ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಹಿಂದೂ ಸಂಘಟನೆ ಮುಖಂಡರಿಂದ ಕರಪತ್ರ ಹಂಚಿಕೆ
30/03/2022, 17:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರಿಂದ ಹಲಾಲ್ ಮಾಂಸ ಖರೀದಿಸದಂತೆ ಕರಪತ್ರ ಹಂಚಿಕೆ ಮಾಡಲಾಯಿತು.
ಶ್ರೀರಾಮ ದೇವಸ್ಥಾನದಿಂದ ವಿಜಯಪುರ ಮುಖ್ಯರಸ್ತೆಯಲ್ಲಿ ಕರಪತ್ರ ಹಂಚಿಕೆ ಮಾಡಲಾಯಿತು. 15ಕ್ಕೂ ಹೆಚ್ಚು ಕಾರ್ಯಕರ್ತರಿಂದ ಕರಪತ್ರ ಹಂಚಿಕೆ ಮಾಡಲಾಯಿತು.
ದಿನಸಿ ಸಾಮಾಗ್ರಿಗಳನ್ನೂ ಹಿಂದೂ ಅಂಗಡಿಯಲ್ಲೇ ಖರೀದಿಸುವಂತೆ ಕಾರ್ಯಕರ್ತರು ಮನವಿ ಮಾಡಿದರು. ಯುಗಾದಿ ಮರುದಿನದ ಹೊಸ ತೊಡಕಿನಂದು ಮುಸ್ಲಿಂ ಬಳಿ ಮಾಂಸ ಖರೀದಿಸಬೇಡಿ ಎಂದು ಮನವಿ ಮಾಡಿಸಿದರು.