7:43 PM Sunday13 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

Mangaluru | ಪಾಲ್ದನೆ ಚರ್ಚ್ ನಲ್ಲಿ ಐಸಿವೈಎಂ ವತಿಯಿಂದ ಯುವೋತ್ಸವ

04/11/2025, 18:42

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಯುವಕರ ಸಂಘಟನೆ ಐ.ಸಿ. ವೈ. ಎಂ. ವತಿಯಿಂದ ಯುವೋತ್ಸವ ಕಾರ್ಯಕ್ರಮ ನಡೆಯಿತು.
ಚರ್ಚ್ ಪಾಲನಾ ಸಮಿತಿಯ ಸದಸ್ಯೆ ಹಾಗೂ ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ (ಪ್ರೆಸ್ಸಿ)ಅವರು ಮುಖ್ಯ ಅತಿಥಿಯಾಗಿದ್ದರು. ಅವರು ಮಾತನಾಡಿ ಯುವ ಶಕ್ತಿಯು ಅದ್ಭುತ ಶಕ್ತಿಯಾಗಿದೆ. ಸಮುದಾಯ, ಸಮಾಜ ಮತ್ತು ದೇಶದಲ್ಲಿ ಯುವಜನರು ಇದ್ದಲ್ಲಿ , ಯಾವುದೇ ಕೆಲಸಗಳು ಕಷ್ಟವಿಲ್ಲದೆ ನಡೆಯುತ್ತವೆ. ಯುವಜನರು ಒಂದಾಗಿ ಒಳ್ಳೆಯ ಉದ್ದೇಶಕ್ಕಾಗಿ ತಮ್ಮ ಶಕ್ತಿಯನ್ನು ವಿನಿಯೋಗಿಸಿದರೆ ಸಮೃದ್ಧಿಯು ನೆಲೆ ಕಾಣುತ್ತದೆ. ಈ ನಿಟ್ಟಿನಲ್ಲಿ ಪಾಲ್ದನೆ ಚರ್ಚ್ ನ ಐ.ಸಿ.ವೈ.ಎಂ. ಸಂಘಟನೆ ನಂಬರ್ ವನ್ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರೆಸಿಲ್ಲಾ ಫೆರ್ನಾಂಡಿಸ್‌ ಅವರನ್ನು ಅವರು ನೀಡುತ್ತಿರುವ ವಿವಿಧ ಸೇವೆಗಾಗಿ ಫಲ ಪುಷ್ಪಗಳನ್ನಿತ್ತು ಐಸಿವೈಎಂ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಶುಭ ಹಾರೈಸಿದರು. ವಂದನೀಯ ಫಾ. ಅಶ್ವಿನ್ ಕಾರ್ಡೋಜಾ ಮತ್ತು ವಂದನೀಯ ಫಾ. ಲಾರೆನ್ಸ್ ಕುಟಿನ್ಹಾ ಕಾರ್ಯಕ್ರಮಕ್ಕೆ ಸಹಕರಿಸಿದರು.

ಐ.ಸಿ.ವೈ.ಎಂ. ಸಿಟಿ ವಲಯದ ಅಧ್ಯಕ್ಷ ರಾಯನ್ ನೊರೊನ್ಹಾ, ಐ.ಸಿ.ವೈ.ಎಂ. ಪಾಲ್ದನೆ ಘಟಕದ ಅಧ್ಯಕ್ಷರಾದ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ಮಿಶೆಲ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಐ.ಸಿ.ವೈ.ಎಂ. ಸಂಚಾಲಕ ಹಾಗೂ ಮದರ್ ತೆರೆಸಾ ವಾರ್ಡ್ ನ ಮುಖ್ಯಸ್ಥ ರೋಶನ್ ಮೊಂತೇರೊ ಉಪಸ್ಥಿತರಿದ್ದರು. ಸಂಘಟನೆಯ ಸದಸ್ಯರು ವಿವಿಧ ವಿನೋದಾವಳಿಗಳನ್ನು ಪ್ರಸ್ತುತ ಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು