4:24 PM Tuesday19 - May 2026
ಬ್ರೇಕಿಂಗ್ ನ್ಯೂಸ್
ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು.

ಇತ್ತೀಚಿನ ಸುದ್ದಿ

ವರದಕ್ಷಿಣೆ ಕಿರುಕುಳ: ಗೃಹಿಣಿ ಅತ್ಮಹತ್ಯೆಗೆ ಶರಣು; ಗಂಡ, ಅತ್ತೆ, ಮಾವ ವಿರುದ್ಧ ಎಫ್ ಐಆರ್

20/08/2024, 12:24

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ
ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಮೃತ ದುರ್ದೈವಿಯನ್ನು ಸುಭಿಕ್ಷಾ (25) ಎಂದು ಗುರುತಿಸಲಾಗಿದೆ. ಮೃತಳಿಗೆ ಎರಡೂವರೆ ವರ್ಷದ ಒಂದು ಗುಂಡು ಮಗುವಿದೆ.

ಕಳೆದ 4 ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಜೊತೆ ಅವರ ವಿವಾಹವಾಗಿತ್ತು.
ನಿನ್ನೆ ಸಂಜೆ 4 ಗಂಟೆಗೆ ಆತ್ಮಹತ್ಯೆಗೆ ಸುಭಿಕ್ಷಾ ಶರಣಾಗಿದ್ದಾರೆ.
ತಹಶೀಲ್ದಾರ್ ಆಗಮಿಸದ ಹಿನ್ನೆಲೆ ಮೃತದೇಹವನ್ನ ಪೊಲೀಸರು ಕೆಳಗಿಳಿಸಲಿಲ್ಲ.
7 ವರ್ಷದ ಒಳಗೆ ಗೃಹಿಣಿ ಆತ್ಮಹತ್ಯೆಗೆ ಶರಣಾದ್ರೆ ತಹಶೀಲ್ದಾರ್ ರಿಂದ ಸ್ಪಾಟ್ ಮಹಜರ್ ಆಗಬೇಕಿದೆ.
ತಹಶೀಲ್ದಾರ್ ಆಗಮನದ ಬಳಿಕ ಮೃತದೇಹ ಪೊಲೀಸರು, ಕುಟುಂಬಸ್ಥರು ಕೆಳಗಿಳಿಸಿದ್ದಾರೆ.
ಮೃತಳ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.
ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು