4:19 AM Saturday20 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

America | ವೈಟ್ ಹೌಸ್ ಡಿನ್ನರ್ ಗುಂಡಿನ ದಾಳಿ: ಶರ್ಟ್ ಇಲ್ಲದೆ ನೆಲದ ಮೇಲೆ ಮಲಗಿದ್ದ ಶಂಕಿತನ ಮೊದಲ ಫೋಟೊ ಬಿಡುಗಡೆ

26/04/2026, 10:54

ವಾಷಿಂಗ್ಟನ್‌ (reporterkarnataka.com): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಪಾಲ್ಗೊಂಡಿದ್ದ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್’ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿದ ಶಂಕಿತನ ಮೊದಲ ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳನ್ನು ಸ್ವತಃ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ರಷ್ಯಾ ಬೆಂಬಲಿತ ಸುದ್ದಿ ವಾಹಿನಿ ‘ಆರ್‌ಟಿ’ (RT) ಮತ್ತು ಇತರೆ ಜಾಲತಾಣಗಳಲ್ಲಿ ಶಂಕಿತನ ಫೋಟೊಗಳು ವೈರಲ್ ಆಗಿವೆ. ಬಿಡುಗಡೆಯಾಗಿರುವ ಚಿತ್ರದಲ್ಲಿ, ಶಂಕಿತನು ಶರ್ಟ್ ಧರಿಸಿಲ್ಲ ಮತ್ತು ಆತನ ದೇಹದ ಕೆಳಭಾಗವನ್ನು ಹೊದಿಕೆಯಿಂದ ಮುಚ್ಚಲಾಗಿದೆ. ಆತನನ್ನು ಭದ್ರತಾ ಸಿಬ್ಬಂದಿ ನೆಲಕ್ಕೆ ಅಪ್ಪಚ್ಚಿ ಮಾಡಿ ಹಿಡಿದುಕೊಂಡಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.

*31 ವರ್ಷದ ಶಂಕಿತನ ಗುರುತು ಪತ್ತೆ:*
ಬಂಧಿತ ಶಂಕಿತನನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್ ಮೂಲದ 31 ವರ್ಷದ ಕೋಲ್ ಟೊಮಾಸ್ ಅಲೆನ್ ಎಂದು ಗುರುತಿಸಲಾಗಿದೆ. ಶಸ್ತ್ರಸಜ್ಜಿತನಾಗಿದ್ದ ಈತ, ಕಾರ್ಯಕ್ರಮ ನಡೆಯುತ್ತಿದ್ದ ಹೋಟೆಲ್‌ನ ಪ್ರವೇಶ ದ್ವಾರದಲ್ಲಿ ಭದ್ರತೆಯನ್ನು ಭೇದಿಸಿ ಒಳನುಗ್ಗಲು ಯತ್ನಿಸುವಾಗ ಗುಂಡು ಹಾರಿಸಿದ್ದಾನೆ. ದಾಳಿಕೋರನು ಹೋಟೆಲ್‌ನ ಅತಿಥಿಯಾಗಿದ್ದ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ಈತ ಏಕಾಂಗಿಯಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

*ಬೆಚ್ಚಿಬಿದ್ದಿದ್ದ ಗಣ್ಯರು, ಅಧಿಕಾರಿಗೆ ಗಾಯ:*
ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಭೋಜನಕೂಟದಲ್ಲಿದ್ದ ಗಣ್ಯರು “ಕೆಳಗೆ ಬಗ್ಗಿ.. ಕೆಳಗೆ ಬಗ್ಗಿ ಎಂದು ಕಿರುಚುತ್ತಾ, ಪ್ರಾಣ ರಕ್ಷಣೆಗಾಗಿ ಟೇಬಲ್‌ಗಳ ಕೆಳಗೆ ಅವಿತುಕೊಂಡಿದ್ದರು. ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ತಕ್ಷಣವೇ ಟ್ರಂಪ್ ದಂಪತಿ ಮತ್ತು ಸಂಪುಟದ ಸದಸ್ಯರನ್ನು ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸಿದರು. ಈ ಗುಂಡಿನ ಚಕಮಕಿಯಲ್ಲಿ ಭದ್ರತಾ ಅಧಿಕಾರಿಯೊಬ್ಬರ ರಕ್ಷಣಾ ಕವಚಕ್ಕೆ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೆಲ್ಲದರ ನಡುವೆ ಭದ್ರತಾ ಪಡೆಗಳು ಅತ್ಯಂತ ಶೌರ್ಯದಿಂದ ಕಾರ್ಯನಿರ್ವಹಿಸಿದ್ದು, ಶಂಕಿತನನ್ನು ತಕ್ಷಣವೇ ಸೆರೆಹಿಡಿಯಲಾಗಿದೆ ಎಂದು ಟ್ರಂಪ್ ಅವರು ಭದ್ರತಾ ಸಿಬ್ಬಂದಿಯ ಕಾರ್ಯವನ್ನು ಕೊಂಡಾಡಿದ್ದಾರೆ. ಪ್ರಸ್ತುತ ಎಫ್‌ಬಿಐ ಮತ್ತು ಸೀಕ್ರೆಟ್ ಸರ್ವಿಸ್ ಜಂಟಿಯಾಗಿ ಘಟನೆಯ ಕುರಿತು ತೀವ್ರ ತನಿಖೆ ನಡೆಸುತ್ತಿವೆ.

ಇತ್ತೀಚಿನ ಸುದ್ದಿ

ಜಾಹೀರಾತು