1:35 PM Tuesday18 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಸಂಘನಿಕೇತನ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವದ ವೈಭವ: ಸಂಭ್ರಮದ ಉದ್ಘಾಟನೆ

31/08/2022, 18:05

ಚಿತ್ರ: ಮಂಜು ನೀರೇಶ್ವಾಲ್ಯ

ಮಂಗಳೂರು(reporterkarnataka.com) : ನಗರದ ಮಣ್ಣಗುಡ್ಡೆ ಯಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ ಅಮೃತ ಮಹೋತ್ಸವ ಸಂಭ್ರಮವಾಗಿದ್ದು, ಉದ್ಘಾಟನಾ ಸಮಾರಂಭ ಬುಧವಾರ ಭಕ್ತಿ ಸಂಭ್ರಮದಿಂದ ನಡೆಯಿತು.

ಇಂದಿನಿಂದ (ಆಗಸ್ಟ್ 31ರಿಂದ) ಸೆ.4ರವರೆಗೆ ಗಣೇಶೋತ್ಸವ ಜರುಗಲಿದೆ.

ಸಾರ್ವಜನಿಕ ಗಣೇಶ್ಜೋತ್ಸವದ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಕಾರ್ಯವಾಹ ಮುಕುಂದ್ ಅವರು ನೆರವೇರಿಸಿದರು.  

ವಿವಿಧ  ಧಾರ್ಮಿಕ , ಸಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸದ್ಭಕ್ತ ರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕಾಗಿ ಸಮಿತಿಯು ವಿನಂತಿಸಿಕೊಂಡಿದೆ. 

ಧ್ವಜಾರೋಹಣ, ವಂದೇಮಾತರಂ ಉದ್ಘಾಟಕರ ಸಂದೇಶ, ಸಭಾ ಕಾರ್ಯಕ್ರಮ ನಡೆಯಿತು.


ಗಣಹೋಮ ಬಳಿಕ ಸಾಯಂಕಾಲ ಹರಿನಾಮ ಸಂಕೀರ್ತನೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ರಾತ್ರಿ ಮೂಡಗಣಪತಿ ಸೇವೆ ಹಾಗೂ ರಂಗ ಪೂಜೆ ನಡೆದವು.  ಈ ಸಂದರ್ಭದಲ್ಲಿ ಸಂಘ ಚಾಲಕರಾದ ಡಾ .ವಾಮನ್  ಶೆಣೈ, ಸುನಿಲ್ ಆಚಾರ್ , ಡಾ . ಕಲಡ್ಕ ಪ್ರಭಾಕರ್ ಭಟ್ , ಗೌರವ ಅಧ್ಯಕ್ಷ ಪಿ . ರವೀಂದ್ರ ಪೈ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಎಂ . ಸತೀಶ್ ಪ್ರಭು , ಸುರೇಶ ಕಾಮತ್ , ಜೀವನರಾಜ್  ಶೆಣೈ  ಉಪಾಧ್ಯಕ್ಷರಾದ ಜೆ . ಕೆ. ರಾವ್ , ಆನಂದ ಪಾಂಗಳ , ಕೆ. ಪಿ. ಟೈಲರ್ , ಅಭಿಷೇಕ್ ಭಂಡಾರಿ ,   ಕೇಶವ  ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ , ರಘುವೀರ್ ಕಾಮತ್ , ಯಸ್ ಆರ್ ಕುಡ್ವ , ಗಣೇಶ್ ಪ್ರಸಾದ್ , ಜಯಪ್ರಕಾಶ್ ಮಂಗಳಾದೇವಿ ಸ್ವಾಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು