3:33 AM Wednesday29 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿ: ಗಟ್ಟಿ ಮುಟ್ಟಾದ ರಸ್ತೆ ಅಗೆದು ಕಾಂಕ್ರೀಟ್ ಹಾಕಿದರೂ ಮೂಲ ಸಮಸ್ಯೆ ಜನಪ್ರತಿನಿಧಿಗಳಿಗೆ ಕಾಣಿಸ್ಲೇ ಇಲ್ಲ!

14/12/2023, 22:06

ಮಂಗಳೂರು(reporterkarnataka.com): ನೀವು ನೋಡುತ್ತಿರುವ ಈ ಚಿತ್ರಗಳು ನೀವು ಅಂದುಕೊಂಡಂತೆ ಸ್ಮಾರ್ಟ್ ಸಿಟಿ ಮಂಗಳೂರಿನದ್ದೇ ಆಗಿದೆ. ಅದಲ್ಲದೆ ನೀವು ತಿಳ್ಕೊಂಡಂತೆ ಹಂಪನಕಟ್ಟೆಯ ಪಿರೇರಾ ಹೊಟೇಲ್ ಸಮೀಪದ ಚಿತ್ರಣವಾಗಿದೆ.


ಸರಿ, ಹಾಗಾದರೆ ಇದರಲ್ಲೇನು ವಿಶೇಷ ಅಂದು ಕೊಳ್ಳಬಹುದು ನೀವು. ಪಿರೇರಾ ಹೊಟೇಲ್ ಬಳಿ ನಿಂತರೆ ಅಲ್ಲೇ ಸೆಂಟ್ರಲ್ ಮಾರ್ಕೆಟ್ ಕಡೆ ಹೋಗುವ ಕ್ರಾಸ್ ರೋಡ್ ಇದೆ. ಈ ರಸ್ತೆಯಲ್ಲಿ ಸಾಗಿದರೆ ರಥಬೀದಿಯತ್ತಲೂ ಹೋಗಬಹುದು, ಇಲ್ಲವೇ ಕೆ.ಎಸ್. ರಾವ್ ರಸ್ತೆಗೂ ಸೇರಬಹುದು. ಆದರೆ ಈ ಪಿರೇರಾ ಹೊಟೇಲ್ ಬಳಿಯ ಸಮಸ್ಯೆ ಏನೆಂದರೆ ಇಲ್ಲೇ ಸಿಟಿ ಬಸ್ ಸ್ಟಾಪ್ ಕಲ್ಪಿಸಲಾಗಿದೆ. ಬಸ್ ಶೆಲ್ಟರ್ ಕೂಡ ಇದೆ. ರೋಡ್ ಟರ್ನ್ ಆಗುವ ಜಾಗದಲ್ಲೇ ಪ್ರಭಾವಿಗಳಿಗೆ ತೊಂದರೆಯಾಗದಂತೆ ಅವೈಜ್ಞಾನಿಕ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ರಸ್ತೆ ಬದಿಯೂ ಸರಿ ಇಲ್ಲ. ಗಟ್ಟಿಮುಟ್ಟಾದ ರಸ್ತೆಯನ್ನು ಅಗೆದು ಸ್ಮಾರ್ಟ್ ಸಿಟಿ ಹಣದಲ್ಲಿ ಕಾಂಕ್ರೀಟ್ ಹಾಕಿದವರಿಗೆ ಇದೆಲ್ಲ ಕಾಣಿಸೋಲ್ಲ. ರಸ್ತೆ ಬದಿ ತಗ್ಗು ದಿಣ್ಣೆಗಳಿಂದ ಕೂಡಿದೆ. ಪೀಕ್ ಅವರ್ ನಲ್ಲಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಬಸ್ ಸೇರಿದಂತೆ ವಾಹನಗಳು ರಸ್ತೆ ಬಿಟ್ಟು ಕೆಳಗಿಳಿಯುತ್ತವೆ. ತಗ್ಗು ದಿಣ್ಣೆಯಲ್ಲಿ ಸಂಚರಿಸುತ್ತವೆ. ಇಂತಹ ನೂರಾರು ಸಮಸ್ಯೆಗಳು ನಿತ್ಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಆದರೆ ಅಧಿಕಾರಸ್ಥರಿಗೆ ಕಾಣಿಸೋದೇ ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು