6:04 PM Tuesday7 - April 2026
ಬ್ರೇಕಿಂಗ್ ನ್ಯೂಸ್
ಎನ್.ಆರ್.ಪುರ: ಶಿವಮೊಗ್ಗದ ನರ್ಸ್ ಆತ್ಮಹತ್ಯೆ; ಹೊಳೆಗೆ ಹಾರಿ ಜೀವತ್ಯಾಗ Kodagu | ನಟಿ ರಶ್ಮಿಕಾ ಮಂದಣ್ಣಗೆ ತಂದೆಯಿಂದ ವಿರಾಜಪೇಟೆಯ “ಸೆರಿನಿಟಿ ಕಾಟೇಜ್” ಗಿಫ್ಟ್ ಮಧ್ಯಪ್ರಾಚ್ಯ ಯುದ್ಧ: ಕೊಡಗಿನಲ್ಲಿ ಸಿಲುಕಿದ ಇರಾನಿ ದಂಪತಿ; ಪಾಸ್‌ಪೋರ್ಟ್ ಆತಂಕ ಬಾಗಲಕೋಟೆ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು… ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆಡಿಸಿದ ಉಪ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ Bangalore | ಅಡುಗೆ ಅನಿಲ ದಾಸ್ತಾನು ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ… ಮಂಜೇಶ್ವರ ದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ | ಪ್ರಧಾನಿ ಮೋದಿ ಅವರಿಂದ ಆಹಾರ… ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ…

ಇತ್ತೀಚಿನ ಸುದ್ದಿ

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ: ಗೆಳೆಯನ ಕಾಣಲು ಚೆನ್ನೈ ನಿಂದ ಸುರತ್ಕಲ್ ಗೆ ಬಂದ ಎಂಬಿಬಿಎಸ್ ವಿದ್ಯಾರ್ಥಿನಿ

21/10/2022, 22:19

ಮಂಗಳೂರು(reporterlarnataka.com): ಇನ್‌ಸ್ಟಾಗ್ರಾಮ್‌ನಿಂದ ಪರಿಚಯವಾದ ಗೆಳೆಯ ಭೇಟಿಯಾಗಲು ದೂರದ ಚೆನ್ನೈ ನಿಂದ ಕಡಲ ತೀರದ ಸುರತ್ಕಲ್ ಗೆ ಆಗಮಿಸಿದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ರಾಜಸ್ಥಾನ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ರೇಶು ಎಂಬಾಕೆ ಇನ್‌ಸ್ಟಾಗ್ರಾಮ್‌ನಿಂದ ಪರಿಚಯವಾದ ಎಂಜಿನಿಯರ್‌ ವಿದ್ಯಾರ್ಥಿಯ ಭೇಟಿಗೆ ಸುರತ್ಕಲ್‌ ಗೆ ಬಂದಿದ್ದಳು. ರೇಶು ಮಂಗಳೂರು ತಲುಪಿದಾಗ ಆಕೆಯ ಬ್ಯಾಗ್‌, ಮೊಬೈಲ್‌ ಕಳವಾಗಿತ್ತು. ಇದರಿಂದ ವಿಚಲಿತಳಾದ ಆಕೆ ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ನಿಂತು ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಲು ಸ್ಥಳೀಯರಲ್ಲಿ ವಿಚಾರಿಸಿದ್ದಳು. ಯುವತಿಯ ನಡೆ ಬಗ್ಗೆ ಸಂಶಯಗೊಂಡ ಸ್ಥಳೀಯರು ಸುರತ್ಕಲ್‌ ಪೊಲೀಸ್‌ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದರು.

ಠಾಣೆಯಲ್ಲಿ ಆಕೆಯನ್ನು ವಿಚಾರಿಸಿದಾಗ ಸ್ಥಳೀಯ ಸಂಸ್ಥೆಯ ಎಂಜಿನಿಯರ್‌ ವಿದ್ಯಾರ್ಥಿಯ ನೋಡಲು ಬಂದಿರುವ ವಿಷಯ ತಿಳಿದು ಬಂತು. ಇದೀಗ ಪೊಲೀಸರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು