10:40 AM Thursday5 - March 2026
ಬ್ರೇಕಿಂಗ್ ನ್ಯೂಸ್
ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು

ಇತ್ತೀಚಿನ ಸುದ್ದಿ

ಮಂಗಳೂರು: ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ

05/04/2022, 22:26

ಮಂಗಳೂರು(reporterkarnataka.com): ಜೀವನದ ವಿವಿಧ ಅನುಭವಗಳು ಉತ್ತಮ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತಿವೆ. ಆದ್ದರಿಂದ ಬದುಕಿನ ಎಲ್ಲಾ ಹಂತಗಳನ್ನು ಚೆನ್ನಾಗಿ ಅನುಭವಿಸಿ ಅದರ ರುಚಿಯನ್ನು ಸವಿಯ ಬೇಕು ಎಂದು ವಿಶಾಖ ಪಟ್ಟಣದ ಗೀತಂ ಯೂನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸಸ್‌ನ ಸಹ ಕುಲಾಧಿಪತಿ ಹಾಗೂ ಭುವನೇಶ್ವರ ಏಮ್ಸ್‌ನ ಮಾಜಿ ನಿರ್ದೇಶಕರಾದ ಡಾ. ಗೀತಾಂಜಲಿ ಬಟ್ಮನಬನ್ ಹೇಳಿದರು.

ಅವರು ನಗರದ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಈ ಕ್ಯಾಂಪಸ್‌ನಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಪದವಿ ಪಡೆದು ಹೊರ ಬರುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ನೆರವು ಒದಗಿಸುವ ಸತ್ಪ್ರಜೆಗಳಾಗ ಬೇಕು. ಕಲಿಕೆ ನಿರಂತರವಾಗಿದ್ದು, ಬದುಕಿರುವ ತನಕ ಕಲಿಯುತ್ತಿರ ಬೇಕು. ಉತ್ತಮ ವಿಚಾರಗಳಿಗೆ ಸದಾ ಸ್ಪಂದಿಸುವ ವ್ಯಕ್ತಿಗಳಾಗ ಬೇಕೆಂದರು.

ಗೌರವ ಅತಿಥಿಯಾಗಿದ್ದ  ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಜಾನ್ ಮೈಕಲ್ ಡಿಕುನ್ಹಾ  ಅವರು ಮಾತನಾಡಿ, ವೈದ್ಯರು, ನರ್ಸ್‌ಗಳು ಮತ್ತು ನ್ಯಾಯಾಧೀಶರ ಸಹಿತ ಎಲ್ಲಾ ವೃತ್ತಿನಿರತರು ತಮ್ಮ ಕೆಲಸ ಕಾರ್ಯಗಳಲ್ಲಿ ವಿಶ್ವಾಸಾರ್ಹತೆಯನ್ನು ಕಾಯ್ದು ಕೊಂಡು ಜನರು ತಮ್ಮ ಮೇಲೆ ಇರಿಸಿದ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸ ಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಮಂಗಳೂರಿನ ಬಿಷಪ್ ಅತಿ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ  ಅವರು ಮಾತನಾಡಿ, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ವೃತ್ತಿನಿರತರು ಸಹಾನುಭೂತಿಯಿಂದ ಕರ್ತವ್ಯ ನಿರ್ವಹಿಸಿ ವೃತ್ತಿಯ ಘನತೆ, ಗೌರವವನ್ನು ಕಾಯ್ದುಕೊಂಡು ಬರ ಬೇಕೆಂದರು.

೬೧೫ ವಿದ್ಯಾರ್ಥಿಗಳಿಗೆ ಪದವಿ

ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ೧೪೭ ಎಂಬಿಬಿಎಸ್, ೮೨ ಸ್ನಾತಕೋತ್ತರ ಪದವಿ, ಒಬ್ಬರಿಗೆ ಪೀಚ್‌ಡಿ, ಒಬ್ಬರಿಗೆ ಎಂಸಿಎಚ್, ೮ ಎಂಪಿಟಿ, ೪೧ ಬಿಪಿಟಿ, ೧೧ ಎಂಎಸ್‌ಸಿ, ೧೧ ಎಂಎಲ್‌ಟಿ, ೨೩ ಎಂಎಚ್‌ಎ, ೩೧ ಬಿಎಸ್‌ಸಿ ಎಂಎಲ್‌ಟಿ, ೨೪ ಬಿಎಸ್‌ಸಿ ಎಂಐಟಿ, ೭ ಬಿಎಸ್‌ಸಿ ಆರ್‌ಟಿ, ೩೨ ಸ್ಪೀಚ್ ಆಂಡ್ ಹಿಯರಿಂಗ್, ೫೪ ಜಿಎನ್‌ಎಂ, ೯೩ ಬಿಎಸ್‌ಸಿ ನರ್ಸಿಂಗ್, ೫೧ಪಿಬಿಎಸ್‌ಸಿ ನರ್ಸಿಂಗ್, ೯ ಎಂಎಸ್‌ಸಿ ನರ್ಸಿಂಗ್ ಸೇರಿದಂತೆ ವಿವಿಧ್ ಕೋರ್ಸುಗಳ ಒಟ್ಟು ೬೧೫ ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ| ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ  ಸ್ವಾಗತಿಸಿ ವಿವಿಧ ಕಾಲೇಜುಗಳ ವರದಿ ಮಂಡಿಸಿದರು. ಪದವಿ ಪ್ರದಾನ ಸಮಾರಂಭದ ಸಂಚಾಲಕ ವಂ| ಅಜಿತ್ ಬಿ. ಮಿನೇಜಸ್ ವಂದಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಡಾ| ಮಯೂರಿ ಜಿ. ‘ಭಟ್, ವಿಯೋಲಾ ತೋಮಸ್ ಫೆರ್ನಾಂಡಿಸ್, ವೀಣಾ ಮೆಲಿಶಾ ಫೆರ್ನಾಂಡಿಸ್, ಕೇಸಿಯಾ ಎಲ್ಸಾ ವರ್ಗೀಸ್, ಎಂ. ಜಿನಿಕಾ ಜೋನಿ, ಮೆಕ್ಲಿನ್ ಜಾರ್ಜ್ ಲೆವಿಸ್ ಅವರಿಗೆ ಅಧ್ಯಕ್ಷರ ಚಿನ್ನದ ಪದಕ ನೀಡಲಾಯಿತು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರುಡಾಲ್ಫ್ ರವಿ ಡೇಸಾ, ಸಹಾಯಕ ಆಡಳಿತಾಧಿಕಾರಿ ವಂ| ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವಂ| ನೆಲ್ಸನ್ ಧೀರಜ್ ಪಾಯ್ಸ್, ವಂ| ಜಾರ್ಜ್ ಜೀವನ್ ಸಿಕ್ವೇರಾ, ಡೀನ್‌ಗಳಾದ ಡಾ| ಆಂಟನಿ ಸಿಲ್ವನ್ ಡಿ ಸೋಜಾ, ಡಾ| ಉರ್ಬನ್ ಜೆ.ಎ. ಡಿ ಸೋಜಾ, ಪ್ರಾಂಶುಪಾಲರಾದ ಸಿ| ಜೆಸಿಂತಾ ಡಿ ಸೋಜಾ, ಪ್ರೊ| ಅಖಿಲೇಶ್ ಪಿ.ಎಂ., ಸಿ| ನ್ಯಾನ್ಸಿ ಮಥಾಯಸ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು