6:31 AM Sunday6 - October 2024
ಬ್ರೇಕಿಂಗ್ ನ್ಯೂಸ್
ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ

ಇತ್ತೀಚಿನ ಸುದ್ದಿ

ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಸಂಪೂರ್ಣ ಬೆಂಬಲ

04/10/2024, 21:44

ಮಂಗಳೂರು(reporterkarnataka.com):ಕರಾವಳಿ ಭಾಗದ ಜನರ ಹಾಗೂ ಸಂಘಟನೆಗಳ ಸಾಕಾರದೊಂದಿಗೆ “ಕರಾವಳಿ ಹೈಕೋರ್ಟ್ ಪೀಠ” ಸ್ಥಾಪನೆ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಂಗಳೂರು ವಕೀಲರ ಸಂಘ ದೊಡ್ಡ ಮಟ್ಟದ ಹೋರಾಟಕ್ಕೆ ಹೆಜ್ಜೆಯ ನೀಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಇರತಕ್ಕಂತಹ ಎಲ್ಲಾ ಸಂಘಟನೆಗಳ ಸಂಸ್ಥೆಗಳ ಬೆಂಬಲವನ್ನು ಕೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬಲಿಷ್ಠ ಕಾರ್ಮಿಕ ಸಂಘಟನೆ ಇಂಟಕ್ ಬೆಂಬಲವನ್ನು ಕೇಳುವ ದೃಷ್ಟಿಯಲ್ಲಿ ಪೀಠದ ಹೋರಾಟ ಸಮಿತಿಯ ಸದಸ್ಯರು ಕೇಂದ್ರ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದರು.

ಈ ಸಭೆಯಲ್ಲಿ ಸಮಿತಿಯ ಸಂಚಾಲಕರಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವಕೀಲರ ಸಂಘದ ಅಧ್ಯಕ್ಷ ಎಚ್. ವಿ ರಾಘವೇಂದ್ರ, ಹಿರಿಯ ವಕೀಲರಾದ ಎಂ.ಪಿ. ನೋರೊನ್ನ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್, ಕಾರ್ಯದರ್ಶಿ ವೀರೇಂದ್ರ ಸಿದ್ದಕಟ್ಟೆ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಬಿ ಕೆ, ಕಾನೂನು ಸಲಹೆಗಾರ ದಿನಕರ್ ಶೆಟ್ಟಿ, ನಾಯಕರಾದ ಬಿಚ್ಚು ಕೊಯ ಪಣಂಬೂರು, ವಿಲ್ಫ್ರೆಡ್ ಪಿಂಟೋ, ವಿನೋದ್ ರಾಜ್, ಪುನೀತ್ ಶೆಟ್ಟಿ, ಶಿಪಾಲ್ ರಾಜ್, ಪದ್ಮ ಸ್ಮಿತ್ ಜೈನ್, ಸಿದ್ದಿಕ್ ಹಸನ್, ದಿನೇಶ್ ಗುರುನಗರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೊಸಮನೆ, ಕೋಶಾಧಿಕಾರಿ ಗಿರೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಜ್ಯೋತಿ, ವಕೀಲರಾದ ಸುಮನಾ ಶರಣ್, ದಿವಾಕರ್, ಜಗದೀಶ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು