10:17 AM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ತೆರೆಯಲಿದೆ ತಿಂಡಿ- ತಿನಿಸುಗಳ ರಸ್ತೆ ಬದಿ ಆಹಾರೋತ್ಸವ: ಲಾಲ್ ಬಾಗ್ ನಿಂದ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ವರೆಗೆ 200ಕ್ಕೂ ಹೆಚ್ಚು ಮಳಿಗೆ!

18/03/2023, 21:02

ಮಂಗಳೂರು(reporter Karnataka.com):ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಬೃಹತ್ ಆಹಾರೋತ್ಸವ ಮಾ.22ರಿಂದ 26ವರೆಗೆ ನಗರದಲ್ಲಿ ನಡೆಯಲಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಯತೀಶ್ ಬೈಕಂಪಾಡಿ ಈ ಕುರಿತು ವಿವರ ನೀಡಿದರು.
ನಗರದ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮೂಲಕ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್‌ವರೆಗೆ ರಸ್ತೆಬದಿಯುದ್ದಕ್ಕೂ ಪ್ರತಿದಿನ ಸಂಜೆ 5ರಿಂದ ರಾತ್ರಿ 11 ಗಂಟೆಯವರೆಗೆ ಆಹಾರೋತ್ಸವ ನಡೆಯಲಿದೆ. ಭಾನುವಾರ ದಿನವಿಡೀ ಆಹಾರೋತ್ಸವ ಇರುತ್ತದೆ.ವಿಶೇಷವಾಗಿ ತುಳುನಾಡಿನ ಸಾಂಪ್ರಾದಾಯಿಕ ತಿಂಡಿತಿನಸುಗಳು ಸೇರಿದಂತೆ ಹೊರರಾಜ್ಯಗಳ ಸಸ್ಯಹಾರ ಹಾಗೂ ಮಾಂಸಹಾರಗಳಿಗೆ ಆಹಾರೋತ್ಸವದಲ್ಲಿ ಆದ್ಯತೆ ಇರುತ್ತದೆ. ಸುಮಾರು 200 ಮಳಿಗೆಗಳಿರುತ್ತವೆ ಎಂದರು.

ಸಿನೆಮಾ ತಾರೆಯರು ಭಾಗವಹಿಸುತ್ತಾರೆ. ನೃತ್ಯ, ಹಾಡು, ಮಿಮಿಕ್ರಿ,ನಟನೆ, ಬೀದಿ ಜಾದೂ, ಕರೊಕೆ, ವಾದ್ಯಗೋಷ್ಠಿ, ಬೀದಿ ಸರ್ಕಸ್, ಸೈಕಲ್ ಬ್ಯಾಲೆನ್ಸ್‌ ಗೇಮ್ಸ್‌, ಜುಂಬಾ, ಫಿಟ್‌ನೆಸ್ ಕ್ರೀಡೆ, ಯೋಗ, ಮನೋರಂಜನಾ ಕಾರ್ಯಕ್ರಮಗಳಿರುತ್ತವೆ. ದೇಹದಾರ್ಢ್ಯ, ಪಟಾಕಿ ಪ್ರದರ್ಶನ, ಚೆಂಡೆ ಮತ್ತು ನಾಸಿಕ್ ಬ್ಯಾಂಡ್,ಕಿರು ಮ್ಯೂಸಿಕ್ ಬ್ಯಾಂಡ್ ಬೆಂಕಿನೃತ್ಯ, ಫ್ಲಾಶ್ ಬೆಳಕಿನಾಟ ಇರುತ್ತವೆ. ಕಾರ್ಯಕ್ರಮಕ್ಕೆ ಮೆರಗು ನೀಡುವ ನಿಟ್ಟಿನಲ್ಲಿ ವರ್ಣರಂಜಿತ ವಿದ್ಯತ್ ದೀಪಲಂಕಾರ, ತಾಲೀಮು ಪ್ರದರ್ಶನ,
ಸಂಗೀತ ಕಾರ್ಯಕ್ರಮ, ಹುಲಿವೇಷ ಬಣ್ಣಗಾರಿಕೆ ಸ್ಪರ್ಧೆ,ಗೂಡುದೀಪ ಮುಂತಾದುವುಗಳನ್ನು ಆಯೋಜಿಸಲಾಗಿದೆ. ಪ್ರತಿ ಜಂಕ್ಷನ್‌ನಲ್ಲೂ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಕ್ಕಳಿಗಾಗಿ ಪ್ರತ್ಯೇಕ ವಲಯ, ಕುದುರೆ ಸವಾರಿ, ಒಂಟೆ ಸವಾರಿ, ಹಳೆಯ ಮಾದರಿಗಳ ಕಾರುಗಳ ಪ್ರದರ್ಶನ, ಸೆಲ್ಫಿ ಬೂತ್ ಪ್ರಮುಖ ಆಕರ್ಷಣೆಯಾಗಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಗಿರಿಧರ್ ಶೆಟ್ಟಿ, ಆಶ್ವಿತ್ ಕೊಟ್ಟಾರಿ, ಜಗದೀಶ್ ಕದ್ರಿ, ಲಲಿತ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು