7:59 PM Wednesday11 - March 2026
ಬ್ರೇಕಿಂಗ್ ನ್ಯೂಸ್
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ: ಚುನಾವಣೆ ಸಮಯದಲ್ಲಿ ರಾಮ ರಾಮ; ವರ್ಷವಾದ ನಂತರ ರಾಮನಿಗೆ ನಾಮ..!?

22/01/2025, 13:35

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಕಳೆದ ವರ್ಷ 2024ರ ಜನವರಿ 22ರಂದು ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು.
ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆ ಅತ್ಯಂತ ವೈಭವದಿಂದ ನಡೆದಿತ್ತು. ಇದರ ಹಿನ್ನಲೆ ಪ್ರತಿ ಊರು, ಗ್ರಾಮ ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಮುಖಂಡರ ನೇತೃತ್ವದಲ್ಲಿ ಪೂಜೆ ಪುನಸ್ಕಾರ ನಡೆದವು. ಆದರೆ ಈ ಬಾರಿ ಅವೆಲ್ಲವೂ ಮಾಯವಾಗಿವೆ.!
ಹೌದು, ತೀರ್ಥಹಳ್ಳಿಯ ರಥಬೀದಿಯಲ್ಲಿರುವ ಸಮಗೋಡು ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಕಳೆದ ಬಾರಿ ರಾಜಕೀಯ ಮುಖಂಡರ ನೇತೃತ್ವದಲ್ಲಿ ಪೂಜೆ, ಹೋಮ, ಹವನ, ದೇವರಿಗೆ ವಿಶೇಷ ಅಲಂಕಾರ ಎಲ್ಲವನ್ನು ಮಾಡಲಾಗಿತ್ತು. ಅಷ್ಟೇ ಅಲ್ಲದೆ ದೇವಸ್ಥಾನದ ಸುತ್ತ ಮುತ್ತಲೂ ಸ್ವಚ್ಛತೆ ಮಾಡಲಾಗಿತ್ತು. ಆದರೆ ಈ ಬಾರಿ ದೇವಸ್ಥಾನ ಸಂಪೂರ್ಣ ಖಾಲಿ ಖಾಲಿ ಆಗಿದೆ. ಶ್ರೀ ರಾಮನ ವಾರ್ಷಿಕೋತ್ಸವದ ಹಿನ್ನಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಇದೆ ಎಂದು ಭಾವಿಸಿದ್ದ ಹಲವಾರು ಭಕ್ತರು ವಾಪಸಾಗಿದ್ದಾರೆ. ಅಲ್ಲಿಗೆ ರಾಜಕೀಯ ಮುಖಂಡರಿಗೆ ದೇವರು ಬರಿ ಚುನಾವಣೆ ಸಮಯದಲ್ಲಿ ಮಾತ್ರ ನೆನಪಾಗುವುದು, ಚುನಾವಣೆ ಸಮಯದಲ್ಲಿ ಪೂಜೆ ಪುನಸ್ಕಾರ ಮಾಡುವುದು ಅದನ್ನು ಬಿಟ್ಟರೆ ಮತ್ತೆ ಐದು ವರ್ಷದ ನಂತರ ಎಂದು ಅಲ್ಲಿಗೆ ಆಗಮಿಸಿದ್ದ ಭಕ್ತರು ಹೇಳಿದ್ದಾರೆ. ಕಳೆದ ಬಾರಿ ಕೋದಂಡರಾಮ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುತ್ತೇವೆ. ಇಲ್ಲಿಗೂ ಭಕ್ತರು ಆಗಮಿಸಬೇಕು, ಪೂಜೆ ಪುನಸ್ಕಾರ ನಡೆಯಬೇಕು ಎಂದೆಲ್ಲಾ ಹೇಳಿದ್ದರು. ಈಗ ಅದ್ಯಾವುದು ಇಲ್ಲವಾಗಿದೆ.
ಒಟ್ಟಿನಲ್ಲಿ ಚುನಾವಣೆ ಸಮಯದಲ್ಲಿ ರಾಮ ರಾಮ ಎನ್ನುತ್ತಾರೆ ಅದೇ ಒಂದೇ ವರ್ಷದ ನಂತರ ರಾಮನಿಗೆ ನಾಮ ಹಾಕುತ್ತಾರೆ ಎಂದು ರಾಜಕೀಯ ಮುಖಂಡರಿಗೆ ಅಲ್ಲಿನ ಭಕ್ತರೊಬ್ಬರೋ ಆಕ್ರೋಶಭರಿತರಾಗಿ ಮಾತನಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು