2:12 PM Friday13 - March 2026
ಬ್ರೇಕಿಂಗ್ ನ್ಯೂಸ್
ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ

ಇತ್ತೀಚಿನ ಸುದ್ದಿ

ಮಡಿಕೇರಿ ಸಾರಿಗೆ ಬಸ್‌ ಡಿಪೋ ಎದುರು ನಿರ್ಮಿಸಲಾದ ಅನಧಿಕೃತ ಶೆಡ್‌ ತೆರವಿಗೆ ನಗರಸಭೆ ನೋಟಿಸ್

28/09/2025, 19:44

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnata@ggnail.com

ಮಡಿಕೇರಿ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-275ರ ಸರಪಳಿ ಕಿ.ಮೀ 1.00 ರಲ್ಲಿ ಬಲಭಾಗದಲ್ಲಿ ಬರುವ ಸರ್ವೆ ನಂ 53/6 ರ ಸ್ವತ್ತಿನಲ್ಲಿ 3 ಶೆಡ್‌ ಗಳ ನಿರ್ಮಾಣಕ್ಕೆ ತಾತ್ಕಾಲಿಕ ಅನುಮತಿ ಪಡೆದು ಅನಧಿಕೃತವಾಗಿ ಹೆಚ್ಚುವರಿಯಾಗಿ ನಿರ್ಮಿಸಲಾದ ತಾತ್ಕಾಲಿಕ ಶೆಡ್‌ ಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ಮಡಿಕೇರಿ ನಗರಸಭೆಯ ಪೌರಾಯುಕ್ತರು ನೋಟಿಸ್ ನೀಡಿದ್ದಾರೆ. ಅನಧಿಕೃತ ವಾಣಿಜ್ಯ ಶೆಡ್ ಗಳನ್ನು ನಿರ್ಮಿಸಿಕೊಂಡು ರಸ್ತೆ ಜಾಗವನ್ನು ಬಳಸಿಕೊಂಡು ನಗರಸಭೆ ಪರವಾನಿಗೆ ಇಲ್ಲದೇ ವ್ಯವಹಾರ ಮಾಡುತ್ತಿರುವುದನ್ನು ಪ್ರಶ್ನಿಸಿ ಕಾನೂನು ಕ್ರಮ ವಹಿಸಲು ಕೊಡಗು ಅಭಿವೃದ್ಧಿ ಸಮಿತಿ ಮಡಿಕೇರಿ ಸೆ.11-2025ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು.
ತಾತ್ಕಾಲಿಕ ಶೆಡ್‌ ಗಳ ನಿರ್ಮಾಣದ ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಹೆಚ್ಚುವರಿ ಶೆಡ್‌ ಗಳನ್ನು ತೆರವುಗೊಳಿಸಲು ತಿಳುವಳಿಕೆ ಪತ್ರ ನೀಡಲಾಗಿತ್ತು. ಆದರೆ ಅನಧಿಕೃತವಾಗಿ ಹೆಚ್ಚುವರಿಯಾಗಿ ನಿರ್ಮಿಸಿಕೊಂಡಿರುವ ಶೆಡ್‌ಗಳನ್ನು ತೆರವುಗೊಳಿಸದೆ, ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ಇದೂ ಕರ್ನಾಟಕ ಪೌರಸಭೆಗಳ ಅಧಿನಿಯಮ ಸೆಕ್ಷನ್ 187 ಮತ್ತು 256 ರ ಪ್ರಕಾರ ಕಾನೂನು ವಿರುದ್ಧವಾಗಿರುತ್ತದೆ.
ಈ ಕಛೇರಿಯಿಂದ ನೀಡಿದ ಅನುಮತಿ ಅಳತೆಯಂತೆ 3 ಶೆಡ್‌ ಗಳ ನಿರ್ಮಾಣಕ್ಕೆ ಅನುಮತಿ ಪಡೆದು ಹೆಚ್ಚುವರಿಯಾಗಿ ನಿರ್ಮಿಸಿದ ಶೆಡ್‌ ಗಳನ್ನು 7 ದಿವಸಗೊಳಗಾಗಿ ತೆರವುಗೊಳಿಸಿ ಛಾಯ ಚಿತ್ರದೊಂದಿಗೆ ಈ ಕಛೇರಿಗೆ ಲಿಖಿತ ಮಾಹಿತಿ ನೀಡುವುದು ತಪ್ಪಿದಲ್ಲಿ, ನಗರಸಭೆ ವತಿಯಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಸೆಕ್ಷನ್ 137 ಮತ್ತು 256ರ ಉಲ್ಲಂಘನೆ ಮಾಡಿರುವುದಕ್ಕೆ ಕಾನೂನು ಕ್ರಮ ಕೈಗೊಂಡು ಅನಧಿಕೃತವಾಗಿ ನಿರ್ಮಿಸಿರುವ ಹೆಚ್ಚುವರಿ ಶೆಡ್‌ ಗಳನ್ನು ತೆರವುಗೊಳಿಸಿ ಸದ್ರಿ ವೆಚ್ಚವನ್ನು ನಿಮ್ಮಿಂದ ಬಾಕಿ ಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಸಮಬಂಧಿಸಿದ ಶ್ರೀಮತಿ ಪೊನ್ನಚ್ಚೇಟಿರ ದೇಚಮ್ಮ ಕಾರ್ಯಪ್ಪ, ಪೊನ್ನಚ್ಚೇಟಿರ ಕಾರ್ಯಪ್ಪ ವಿನಯ್, ಸೊನ್ನಭೇಟಿರ ಕಾರ್ಯಪ್ಪ ತಮ್ಮಯ್ಯ ನಗರಸಭೆ ಪೌರಾಯುಕ್ತರು ನೋಟಿಸ್ ಜಾರಿಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು