2:45 PM Friday16 - May 2025
ಬ್ರೇಕಿಂಗ್ ನ್ಯೂಸ್
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಇಂದಿನಿಂದ ಜಾರಿ; ಪ್ರಾಧಿಕಾರ ರಚನೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿಶಾಮಕ ದಳ… ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು

ಇತ್ತೀಚಿನ ಸುದ್ದಿ

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಪರಿಶ್ರಮ: ಕ್ಷೇತ್ರದಲ್ಲಿ ಪ್ರಗತಿ, ಹಲವು ಜನಪರ ಯೋಜನೆ ಕಾರ್ಯಗತ

01/08/2021, 08:17

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ 

ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಗ್ರಾಮೀಣ ಪ್ರದೇಶದಲ್ಲಿ ಬಹಳ ಫೇಮಸ್. ಇದಕ್ಕೆಲ್ಲ ಕಾರಣ ಅವರ ಜನಪರ ನಿಲುವು ಹಾಗೂ ಜನಪರ ಯೋಜನೆಯಾಗಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಕೊರೊನಾದ ಕಷ್ಟಕಾಲದ ನಡುವೆಯೂ ಸ್ವಲ್ಪ ವಿಶ್ರಾಂತಿ ಇಲ್ಲದೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಕ್ಷೇತ್ರದುದ್ಧಕ್ಕೂ ಜನರಾಡಿಕೊಳ್ಳುತ್ತಿದ್ದಾರೆ.

ಶಾಸಕರ ಸ್ಥಳೀಯ ಅನುದಾನದಡಿ 43.50 ಲಕ್ಷ ರೂ ವೆಚ್ಚದಲ್ಲಿ 5 ಶಾಲಾ ಕೊಠಡಿ ಉದ್ಘಾಟನೆ ನಡೆದಿದೆ.

ನಬಾರ್ಡ್ ಅನುದಾನದಡಿಯಲ್ಲಿ 38 ಲಕ್ಷ  ರೂ.ವೆಚ್ಚದಲ್ಲಿ ಪಶು ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ.

ಸಿಡಿಲು ಬಡಿದು ಮೃತರಾದ ಜಿಂದಮ್ಮ ಗಂಜಮ್ ಶರವಲೀ ಕುಟುಂಬಕ್ಕೆ ಶಾಸಕರು 5 ಲಕ್ಷ ರೂ. ಪರಿಹಾರ ಒದಗಿಸಿದ್ದಾರೆ. ಜೆ ಮಲ್ಲಪೂರ ಗ್ರಾಮದಲ್ಲಿ ಕೆಕೆಆರ್ ಡಿಬಿ ಅನುದಾನದಡಿ 10.50 ಲಕ್ಷ ರೂ. ವೆಚ್ಚದಲ್ಲಿ  ಶಾಲಾ ಕೊಠಡಿ ಉದ್ಘಾಟನೆ ನಡೆದಿದೆ. ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ವಿತರಣೆ ನಡೆದಿದೆ. ಇದೆಲ್ಲ ಶಾಸಕರ ಜನಪರ ಕಾರ್ಯವೈಖರಿ ಎಂದು ಕ್ಷೇತ್ರದ ಜನತೆ ಹೇಳಿಕೊಳ್ಳುತ್ತಿದ್ದಾರೆ. 

ಸಂದರ್ಭದಲ್ಲಿ ಅಧಿಕಾರಿಗಳು  ಊರಿನ ಹಿರಿಯ ಮುಖಂಡರು, ಗ್ರಾಪಂ, ಅಧ್ಯಕ್ಷರು, ಸದಸ್ಯರು ಸುತ್ತ ಮುತ್ತಲಿನ ಹಿರಿಯ ಮುಖಂಡರು ಗ್ರಾಮಸ್ಥರು  ಉಪಸ್ಥಿತರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು