು ಹರಿಯುವುದು, ಪೈಪ್‌ಲೈನ್‌ ಸಮಸ್ಯೆಗಳಿವೆ. ಈ ಅಗತ್ಯ ಕಾರ್ಯಗಳ ಕಡೆ ಗಮನ‌ ನೀಡದೆ ಅನಗತ್ಯ ಕಾರ್ಯಗಳಿಗೆ ಮುಂದಾಗಿರುವ ಪಾಲಿಕೆಯ ಬಿಜೆಪಿ ಆಡಳಿತವು ತನ್ನ ವೈಫಲ್ಯಗಳನ್ನು ಮುಚ್ಷಿಕೊಳ್ಳಲು ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯ ಈ ದುರಾಡಳಿತವನ್ನು ನಾವು ಖಂಡಿಸುತ್ತೇವೆ. ಬೀದಿ ಬದಿ ವ್ಯಾಪಾರ ಮಾಡುವ ಬಡವರ ಅಹವಾಲುಗಳಿಗೆ ನಮ್ಮ ಬೆಂಬಲ ಇದೆ.
ಜಿಲ್ಲಾಧಿಕಾರಿ ಮತ್ತು ಪಾಲಿಕೆ ಕಮಿಷನರ್ ತಕ್ಷಣವೇ ಈ ಅನ್ಯಾಯಗಳನ್ನು ಸರಿಪಡಿಸಿ ಬಡವರಿಗೆ ನ್ಯಾಯ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು