4:46 PM Saturday22 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

Mangaluru | ಕುಡ್ಲ ಟ್ರೋಫಿ ಕ್ರಿಕೆಟ್ ಪಂದ್ಯಾಟ: ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಚಾಂಪಿಯನ್

18/12/2025, 11:28

ಮಂಗಳೂರು(reporterkarnataka.com): ವಾಮಂಜೂರಿನ ಸಂತೋಷನಗರ ಮೈದಾನದಲ್ಲಿ ಎಸ್‌.ಜೆ.ಸಿ. ಫ್ರೆಂಡ್ಸ್ ವಾಮಂಜೂರು, ರೊ ಇಂಟರ್‌ನ್ಯಾಷನಲ್ ಹಾಗೂ ಗಜಾನನ ಕ್ರಿಕೆಟರ್ಸ್ (ಪ್ರಜ್ವಲ್ ಫಿಲ್ಮ್ಸ್) ಪ್ರಾಯೋಜಕತ್ವದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಹಂತದ ಎರಡು ದಿನಗಳ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾಟವು ಡಿಸೆಂಬರ್ 13 ಮತ್ತು 14ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈ ಪಂದ್ಯಾಟದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳಿಂದ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಕ್ರಿಕೆಟ್ ತಂಡವು ಕುಡ್ಲ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಂ ಪಾಲಡ್ಕಾ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.



ಪಂದ್ಯಗಳನ್ನು ನ್ಯಾಯಸಮ್ಮತವಾಗಿ ನಡೆಸುವಲ್ಲಿ ಅಂಪೈರ್‌ಗಳು ಆಗಿ ರಾಜೇಶ್ ಪಡಿಲ್, ಸೈಫ್ ಬಜಾಲ್, ರಂಜೇಶ್ ಉಚಿಲ್, ಆರಿಫ್ ಜೋಕಟ್ಟೆ ಹಾಗೂ ಅಶ್ವತ್ ಕುಂಪಲ ಅವರು ನಿಷ್ಠೆಯಿಂದ ಹಾಗೂ ನಿಯಮಾನುಸಾರವಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದರು.
ಪಂದ್ಯದ ಪ್ರತಿಯೊಂದು ಹಂತವನ್ನೂ ರೋಚಕವಾಗಿಸುವಂತೆ ರಾಜೇಶ್ ಪೆರೇರಾ ಹಾಗೂ ಸಯ್ಯಾದ್ ಗುರುಕಂಬಳ ಅವರು ಮನಮೋಹಕ ಹಾಗೂ ವಿವರವಾದ ಕಾಮೆಂಟ್ರಿ ನೀಡಿದರು. ಆಟಗಾರರು, ಆಯೋಜಕರು ಹಾಗೂ ಪ್ರೇಕ್ಷಕರ ಉತ್ತಮ ಸಹಕಾರದಿಂದ ಕ್ರಿಕೆಟ್ ಪಂದ್ಯಾಟವು ಯಶಸ್ವಿಯಾಗಿ ಹಾಗೂ ಸಾರ್ಥಕವಾಗಿ ಸಂಪನ್ನವಾಯಿತು. ಕ್ರೀಡಾಭಿಮಾನಿಗಳಿಗೆ ಅನೇಕ ರೋಚಕ ಕ್ಷಣಗಳನ್ನು ನೀಡಿದ ಈ ಪಂದ್ಯಾಟವು ರೋಹನ್ ವಾಮಂಜೂರು, ಸೋಹನ್, ರೊಲ್ವಿನ್, ಮಧು, ಪ್ರಜ್ನಾ ಹಾಗೂ ಸ್ವೀಟಿ ಅವರ ಸಮರ್ಥ ಮುಂದಾಳತ್ವ ಮತ್ತು ಉತ್ತಮ ವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.

ಇತ್ತೀಚಿನ ಸುದ್ದಿ

ಜಾಹೀರಾತು