5:47 PM Monday12 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಮಾನ್ವಿಗಾಗಿ ಸ್ಟೆಮ್ ಸೆಲ್ ಅಭಿಯಾನ: ಸ್ವಯಂ ಪ್ರೇರಿತರಾಗಿ ಸಲೈವ ನೀಡಿದ ಕರಾವಳಿಗರು!! 

18/04/2022, 21:28

ಮಂಗಳೂರು(reporterkarnataka.com) ಕಾರ್ಕಳದ ಆರು ವರ್ಷದ ಮಗು ಮಾನ್ವಿ ಕಾಮತ್ ಅಪರೂಪದ ಅನುವಶೀಯ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅವಳನ್ನು ಬದುಕಿಸಲು ಆರೋಗ್ಯವಂತ ವ್ಯಕ್ತಿಯ ದೇಹದೊಳಗಿನ ಕಾಂಡ ಕೋಶ {ಸ್ಟೆಮ್ ಸೆಲ್}ಅಗತ್ಯವಿದ್ದು, ಅದಕ್ಕಾಗಿ ಮಂಗಳೂರಿನ ಎರಡು ಕಡೆ ಭಾನುವಾರ ಸ್ಟೆಮ್ ಸೆಲ್ ಅಭಿಯಾನ ಕೈಗೊಳ್ಳಲಾಯಿತು. ಬೆಳಿಗ್ಗೆ ಮಂಗಳೂರಿನ ಭಾರತ್ ಮಾಲ್ ಮತ್ತು ಸಂಜೆ ಕದ್ರಿ ಪಾರ್ಕಿನಲ್ಲಿ ಯೂತ್ ಆಫ್ ಜಿಎಸ್ ಬಿ ಕಾರ್ಯಕರ್ತರು ಡಿಕೆಎಂಎಸ್ ಬಿಎಂಎಸ್ ಟಿ ಸಹಯೋಗದಲ್ಲಿ ಅಭಿಯಾನ ನಡೆಸಿದರು. ನಮ್ಮ ಬಾಯೊಳಗಿನ ಸಲೈವಾ ತೆಗೆದುಕೊಂಡು ಅದನ್ನು ಜರ್ಮನಿಗೆ ಕಳುಹಿಸಿ ಅಲ್ಲಿ ಪರೀಕ್ಷೆಗೆ ಒಳಪಡಿಸಿ ಅದು ಮಗುವಿನ ದೇಹಕ್ಕೆ ಹೊಂದಾಣಿಕೆಯಾದರೆ ಮುಂದಿನ ವೈದ್ಯಕೀಯ ಪ್ರಕ್ರಿಯೆಗಳನ್ನು ಮಾಡಿ ಮಾನ್ವಿಯನ್ನು ಉಳಿಸಬಹುದು ಎಂದು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿದರು.


ಹಲವಾರು ಜನ ಸ್ವಯಂಪ್ರೇರಿತರಾಗಿ ಮುಂದೆ ಬಂದು ಸಲೈವ ನೀಡಿ ಮಾದರಿ ಕಾರ್ಯದಲ್ಲಿ ಸಹಕರಿಸಿದರು. ಅಭಿಯಾನದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನ ಮಂಗಲ್ಪಾಡಿ ನರೇಶ್ ಶೆಣೈ, ಹನುಮಂತ ಕಾಮತ್, ಡಿಕೆಎಂಎಸ್ ಸರಕಾರೇತರ ಸಂಸ್ಥೆಯ ಅಖಿಲಾ, ಮಹಾಮಿತ್ರ, ಯೂತ್ ಆಪ್ ಜಿಎಸ್ ಬಿಯ ಕಿರಣ್ ಶೆಣೈ, ನಾಗೇಂದ್ರ ಶೆಣೈ, ಸಂತೋಷ್ ಶೆಣೈ ಸಹಿತ ಹಲವಾರು ಸ್ವಯಂಸೇವಕರು ಭಾಗವಹಿಸಿದರು. ಮಂಗಳೂರಿನ ಟ್ರಾಫಿಕ್ ಎಸಿಪಿ ನಾಗರಾಜ್, ಮಂಗಳೂರಿನ ವಕೀಲರ ಪರಿಷತ್ತಿನ ರಾಘವೇಂದ್ರ ಸಹಿತ ಹಲವಾರು ಗಣ್ಯರು ಆಗಮಿಸಿ ಅಭಿಯಾನದಲ್ಲಿ ಭಾಗವಹಿಸಿದರು. ಈ ಅಭಿಯಾನ ಮುಂದಿನ ತಿಂಗಳು ಮಂಗಳೂರಿನ ಹಲವಾರು ಕಡೆ ನಡೆಯಲಿದ್ದು, ನಾಗರಿಕರು ಮಗುವಿನ ಜೀವ ಉಳಿಸಲು ಸಹಕರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು