10:18 AM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಪ್ರಯಾಣಿಕರಿಂದ ತುಂಬಿರುವ ಸರಕಾರಿ ಸಿಟಿ ಬಸ್: ಇದು ಕೊರೊನಾ 3ನೇ ಅಲೆಗೆ ಸಿದ್ಧತೆಯೇ?: ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಲಿ

25/06/2021, 17:03

ಮಂಗಳೂರು(reporterkarnataka news); ಸ್ಟೇಟ್ ಬ್ಯಾಂಕ್ – ತಲಪಾಡಿ ಸರಕಾರಿ ಬಸ್ ಸೇರಿದಂತೆ ಹಲವು ಕಡೆ ಸಂಚರಿಸುವ ನರ್ಮ್ ಬಸ್ ಗಳು ಬೆಳಗ್ಗೆ ಹಾಗೂ ಸಂಜೆ ವೇಳೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಕೊರೊನಾ 3ನೇ ಅಲೆಗೆ ಇಲ್ಲಿಂದಲೇ ಸಿದ್ಧತೆ ನಡೆಸಿದಾಗೆ ಇದೆ ಎಂದು ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಜುಲೈ 1ರ ವರೆಗೆ ಖಾಸಗಿ ಸಿಟಿ ಬಸ್ ಗಳ ಓಡಾಟವಿಲ್ಲದ ಕಾರಣ
ಪ್ರಯಾಣಿಕರು ಸರಕಾರದ ನರ್ಮ್ ಬಸ್ ಗಳನ್ನೇ ಆಶ್ರಯಿಸಬೇಕಾಗಿದೆ. ಇದು ಪ್ರಯಾಣಿಕರ ತಪ್ಪಲ್ಲ, ಸ್ವಂತ ವಾಹನ ಇಲ್ಲದವರು ಯಾವುದೇ ರಿಸ್ಕ್ ತೆಗೆದುಕೊಂಡಾದರೂ ಗಮ್ಯ ಸ್ಥಾನ ಸೇರಲೇ ಬೇಕು. ಜಿಲ್ಲಾಡಳಿತ ಇದಕ್ಕೆ ತಕ್ಕ ವ್ಯವಸ್ಥೆ ಮಾಡಲು ವಿಫಲವಾಗಿರುವುದರಿಂದ ಕೊರೊನಾ ಗೈಡ್ ಲೈನ್ಸ್ ಉಲ್ಲಂಘಿಸಿ ನಾಗರಿಕರು ಪ್ರಯಾಣ ಮಾಡುವ ಪ್ರಮೇಯ ಒದಗಿ ಬಂದಿದೆ.

ತೊಕ್ಕೊಟ್ಟು, ತಲಪಾಡಿ, ಸುರತ್ಕಲ್, ಬೊಂದೇಲ್, ಕಾವೂರು ಮುಂತಾದ ಕಡೆ ಮಾಮೂಲಿಯಾಗಿ ಪ್ರಯಾಣಿಕರ ಸಂಖ್ಯೆಯೂ ಜಾಸ್ತಿ ಇರುತ್ತದೆ. ಹಾಗಾಗಿ ಪ್ರಯಾಣಿಕರ ಸಾಂದ್ರತೆ ಜಾಸ್ತಿ ಇರುವ ರೂಟ್ ಗಳಿಗೆ ನಾಲ್ಕು ಬಸ್ ಜಾಸ್ತಿ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಅಭಿಪ್ರಾಯ. ಇಲ್ಲದಿದ್ದರೆ ಕೊರೊನಾ 3ನೇ ಅಲೆಗೆ ನಾವೇ ಸಿದ್ಧತೆ ಮಾಡಿದಾಗೆ ಆಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು