11:43 AM Thursday6 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಹಸಿರು ಉಸಿರು: ಐಎಸ್ ಸಿ ಮಂಗಳೂರು ಲೀಜೆನ್ ನಿಂದ ರಸ್ತೆ ವಿಭಾಜಕದಲ್ಲಿ ಗಿಡ ನೆಡುವ ಕಾರ್ಯಕ್ರಮ

14/11/2021, 18:16

ಮಂಗಳೂರು( reporterkarnataka.com):

ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಲೀಜೆನ್, ಮಂಗಳೂರು ಬ್ಲೂಂ ಹಾಗೂ ಲಯನ್ಸ್ ಕ್ಲಬ್ ಬಲ್ಮಠ ಇದರ ಸಂಯುಕ್ತಾಶ್ರಯದಲ್ಲಿ ನಗರದ ಅಶೋಕನಗರ ಅಂಚೆ ಕಚೇರಿಗೆ ಹಾದು ಹೋಗುವ ರಸ್ತೆ ವಿಭಾಜಕದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.

ಮುಂಜಾನೆ 7.30 ರಿಂದ 9.30ರ ವರೆಗೆ ಈ ಕಾರ್ಯಕ್ರಮ ನಡೆದಿದ್ದು 105 ಗಿಡಗಳನ್ನು ನೆಟ್ಟು ನೀರುಣಿಸಲಾಯಿತು.  

ಗಿಡ ನೆಡುವ ಕಾರ್ಯಕ್ರಮದ ಮುಂದಾಳತ್ವವನ್ನು ಇಂಡಿಯನ್ ಸೀನಿಯರ್ ಚೇಂಬರ್ ಅಧ್ಯಕ್ಷ

ಹರಿಪ್ರಸಾದ್ ರೈ  ಅವರು ವಹಿಸಿ ಎಲ್ಲರನ್ನು ಹುರಿದುಂಬಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 85ರ ಹರೆಯದ ಪರಿಸರವಾದಿ ಕೃಷ್ಣಪ್ಪ ಅವರು 

ಅತ್ಯಂತ ಉತ್ಸಾಹದಿಂದ ಗುಂಡಿಯನ್ನು ತೋಡಿ ಗಿಡವನ್ನು ನೆಟ್ಟು ನಮಗೆಲ್ಲ ಮಾದರಿಯಾದರು. ಗಿಡ ನೆಡುವ ಯಾವುದೇ ಕಾರ್ಯಕ್ರಮವಿದ್ದರೆ ಅಲ್ಲಿ ಅವರು ಹಾಜರಾಗಿ ತಮ್ಮ ಕೈಯ್ಯಾರೆ ಗಿಡವನ್ನು ನೆಡುತ್ತಾರೆ.  ಅವರ ಈ ಉತ್ಸಾಹವನ್ನು ನೋಡಿದಾಗ ಅವರಿಗೆ ಪರಿಸರದ ಮೇಲಿನ ಕಾಳಜಿ ಅರ್ಥವಾಗುತ್ತದೆ. ಮಂಗಳೂರಿನವರಾದ ಇವರನ್ನು ಸರಕಾರವು ಗುರುತಿಸಿ ಈ ಹಿರಿ ಜೀವವನ್ನು ಗೌರವಿಸುವುದು ಅತೀ ಮುಖ್ಯ. 

ಇಂದಿನ ಈ ಕಾರ್ಯಕ್ರಮಕ್ಕೆ ಗಿರಿಜಾ ಟ್ರಸ್ಟ್‌ ನವರು ಸಹಕಾರ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು