6:30 PM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಬಿಎಸ್ಸೆನ್ನೆಲ್ ಟವರ್ ನಿರ್ಮಿಸಲು ಪಡೆದ ಹಣ ವಂಚನೆ: 36.70 ಲಕ್ಷ ಪರಿಹಾರ, 5 ಸಾವಿರ ದಂಡ ನೀಡಲು ಕೋರ್ಟ್ ಆದೇಶ

26/08/2022, 15:20

ಮಂಗಳೂರು(reporterkarnataka.com): ಬಿಎಸ್ಸೆನ್ನೆಲ್ ಟವರ್ ನಿರ್ಮಿಸಲೆಂದು
ಪಡೆದ 36 ಲಕ್ಷ ರೂ. ಹಣ ಹಿಂತಿರುಗಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಜೆಎಂಎಫ್ ಸಿ 5ನೇ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿಯು 36,70,000 ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.

ಬಿಎಸ್ಸೆನ್ನೆಲ್ ಗುತ್ತಿಗೆದಾರರಾದ.ಮಂಗಳೂರಿನ ಮಠದಕಣಿ ಮಾರ್ವೆಲ್ಲ ಅಪಾರ್ಟ್ ಮೆಂಟಿನ ನಿವಾಸಿಯಾದ ಪ್ರಕಾಶ್ ವಿ. ನಾಯಕ್ ಅವರು ಪ್ರಿಯಾ ಎಸ್. ಭಂಡಾರಿ ಅವರಿಂದ ಬಿಎಸ್ಸೆನ್ನೆಲ್ ಟವರ್ ನಿರ್ಮಿಸಲು 36 ಲಕ್ಷ ರೂ. ಪಡೆದಿದ್ದರು. ನಂತರ ಪ್ರಕಾಶ್ ನಾಯಕ್ ಅವರು ಹಣ ಹಿಂತಿರುಗಿಸಲಿಲ್ಲ. ಅವರು ಕೊಟ್ಟ ಚೆಕ್ ಕೂಡ ಬೌನ್ಸ್ ಆಗಿತ್ತು. ಈ ಕುರಿತು ಪ್ರಿಯಾ ಭಂಡಾರಿ ಅವರು ಪ್ರಕಾಶ್ ನಾಯಕ್ ವಿರುದ್ಧ ವಿಶ್ವಾಸದ್ರೋಹ ಮತ್ತು ಮೋಸ ಮಾಡಿದ ಪ್ರಕರಣ ದಾಖಲಿಸಿದ್ದರು. ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಆ್ಯಕ್ಟ್ ಪ್ರಕಾರ ಮಂಗಳೂರಿನ ಜೆಎಂ ಎಫ್ ಸಿ 5ನೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಕುರಿತಂತೆ ಅನೇಕ ಸಾಕ್ಷ್ಯಾಧಾರಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚಿನ್ಮಯಿ ಅವರು ಪ್ರಿಯಾ ಭಂಡಾರಿ ಅವರಿಗೆ ಆರೋಪಿ ಪ್ರಕಾಶ್ ನಾಯಕ್ ಅವರು 36,70,000 ರೂ. ಪರಿಹಾರ ಮತ್ತು 5 ಸಾವಿರ ದಂಡ ನೀಡುವಂತೆ ತೀರ್ಪು ನೀಡಿದ್ದಾರೆ. ಆರೋಪಿಯು ದಂಡ ಪಾವತಿಸಲು ವಿಫಲರಾದರೆ 6 ತಿಂಗಳು ಸಾಧಾರಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

ಪ್ರಿಯಾ ಭಂಡಾರಿ ಅವರ ಪರವಾಗಿ ಹಿರಿಯ ವಕೀಲರಾದ ಆಶಾ ನಾಯಕ್ , ಜೀವನ್ ಕೊಲ್ಯ ಹಾಗೂ ಚೈತ್ರಾ ವಾದಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು