4:34 AM Thursday6 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಅಮೆರಿಕದ ಸಾಮ್ರಾಜ್ಯಶಾಹಿತ್ವ ಜಗತ್ತಿನಲ್ಲಿ ಅಶಾಂತಿ, ಹಸಿವಿಗೆ ಕಾರಣ: ಹಿರಿಯ ಚಿಂತಕ‌ ಪ್ರೊ. ರಾಜೇಂದ್ರ ಉಡುಪ

22/02/2026, 22:11

ಮಂಗಳೂರಿನಲ್ಲಿ ಕೆಂಪು ಪುಸ್ತಕ ದಿನಾಚರಣೆ, "ಯು ಎಸ್ ಸಾಮ್ರಾಜ್ಯಶಾಹಿ - ಭಾರತದ ಜನತೆಯ ಶತ್ರು" ಪುಸ್ತಕ ಬಿಡುಗಡೆ

ಮಂಗಳೂರು(reporterkarnataka.com): ಅಮೆರಿಕ ಮತ್ತದರ ಕೂಟ ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಮಿಲಿಟರಿ ಕಾರ್ಯಾಚರಣೆ, ಹಸ್ತಕ್ಷೇಪ, ಆರ್ಥಿಕ ನೀತಿಗಳ ಮೂಲಕ ಜಗತ್ತಿನಲ್ಲಿ ವ್ಯಾಪಕವಾದ ಹಿಂಸೆ, ಹಸಿವಿಗೆ ಕಾರಣವಾಗಿದೆ. ತನ್ನ ತಾಳಕ್ಕೆ ಕುಣಿಯದ ಹಲವು ದೇಶಗಳ ಚುನಾಯಿತ ಸರಕಾರಗಳನ್ನು ಅಮೆರಿಕಾ ಕೆಡವಿದೆ, ಆಂತರಿಕ ದಂಗೆಗೆ ಪ್ರಚೋದಿಸಿ, ತನ್ನ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿದೆ. ಅಮೆರಿಕನ್ ಸಾಮ್ರಾಜ್ಯಶಾಹಿ ಕೂಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೂರನೆ ಜಗತ್ತಿನ ದೇಶಗಳ ಜನತೆ ಸೋತಿವೆ. ಎರಡನೇ ಮಹಾಯುದ್ಧದ ತರುವಾಯ ಬ್ರಿಟಿಷ್ ವಸಾಹತುಶಾಹಿಯ ಬದಲಿಗೆ ಅಮೆರಿಕಾ ದೊಡ್ಡಣ್ಣನಾಗಿ ವರ್ತಿಸುತ್ತಿದೆ. ಸೋವಿಯತ್ ಯೂನಿಯನ್ ನ ಕುಸಿತದ ತರುವಾಯ ಅಮೆರಿಕಾ ಲಂಗುಲಗಾಮಿಲ್ಲದೆ ವರ್ತಿಸುತ್ತಿದೆ. ಭಾರತದ ವರ್ತಮಾನದ ಬಿಕ್ಕಟ್ಟುಗಳಲ್ಲಿ ಅಮೆರಿಕಾದ ಪಾತ್ರವನ್ನು ನಿರಾಕರಿಸಲು ಸಾಧ್ಯವಿಲ್ಲ. ಭಾರತದ ಜನತೆಯ ನೈಜ ಶತ್ರುವಾದ ಅಮೆರಿಕನ್ ಸಾಮ್ರಾಜ್ಯಶಾಹಿಯನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹಿರಿಯ ಚಿಂತಕ, ಪ್ರೊ. ರಾಜೇಂದ್ರ ಉಡುಪ ಹೇಳಿದರು.


ಅವರು ನಗರದಲ್ಲಿ ಸಿಪಿಐಎಂ ಮಂಗಳೂರು ನಗರ ಸಮಿತಿ ಹಮ್ಮಿಕೊಂಡಿದ್ದ ಕೆಂಪು ಪುಸ್ತಕ ದಿನದಲ್ಲಿ “ಯು ಎಸ್ ಸಾಮ್ರಾಜ್ಯಶಾಹಿ, ಭಾರತದ ಜನತೆಯ ಶತ್ರು” ಪುಸ್ತಕ ಬಿಡುಗಡೆ ಮಾಡಿ ಮಾತಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಸಮುದಾಯ ರಂಗ ಚಳವಳಿಯ ವಾಸುದೇವ ಉಚ್ಚಿಲ ವಹಿಸಿದ್ದರು. ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐಎಂ ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಮಂಗಳೂರು ನಗರ ಉತ್ತರ ಸಮಿತಿಯ ಕಾರ್ಯದರ್ಶಿ ಪ್ರಮೀಳಾ ಕೆ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು