12:46 AM Tuesday13 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜು ಎಂಬಿಬಿಎಸ್‌ 27ನೇ ಬ್ಯಾಚ್‌ ಶೈಕ್ಷಣಿಕ ವರ್ಷಕ್ಕೆ ಚಾಲನೆ: ವೈಟ್‌ ಕೋಟ್‌ ಸಮಾರಂಭ

11/10/2025, 20:33

ಮಂಗಳೂರು(reporterkarnataka.com): ನಗರದ ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ವಿದ್ಯಾರ್ಥಿಗಳ ಈ ಸಾಲಿನ 27ನೇ ಬ್ಯಾಚ್‌ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವುದು ಹಾಗೂ ವೈಟ್‌ ಕೋಟ್‌ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆಥೋಲಿಕ್ ಶೈಕ್ಷಣಿಕ ಮಂಡಳಿಯ ಕಾರ್ಯದರ್ಶಿ ವಂ.ಡಾ|ಲಿಯೋ ಲಸ್ರಾಡೊ ಅವರು ಮಾತನಾಡುತ್ತಾ ಮೂರು ದಶಕಗಳ ಹಿಂದೆ ವೈದ್ಯರಾಗುವುದಕ್ಕೆ ತಮಗೆ ಇದ್ದ ಉತ್ಸಾಹವನ್ನು ನೆನಪಿಸಿಕೊಂಡು, ನನಗೆ ಆ ಕನಸು ನನಸಾಗಿಸಲು ಅಸಾಧ್ಯವಾದರೂ ವೈದ್ಯಕೀಯ ವೃತ್ತಿ ಬಗ್ಗೆ ಎಂದೆಂದೂ ಗೌರವ ಹೊಂದಿದ್ದೇನೆ ಎಂದರು.
ವಿದ್ಯಾರ್ಥಿಗಳು ಯಾವಾಗಲೂ ಜೀವನ ಪರ್ಯಂತ ಕಲಿಕೆ ಹಾಗೂ ಸೇವೆಯ ಪ್ರಯಾಣವನ್ನು ತಮ್ಮದಾಗಿಸಿಕೊಳ್ಳಬೇಕು, ಇತರರ ನೋವುಗಳನ್ನು ಅರಿತುಕೊಂಡು ಅವರಿಗಾಗಿ ಸೇವೆ ಸಲ್ಲಿಸುವುದರತ್ತ ಗಮನ ಹರಿಸಬೇಕು, ಅಲ್ಲದೆ ತಮ್ಮ ಹೆತ್ತವರ ಹಾಗೂ ಹಿತೈಷಿಗಳ ತ್ಯಾಗಗಳನ್ನು ಮರೆಯಬಾರದು, ಭಗವಂತನ ಮಾರ್ಗದರ್ಶನವನ್ನು ಎಂದಿಗೂ ಕೈಬಿಡಬಾರದು ಎಂದು ಸಲಹೆ ನೀಡಿದರು.
ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜು ಚಿಕಿತ್ಸೆಯ ತನ್ನ ದೈವೀಕ ಅಭಿಯಾನವನ್ನು ಮುಂದುವರಿಸುತ್ತಾ ಬಂದಿದೆ, ಯಾವುದೇ ಲಾಭ ನಷ್ಟದ ಬಗ್ಗೆ ಚಿಂತಿಸದೆ ಸೇವಾ ನಿರತವಾಗಿರುವುದು ಶ್ಲಾಘನೀಯ ಎಂದರು.
ಫಾ.ಮುಲ್ಲರ್ಸ್‌ ಚಾರಿಟಬಲ್‌ ಟ್ರಸ್ಟ್‌ ನಿರ್ದೇಶಕ ವಂ.ಫಾ.ಫಾವೊಸ್ತಿನ್‌ ಲ್ಯೂಕಸ್‌ ಲೋಬೊ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ದೈವಿಕ ಶಕ್ತಿಯ ಕರೆಯನ್ನು ಸ್ವೀಕರಿಸಿ ಆರೈಕೆ, ಚಿಕಿತ್ಸೆಯ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದೀರಿ, ಇದು ಕೇವಲ ಜ್ಞಾನ ಮಾತ್ರವಲ್ಲದೆ ಅನುಭೂತಿ, ಮಾನವೀಯತೆ ಹಾಗೂ ನಂಬಿಕೆಯನ್ನೂ ಕೇಳುತ್ತದೆ ಎಂದು ನೆನಪಿಸಿದರು.
ವೈದ್ಯಕೀಯ ವೃತ್ತಿಗೆ ಹೊಸದಾಗಿ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳ ಸೇರ್ಪಡೆಯನ್ನು ಸಂಕೇತಿಸುವ ವೈಟ್‌ ಕೋಟ್‌ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಘಟಕ ಮುಖ್ಯಸ್ಥ ಪ್ರೊ.ಡಾ.ನಾಗೇಶ್‌ ಕೆ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲಬಾರಿಗೆ ವೈದ್ಯರು ಧರಿಸುವ ವೈಟ್‌ ಕೋಟ್‌ ಧರಿಸುವ ಮೂಲಕ ವಿದ್ಯಾರ್ಥಿಗಳು ಹೆಮ್ಮೆ ವ್ಯಕ್ತಪಡಿಸಿ, ಆರೈಕೆ, ಚಿಕಿತ್ಸೆಯ ಪವಿತ್ರ ಜವಾಬ್ದಾರಿ ನಿರ್ವಹಿಸುವ ಪ್ರತಿಜ್ಞೆ ಸ್ವೀಕರಿಸಿದರು.
ಸಮಾರಂಭದ ಭಾಗವಾಗಿ ಫಾ.ಮುಲ್ಲರ್ಸ್‌ ಆಸ್ಪತ್ರೆಯ ಆಡಳಿತಾಧಿಕಾರಿ ಫಾ.ಜಾರ್ಜ್‌ ಜೀವನ್‌ ಸಿಕ್ವೇರ ಅವರು ಪ್ಲಾಸ್ಟಿಕ್‌ ಫ್ರೀ ಕ್ಯಾಂಪಸ್‌ ಅಭಿಯಾನಕ್ಕೆ ಚಾಲನೆ ನೀಡಿದರು.
ಫಾ.ಮುಲ್ಲರ್ಸ್‌ ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ವಂ.ಡಾ.ಮೈಕೇಲ್‌ ಸಾಂತುಮಯೊರ್‌ ಸ್ವಾಗತಿಸಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಆಂಟನಿ ಸಿಲ್ವನ್‌ ಡಿʼಸೋಜ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು