8:07 AM Thursday16 - October 2025
ಬ್ರೇಕಿಂಗ್ ನ್ಯೂಸ್
ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ಹಾಸನಾಂಬೆಗೆ ಪ್ರಾರ್ಥನೆ… ಮೆಡಿಕಲ್‌ ಅಗತ್ಯತೆಗೆ ಪೂರೈಕೆಗೆ ಡ್ರೋನ್‌ ಬಳಕೆಗೆ ಚಾಲನೆ: ಏರ್‌ಬೌಂಡ್‌ ಸಂಸ್ಥೆಯಿಂದ ಡ್ರೋನ್‌ ಮೂಲಕ… Shivamogga | ತೀರ್ಥಹಳ್ಳಿ ಬಾಳೆಬೈಲು ಬಳಿ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು ಮಡಿಕೇರಿಯ ಚೇರಂಬಾಣೆಯಲ್ಲಿ ಅಸ್ಸಾಂ ಕಾರ್ಮಿಕರಿಗೆ ಸ್ಥಳೀಯನಿಂದ ಗೋವು ಮಾಂಸ ಮಾರಾಟ: ಆರೋಪಿ ಅರೆಸ್ಟ್ ವಿಜ್ಞಾನ ಓದಿಯೂ ಮೌಡ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ: ಸಿಎಂ ಸಿದ್ದರಾಮಯ್ಯ Chikkamagaluru | ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸ: ಬೆಟ್ಟವೇರಲಿರುವ ಭಕ್ತ ಸಾಗರ; ಜಿಲ್ಲಾಡಳಿತದಿಂದ… ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ: ಗಾಯಗೊಂಡ ಗೋವುಗಳನ್ನು ಬಿಟ್ಟು ಆರೋಪಿಗಳು… ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ನಡೆ ನಿಗೂಢ: ಸಚಿವ ಎಚ್. ಸಿ. ಮಹದೇವಪ್ಪ ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಇತ್ತೀಚಿನ ಸುದ್ದಿ

ಮತ್ತೆ ಮೂಲ ಸಂಸ್ಕೃತಿಯತ್ತ: ಅಳಿಕೆಯಲ್ಲಿ ಪತ್ರಕರ್ತರಿಂದ ಭತ್ತದ ಕೃಷಿ ಸಾಮೂಹಿಕ ನಾಟಿ

30/07/2021, 08:04

ಮಂಗಳೂರು(reporterkarnataka.com):

ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡವರಿಗೆ ಅನಾರೋಗ್ಯದ ಸಮಸ್ಯೆ ಕಡಿಮೆ ಎಂದು  ಖ್ಯಾತ ವೈದ್ಯರು ಮತ್ತು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಪ್ರೊಫೆಸರ್ ಡಾ.ಎನ್. ಕಿಶೋರ್ ಆಳ್ವ ಮಿತ್ತಳಿಕೆ ಹೇಳಿದರು.

 ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ ಕಾರ್ಯಕ್ರಮ ಮಿತ್ತಳಿಕೆಗುತ್ತು ಕುಟುಂಬಸ್ಥರ ಸಹಕಾರ ದೊಂದಿಗೆ ಅಳಿಕೆ ಗ್ರಾಮದ ಮಿತ್ತಳಿಕೆಯ (ಚೆಂಡುಕಳ)  ಗದ್ದೆಯಲ್ಲಿ  ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿ ಹಲವಾರು ಮಂದಿ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡಿದ್ದೇನೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸದಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು ರೋಗ ಪೀಡಿತರಾಗಿರುವುದು ಕಡಿಮೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದು ಡಾ.ಕಿಶೋರ್ ಆಳ್ವ ತಿಳಿಸಿದ್ದಾರೆ.

ಕೃಷಿ ಚಟುವಟಿಕೆಗಳೊಂದಿಗೆ ನಮ್ಮ ಮೂಲ ಸಂಸ್ಕ್ರತಿ ಬೆಸೆದುಕೊಂಡಿದೆ. ಆ ಕಾರಣ ಸುಶಿಕ್ಷಿತರೂ ಕೃಷಿ ಸಂಸ್ಕ್ರತಿ ಯಿಂದ ವಿಮುಖರಾಗಬಾರದು ಎಂದು ಡಾ.ಎನ್.ಕಿಶೋರ್ ಆಳ್ವ ತಿಳಿಸಿದ್ದಾರೆ.

ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಎಚ್.ಜಿ. ಅವರು ನೇಜಿ ನೆಡುವ ಮೂಲಕ ಕಾರ್ಯಕ್ರ‌ ಮಕ್ಕೆ ಚಾಲನೆ ನೀಡಿದರು.

ಮಿತ್ತಳಿಕೆ ಕುಟುಂಬದ ಹಿರಿಯರಾದ ಸುಗಂಧ ಆರ್. ಸಾಮಾನಿ ಯವರು ದೀಪ ಬೆಳಗಿಸಿ ಸಾಂಪ್ರದಾಯಿಕ ವಾಗಿ ದೀಪ ಬೆಳಗಿಸಿ ಚಾಲನೆ ನೀಡಿದರು.  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ತಾಲೂಕು ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಅಳಿಕೆ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಕೆ., ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು,ಮಿತ್ತಳಿಕೆ ಕುಟುಂಬದ ಹಿರಿಯರಾದ ಸಂಕಪ್ಪ ಶೇಖ, ಸೀತಾರಾಮ ಶೆಟ್ಟಿ, ಡಾ.ಎನ್. ಕಿಶೋರ್ ಆಳ್ವ, ದಯಾನಂದ ಆಳ್ವ,ಚಂದ್ರನಾಥ ಆಳ್ವ, ಕನ್ಯಾನ ಪಿಡಿಒ  ವಿಜಯಶಂಕರ ಆಳ್ವ, ತಿಮ್ಮಪ್ಪ ಶೆಟ್ಟಿ ಅಳಿಕೆಗುತ್ತು, ರೂಪೇಶ್ ರೈ ಅಳಿಕೆಗುತ್ತು,, ಕೇಪು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಸದಾಶಿವ ಅಳಿಕೆ, ಸೂರ್ಯವಂಶ ಪ್ರತಿಷ್ಠಾನದ ಪ್ರತಿನಿಧಿ ಡಾ.ಗೋವರ್ಧನ ರಾವ್  ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ ರೈ ಕಟ್ಟ ಮತ್ತು ಕೋಶಾಧಿಕಾರಿ ಪುಷ್ಪರಾಜ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು.

ಮಿತ್ತಳಿಕೆಯ ಕುಟುಂಬದವರ ಗದ್ದೆಯಲ್ಲಿ ಪತ್ರಕರ್ತರು ಸೇರಿ ಗುರವಾರ ನಾಟಿ ಮಾಡಿದ ಭತ್ತದ ಪೈರು ಬೆಳೆದು ಬೆಳೆ ಬಂದ ಬಳಿಕ  ಅದನ್ನು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡ ಕೃಷಿಕರಿಗೆ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಮೂಲಕ ವಿತರಣೆ ಮಾಡುವುದಾಗಿ  ಮಿತ್ತಳಿಕೆ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮಿತ್ತಳಿಕೆ ಕುಟುಂಬದವರು ನೀಡುವ ಭತ್ತದ ಬೆಳೆಯ ಫಸಲನ್ನು ಪಡೆದು ಆರ್ಥಿಕ ವಾಗಿ ಹಿಂದುಳಿದ ಕುಟುಂಬ. ಬಡ ಕುಟುಂಬ ಗಳಿಗೆ ಅದನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು  ದ.ಕ ಜಿಲ್ಲೆಕಾರ್ಯ ನಿರತ  ಪತ್ರಕರ್ತರ  ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಈ ಸಂ

ದರ್ಭದಲ್ಲಿ ತಿಳಿಸಿದ್ದಾರೆ

ಪತ್ರಕರ್ತರು ನೇಜಿ ನೆಟ್ಟು, ಯಂತ್ರದ ಮೂಲಕ ಉಳುಮೆ  ಮಾಡುವ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು