6:28 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಭಾರೀ ಕಾರ್ಯಾಚರಣೆ: 3 ಕೋಟಿ ಮೌಲ್ಯದ 3.12 ಕೆಜಿ ಬ್ರೌನ್‌ ಶುಗರ್ ಪೊಲೀಸ್ ವಶಕ್ಕೆ; 3 ಮಂದಿ ಬಂಧನ

16/05/2022, 09:27

ಪಾಟ್ನಾ(reporterkarnataka.com):

ಮಾದಕ ದ್ರವ್ಯದ ವಿರುದ್ಧ ಒಡಿಶಾ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಒಡಿಶಾದ ಪುರಿಯ ಮಂಗಲ ಘಾಟ್‌ ಚಕ್ಕಾ ಪ್ರದೇಶದಲ್ಲಿ 3 ಕೋಟಿ ಬೆಲೆಬಾಳುವ ಸುಮಾರು 3 ಕೆಜಿ ಮಾದಕ ದ್ರವ್ಯವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೋಲೀಸರು 3.12 ಕೆಜಿ ಮೌಲ್ಯದ ಬ್ರೌನ್‌ ಶುಗರ್‌ ಅನ್ನು ವಶಪಡಿಸಿಕೊಂಡಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಒಡಿಶಾ ಪೋಲೀಸ್‌ ವಿಭಾಗದ ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ ವತಿಯಿಂದ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರನ್ನು ಸುಶಾಂತ್‌ ಪಟ್ನಾಯಕ್‌ ಅಲಿಯಾಸ್‌ ನಂದಾ, ರಾಜ್‌ ಕಿಶೋರ್‌ ಸಾಹೂ, ,ಮಾನಸ್‌ ಸಾಹೂ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಅಂತರ್‌ ಜಿಲ್ಲಾ ಡ್ರಗ್‌ ಪೂರೈಕೆದಾರರಾಗಿದ್ದರು ಎನ್ನಲಾಗಿದೆ. ಬಂಧಿತರಿಂದ 20 ಸಾವಿರ ನಗದು, ನಾಲ್ಕು ಮೊಬೈಲ್‌, ಒಂದು ಕ್ಯಾಶ್‌ ಕೌಂಟಿಂಗ್‌ ಮಸೀನ್‌ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಇದು ಇಲ್ಲಿಯವರೆಗಿನ ಒಡಿಶಾ ಪೋಲೀಸ್‌ ಕಾರ್ಯಾಚರಣೆಯಲ್ಲಿ ಅತಿ ದೊಡ್ಡದು ಎನ್ನಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು