2:51 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

ಶೃಂಗೇರಿ ಶಾಸಕರ ವಿರುದ್ಧ ಲೋಕಾಯುಕ್ತ ದೂರು ಐದೇ ದಿನದಲ್ಲಿ ವಾಪಸ್: ದೂರುದಾರರಿಗೆ ಆಮಿಷೆ ಆರೋಪ

22/12/2022, 18:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporter Karnataka@gmail.com

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರನ್ನು ಐದೇ ದಿನದಲ್ಲಿ ದೂರುದಾರ ವಾಪಸ್ ಪಡೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ದೂರುದಾರರಿಗೆ ಆಮಿಷೆಯೊಡ್ಡಿ ದೂರು ವಾಪಸ್ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ನವೆಂಬರ್ 18ರಂದು ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮೇಲೆ ಲೋಕಾಯುಕ್ತ ದೂರು ನೀಡಲಾಗಿತ್ತು. ಶಾಸಕರಿಗೆ
ಅಕ್ರಮ ತೋಟ ಖರೀದಿಗೆ 100 ಕೋಟಿಗೂ ಅಧಿಕ ಹಣ ಎಲ್ಲಿಂದ ಬಂತು ಅಂತ ದೂರುದಾರರು ಪ್ರಶ್ನಿಸಿದ್ದರು. ಆದರೆ ಇದೀಗ ದೂರು ನೀಡಿದ ಐದೇ ದಿನಕ್ಕೆ ಕೇಸನ್ನು ದೂರುದಾರ ವಿಜಯಾನಂದ ಅವರು ವಾಪಸ್ ಪಡೆದಿದ್ದಾರೆ. ಇದೀಗ ದೂರು ಹಿಂಪಡೆದ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.


ಶಾಸಕರ ಸಂಬಂಧಿ ಪಿಎ ಅವರು ವಿಜಯಾನಂದ ಹೆಸರಲ್ಲಿ ಛಾಪಾ ಕಾಗದ ಪಡೆದಿದ್ದಾರೆ ಎನ್ನಲಾಗಿದೆ. ಶಾಸಕರ ಸಂಬಂಧಿ ಪಿಎ ಛಾಪ ಕಾಗದ ತೆಗೆದಿರುವ ವಿಷಯ ವೈರಲ್ ಆಗುತ್ತಿದೆ.

ಛಾಪಾ ಕಾಗದದ ಪೇಪರ್ ನಲ್ಲಿ ವಿಜಯಾನಂದರ ಹೆಸರಿದ್ದರೆ,
ಫೋನ್ ನಂಬರ್ ಪಿಎ ಅವರದ್ದಾಗಿದೆ ಎಂಬ ಮಾಹಿತಿ ಇದೆ. ಬೆಂಗಳೂರು ಲೋಕಾಯುಕ್ತದಲ್ಲಿ ದಾಖಲಾಗಿದ್ದ ಕೇಸ್ ಹಿಂಪಡೆಯಲು ಅಫಿಡವಿಟ್ ಮಾಡಲಾಗಿದೆ. ಕೇಸ್ ಪಡೆಯಲು ಶಾಸಕ ಟಿ.ಡಿ. ರಾಜೇಗೌಡ ಆಪ್ತರಿಂದಲೇ ಷಡ್ಯಂತ್ರ ನಡೆದಿದೆ
ಎಂದು ಬಿಜೆಪಿ ಆರೋಪಿಸಿದೆ.

ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪ್ರಕರಣ ರಾಜಕೀಯವಾಗಿಯೂ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ವಿಜಯಾನಂದ ಕೇಸ್ ಹಿಂಪಡೆದ ಮೇಲೆ ಚಿಕ್ಕಮಗಳೂರಲ್ಲಿ ಲೋಕಾಯುಕ್ತದಲ್ಲಿ 2ನೇ ದೂರು ದಾಖಲಾಗಿದೆ. ಕಾಫಿ ಡೇ ಸಂಸ್ಥಾಪಕ ದಿ. ಸಿದ್ದಾರ್ಥ ಹೆಗ್ಡೆ ಅವರ ಟ್ರಸ್ಟ್ ನ ತೋಟ ಖರೀದಿಯಲ್ಲಿ ಅಕ್ರಮದ ಆರೋಪ ದೂರಿನ ಪ್ರಕರಣ ಇದಾಗಿದೆ.

ಟಿ.ಡಿ.ರಾಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ

ಇತ್ತೀಚಿನ ಸುದ್ದಿ

ಜಾಹೀರಾತು