8:27 AM Wednesday8 - July 2026
ಬ್ರೇಕಿಂಗ್ ನ್ಯೂಸ್
ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

ಇತ್ತೀಚಿನ ಸುದ್ದಿ

ತುಂಗಭದ್ರ ಜಲಾಶಯದ 19ನೇ ಗೇಟ್‌ನ ಚೈನ್‌ ಮುರಿತ: ಅಪಾರ ಪ್ರಮಾಣದ ನೀರು ನದಿಗೆ; ಪ್ರವಾಹದ ಆತಂಕ

11/08/2024, 18:58

ಶಿವು ರಾಠೋಡ ಹಣಸಗಿ ಕೊಪ್ಪಳ

info.reporterkarnataka@gmail.com

ಮಳೆಯ ಅಬ್ಬರಕ್ಕೆ ಭರ್ತಿಯಾಗಿರುವ ಕೊಪ್ಪಳ ತಾಲೂಕಿನ ತುಂಗಭದ್ರಾ ಜಲಾಶಯದ 19ನೇ ಗೇಟ್‌ನ ಚೈನ್‌ ಲಿಂಕ್ ಮುರಿದಿದ್ದು, ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಆತಂಕ ಉಂಟಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದಿನಿಂದ ತಜ್ಞರ ತಂಡ ಕ್ರೆಸ್ಟ್ ಗೇಟ್ ದುರಸ್ತಿ ಕಾರ್ಯಕ್ಕಾಗಿ ಜಲಾಶಯಕ್ಕೆ ಭೇಟಿ ನೀಡಲಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಶನಿವಾರ ಮಧ್ಯರಾತ್ರಿ ಜಲಾಶಯದ ಕ್ರೆಸ್ಟ್‌ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿದೆ. ಒಂದೇ ಗೇಟ್‌ ಮೇಲೆ ಒತ್ತಡ ಹೆಚ್ಚಾಗಿ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಗೇಟ್ ಮುರಿದ ಪರಿಣಾಮ ನೀರು ರಭಸವಾಗಿ ನುಗ್ಗುತ್ತಿದ್ದು, ಜಲಾಶಯದ ಹೊರ ಹರಿವು 70 ರಿಂದ 1 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ಪೂರ್ಣ ಭರ್ತಿಯಾಗಿರುವ ಜಲಾಶಯದ ಒಂದು ಕ್ರೆಸ್ಟ್‌ ಗೇಟ್‌ನ ಚೈನ್ ಲಿಂಕ್ ಮುರಿದಿದ್ದು, ತುಂಗಭದ್ರಾ ನದಿ ಪಾತ್ರದ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ತುಂಗಭದ್ರ ಜಲಾಶಯದ 19ನೇ ಗೇಟ್‌ನ ಚೈನ್‌ ಮುರಿತ; ಅಪಾರ ಪ್ರಮಾಣದ ನೀರು ಪೋಲು, ಆತಂಕದಲ್ಲಿ ಜನತೆ ಕರ್ನಾಟಕ ಕೊಪ್ಪಳ ರಾಜ್ಯ
ಮಳೆಯ ಅಬ್ಬರಕ್ಕೆ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಗೇಟ್‌ನ ಚೈನ್‌ ಲಿಂಕ್ ಮುರಿದಿದ್ದು, ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಆತಂಕ ಉಂಟಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದಿನಿಂದ ತಜ್ಞರ ತಂಡ ಕ್ರೆಸ್ಟ್ ಗೇಟ್ ದುರಸ್ತಿ ಕಾರ್ಯಕ್ಕಾಗಿ ಜಲಾಶಯಕ್ಕೆ ಭೇಟಿ ನೀಡಲಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಶನಿವಾರ ಮಧ್ಯರಾತ್ರಿ ಜಲಾಶಯದ ಕ್ರೆಸ್ಟ್‌ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿದೆ. ಒಂದೇ ಗೇಟ್‌ ಮೇಲೆ ಒತ್ತಡ ಹೆಚ್ಚಾಗಿ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಗೇಟ್ ಮುರಿದ ಪರಿಣಾಮ ನೀರು ರಭಸವಾಗಿ ನುಗ್ಗುತ್ತಿದ್ದು, ಜಲಾಶಯದ ಹೊರ ಹರಿವು 70 ರಿಂದ 1 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ಪೂರ್ಣ ಭರ್ತಿಯಾಗಿರುವ ಜಲಾಶಯದ ಒಂದು ಕ್ರೆಸ್ಟ್‌ ಗೇಟ್‌ನ ಚೈನ್ ಲಿಂಕ್ ಮುರಿದಿದ್ದು, ತುಂಗಭದ್ರಾ ನದಿ ಪಾತ್ರದ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಸದ್ಯ 105 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗೇಟ್ ಸಂಖ್ಯೆ 19 ರಿಂದ 35 ರಿಂದ 45 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಉಳಿದ ಗೇಟ್‌ಗಳಿಂದ ಸುಮಾರು 75 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಮಾತ್ರವೇ ಗೇಟ್‌ಗೆ ಏನಾಗಿದೆ ಎಂಬುದನ್ನು ನೋಡುವುದಕ್ಕೆ ಸಾಧ್ಯ. ಆದ್ದರಿಂದ ನದಿ ಪಾತ್ರದ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ದುರಸ್ತಿಗೆ ಜಲಾಶಯದ ಅರ್ಧ ನೀರು ಖಾಲಿಯಾಗಬೇಕು
ದುರಸ್ತಿ ಮಾಡಬೇಕಾದರೇ ಜಲಾಶಯದಲ್ಲಿನ 60 ಟಿಎಂಸಿ ನೀರು ಖಾಲಿ ಮಾಡಬೇಕಾಗುತ್ತದೆ. ಜಲಾಶಯದ ಮೂಲ ವಿನ್ಯಾಸದ ಪ್ರತಿ ತರಿಸಿಕೊಳ್ಳಲಾಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ತೀರ್ಮಾನಿಸಲಾಗುತ್ತದೆ. ನೀರಿನ ಹೊರ ಹರಿವಿನ ಪ್ರಮಾಣವನ್ನು 1 ರಿಂದ 2 ಲಕ್ಷ ಕ್ಯುಸೆಕ್‌ಗೆ ಏರಿಸಬೇಕು. ನೀರು ಕಡಿಮೆಯಾದ ಬಳಿಕ ತುಂಡಾದ ಚೈನ್‌ ಲಿಂಕ್‌ ಸರಿಪಡಿಸಲು ಸಾಧ್ಯವಾಗುತ್ತದೆ. ದುರಸ್ತಿಗೆ ಅಗತ್ಯವಾಗಿ ಬೇಕಾದ ನೀರು ಕಡಿಮೆ ಮಾಡಲು ಕನಿಷ್ಠ 3- 4 ದಿನವಾದರೂ ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ…

*ಕೊಪ್ಪಳ* – ಹೊಸಪೇಟೆ ಗಡಿಭಾಗದಲ್ಲಿರುವ ಜಲಾಶಯದ ಕರ್ನಾಟಕದ ವಿವಿಧ ಜಿಲ್ಲೆಗಳು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಕ್ಕೆ ಜೀವನಾಡಿಯಾಗಿದೆ. ಮಲೆನಾಡು ಭಾಗದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ತುಂಗ ಮತ್ತು ಭದ್ರಾ ನದಿಗಳು ಮೈದುಂಬಿ ಹರಿದಿವೆ. ಆದ್ದರಿಂದ ಜಲಾಶಯ ಜುಲೈನಲ್ಲಿಯೇ ಸಂಪೂರ್ಣ ಭರ್ತಿಯಾಗಿದೆ.

ತುಂಗಭದ್ರಾ ಜಲಾಶಯದ ಪೂರ್ಣ ಮಟ್ಟ 1633 ಅಡಿಗಳು. ಸದ್ಯದ ಮಾಹಿತಿಯಂತೆ ಜಲಾಶಯದಲ್ಲಿ 1632 ಅಡಿಗಳ ನೀರಿನ ಸಂಗ್ರಹವಿದೆ. 105 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ 10 ಟಿಎಂಸಿ ಅಡಿ ನೀರಿದೆ. ಜಲಾಶಯಕ್ಕೆ ಒಳಹರಿವು 45,086 ಕ್ಯುಸೆಕ್ ಇದೆ.

*ಸಿಎಂ, ಡಿಸಿಎಂಗೆ ಮಾಹಿತಿ*

ಜಲಾಶಯಕ್ಕೆ ಭಾನುವಾರ ಬೆಳಗಿನ ಜಾವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದಿರುವ ಕಾರಣ ಅನಿವಾರ್ಯವಾಗಿ ನೀರು ಹೊರಬಿಡಬೇಕಾಗಿದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸದ್ಯದ ಮಟ್ಟಿಗೆ 60ರಿಂದ 65 ಟಿಎಂಸಿ ಅಡಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. ಕನಿಷ್ಠ 20 ಅಡಿ ನೀರು ಖಾಲಿಯಾದರೆ ಮಾತ್ರ ನಿಖರವಾಗಿ ಸಮಸ್ಯೆ ಏನಾಗಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ತಿಳಿಸಿದರು.

‘ಆಣೆಕಟ್ಟು ನಿರ್ಮಿಸಿದ ವಿನ್ಯಾಸವನ್ನು ತರಿಸಿಕೊಳ್ಳಲಾಗಿದ್ದು, ನೀರಿನ ರಭಸ ಹೆಚ್ಚಿರುವ ಕಾರಣ ಕೆಳಗಡೆ ಇಳಿದು ಕೆಲಸಮಾಡಲು ಆಗುವುದಿಲ್ಲ. ಸದ್ಯಕ್ಕೆ ಒಂದು ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ನೀರು ಹೊರಬಿಡುವ ಪ್ರಮಾಣ 2.50 ಲಕ್ಷ ಕ್ಯುಸೆಕ್ ದಾಟಿದರೆ ಮಾತ್ರ ಜನರಿಗೆ ತೊಂದರೆಯಾಗುತ್ತದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ’ ಎಂದರು.
ಕಡಿಮೆ ಸಮಯದಲ್ಲಿ ಸಮಸ್ಯೆ ಪರಿಹರಿಸಲು ಬೆಂಗಳೂರು, ಹೈದರಾಬಾದ್, ಚೆನ್ನೈನಿಂದ ತಜ್ಞರ ತಂಡ ಬರಲಿದೆ. ಬಳಿಕ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿದರು….

ಇತ್ತೀಚಿನ ಸುದ್ದಿ

ಜಾಹೀರಾತು