3:26 AM Wednesday25 - March 2026
ಬ್ರೇಕಿಂಗ್ ನ್ಯೂಸ್
ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ತುಳು, ಕನ್ನಡ ಎರಡೂ ಭಾಷೆಯಲ್ಲಿ ರಾಮಾಯಣ ರಚಿಸಿದ ಕೀರ್ತಿ ಮಂದಾರ ಕೇಶವ ಭಟ್ಟರದ್ದು: ಮಾಜಿ ಸಚಿವ ಅಭಯಚಂದ್ರ ಜೈನ್

06/08/2022, 16:34

ಮಂಗಳೂರು(reporterkarnataka.com) : ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ರಾಮಾಯಣವನ್ನು ರಚಿಸಿದ ಕೀರ್ತಿ ಮಂದಾರ ಕೇಶವ ಭಟ್ಟರದ್ದು, ಜಗತ್ತಿನಲ್ಲಿ ಎಲ್ಲೂ ಎರಡು ಭಾಷೆಯಲ್ಲಿ ಒಂದೇ ಕವಿ ರಾಮಾಯಣವನ್ನು ರಚಿಸಿದ ಉಲ್ಲೇಖಗಳಿಲ್ಲ. ಮಂದಾರ ಕೇಶವ ಭಟ್ಟರಿಗೆ ಮಾತ್ರ ಇದು ಸಾಧ್ಯವಾಯಿತು ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಶ್ಲಾಘಿಸಿದರು.

ಸಾಂಸ್ಕೃತಿಕ ನಗರಿ ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಂದಾರ ರಾಮಾಯಣ ಸಪ್ತಾಹದ ಸಭಾ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.

ಮಂದಾರ ರಾಮಾಯಣ ಎಂಬ ಕನ್ನಡ ಮತ್ತು ತುಳು ಸರಳ ಆಡು ಭಾಷೆಯಲ್ಲಿ ರಚಿತವಾಗಿದ್ದು, ಇದು ಸಾಮಾನ್ಯ ಜನರಿಗೂ ರಾಮಾಯಣವನ್ನು ತಿಳಿಸುವ ಕವಿ ಉದ್ದೇಶವನ್ನು ತಿಳಿಸುತ್ತದೆ. ಕವಿ ಮಂದಾರರ  ರಾಮಾಯಣವನ್ನು ತಿಳಿಸುವ ಸಪ್ತಾಹಕ್ಕೆ ಯಶಸ್ಸಾಗಲಿ. ನಾವೆಲ್ಲರೂ ಕವಿ ಮಂದಾರರ ರಾಮಾಯಣದ ಆದರ್ಶಗಳನ್ನು
ಪಾಲಿಸೋಣ, ಮಂದಾರರ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ಬರಲಿ ಎಂದು ಶುಭ ಹಾರೈಸಿದರು. 

ಇದೇ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಸರಪಾಡಿ ಹಾಗೂ ದಾಮೋದರ ನಿಸರ್ಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್. ಡಿ. ಸಂಪತ್ ಸಾಮ್ರಾಜ್ಯ, ಅಬ್ದುಲ್ಲಾ ಪುತ್ತಿಗೆ, ಮಂದಾರರ ಪುತ್ರಿ ಶಾಂಭವಿ ಬಾಲಕೃಷ್ಣ ಭಟ್, ದಿನೇಶ್ ಆನಡ್ಕ,  ಸಂಘಟಕರಾದ ಡಾ. ರಾಜೇಶ್ ಆಳ್ವ, ಧನಕೀರ್ತಿ ಬಲಿಪ, ಡಾ.ಮಂದಾರ ರಾಜೇಶ್ ಭಟ್, ಚಂದ್ರಹಾಸ ದೇವಾಡಿಗ, ಭಾಸ್ಕರ ಕಾಸರಗೋಡು, ಪ್ರಮೋದ್ ಸಪ್ಪೆ, ಮಂದಾರ ಶಾರದಾಮಣಿ ಉಪಸ್ಥಿತರಿದ್ದರು.

ದಿನಕರ ಪಚ್ಚನಾಡಿ, ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ಕಂಠಸಿರಿಯಿಂದ ಮೂಡಿಬಂದ ವಾಚನ ವ್ಯಾಖ್ಯಾನ ಕಾರ್ಯಕ್ರಮ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು