4:47 PM Wednesday23 - April 2025
ಬ್ರೇಕಿಂಗ್ ನ್ಯೂಸ್
Terror Attack | ಕಾಶ್ಮೀರ: ಭಾರತೀಯ ಸೇನಾ ಕಾರ್ಯಾಚರಣೆಗೆ ಹತರಾದ ಉಗ್ರಗಾಮಿಗಳು: ಕಣಿವೆಯಲ್ಲಿ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ: ಇಬ್ಬರು… ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ…

ಇತ್ತೀಚಿನ ಸುದ್ದಿ

ಜೆಪ್ಪು ವಾರ್ಡ್:  ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ

11/04/2022, 23:22

ಮಂಗಳೂರು(reporterkarnataka.com): ಮಹಾನಗರ ಪಾಲಿಕೆಯ ಜೆಪ್ಪು ವಾರ್ಡಿನಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಜೆಪ್ಪು ವಾರ್ಡಿನ ಸೂಟರ್ ಪೇಟೆಯ 2ನೇ ಮುಖ್ಯ ರಸ್ತೆ ಹಾಗೂ  3ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ, 8ನೇ ಅಡ್ಡರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದ್ದು ಕಾಮಗಾರಿ ಪೂರ್ಣಗೊಳ್ಳುವ ವರೆಗೂ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಜೆಪ್ಪು ವಾರ್ಡ್ ಮನಪಾ ಸದಸ್ಯ ಭರತ್ ಕುಮಾರ್ ಎಸ್, ಪಾಲಿಕೆ ನಾಮನಿರ್ದೇಶಿತ ಸದಸ್ಯ ರಮೇಶ್ ಕಂಡೆಟ್ಟು, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುರೇಖಾ ರಾವ್, ಮಂಡಲ ಹಿಂದುಳಿದ ವರ್ಗಗಳ ಮೋಚಾದ ಪ್ರಧಾನ ಕಾರ್ಯದರ್ಶಿ ಗೌತಮ್ ಬೋಳಾರ್, ಎಸ್‌ಸಿ ಮೋರ್ಚಾ ಅಧ್ಯಕ್ಷ ರಘುವೀರ್ ಬಾಬುಗುಡ್ಡೆ, ಮಂಡಲ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಡಿಸಿಲ್ವ, ಅರ್ಶದ್ ಪೋಪಿ, ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಘಣಶ್ಯಾಮ್, ಶಕ್ತಿಕೇಂದ್ರ ಅಧ್ಯಕ್ಷೆ ಅಮಿತಾ ಕೆ, ಬೂತ್ ಅಧ್ಯಕ್ಷರಾದ ವಾಣಿಶ್ರೀ, ತರುಣ್ ಬಪ್ಪಾಲ್, ಜನಾರ್ಧನ್,  ರವೀಂದ್ರ ಎಸ್, ಶೈಲೇಶ್ ಕುಮಾರ್, ಪದ್ಮಾಕರ್, ಪ್ರಶಾಂತ್ ಕನಕರಬೆಟ್ಟು, ನಿರಂಜನ್ ಕುಮಾರ್ ಎಸ್, ಹೇಮಂತ್, ರಾಜೇಶ್ ಕುಮಾರ್,  ವಿಜಯ್ ಬೆನೆಡಿಕ್ಟ್, ಚಿತ್ರಾ ಬಪ್ಪಾಲ್, ನವೀನ್, ಬಾಬು, ಸಂತೋಷ್ ಕೋಟ್ಯಾನ್, ಸಂದೀಪ್ ಎಸ್, ಚಂದ್ರಹಾಸ್, ರಾಜ, ಕಿಶೋರ್, ತಾರಮಣಿ, ಇಂದಿರಾ, ಬೇಬಿ, ದೀನಾ, ಗಾಯತ್ರಿ ದೇವಿ, ವಿಶ್ವನಾಥ್ ಉಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು