ಇತ್ತೀಚಿನ ಸುದ್ದಿ
ಬೆಳ್ತಂಗಡಿ: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ವಿದ್ಯಾರ್ಥಿ ನೀರುಪಾಲು
10/12/2021, 22:52
ಬೆಳ್ತಂಗಡಿ(reporterkarnataka.com) : ಹಳೆ ರಸ್ತೆ ವನ ಎಂಬಲ್ಲಿ ಇಬ್ಬರು ಗೆಳೆಯರು ಕಾಲೇಜಿಗೆ ಮಧ್ಯಾಹ್ನದ ವರೆಗೆ ರಜೆ ಇದ್ದ ಕಾರಣ ಸ್ನಾನ ಮಾಡಲು ತೆರಳಿದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ನೀರುಪಾಲಾದ ಘಟನೆ ನಡೆದಿದೆ.

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮೂಲತಃ ಚಿಕ್ಕಮಗಳೂರು ಮೂಲದ ನಿವಾಸಿ ಸಮರ್ಥ್(18) ಸಾವನ್ನಪ್ಪಿದ ವಿದ್ಯಾರ್ಥಿ.
ಚಿಕ್ಕಮಗಳೂರು ನಿವಾಸಿಯಾಗಿರುವ ಸಮರ್ಥ್ ಬೆಳ್ತಂಗಡಿ ಮೆಸ್ ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ಮಧ್ಯಾಹ್ನದ ನಂತರ

ಕಾಲೇಜಿಗೆ ರಜೆ ಇದ್ದ ಕಾರಣ ಇನ್ನೊಬ್ಬ ಗೆಳೆಯನ ಜೊತೆ ಸ್ನಾನ ಮಾಡಲು ತೆರಳಿದ್ದಾನೆ. ಗೆಳೆಯ ಪಕ್ಕದಲ್ಲಿ ಇದ್ದು ಸಮರ್ಥ್ ಮಾತ್ರ ನೀರಿಗಿಳಿದ್ದಾನೆ ಏಕಾಏಕಿ ಆತ ನಾಪತ್ತೆಯಾದಾಗ ಬೊಬ್ಬೆ ಹೊಡೆದು ಸ್ಥಳೀಯರಿಗೆ ಮಾಹಿತಿ ನೀಡಿದ್ದು ನಂತರ ಸ್ಥಳೀಯರ ಸಹಕಾರದಿಂದ ಶವ ಮೇಲೆ ತೆಗೆದು ಬೆಳ್ತಂಗಡಿ ಶವಗಾರದಲ್ಲಿ ಇರಿಸಲಾಗಿದೆ.
ಸುದ್ದಿ ತಿಳಿದ ಶ್ರೀ ಗುರುದೇವ ಕಾಲೇಜಿನ ಅಧ್ಯಕ್ಷ ಹಾಗೂ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಆಸ್ಪತ್ರೆಗೆ ಬಂದು ಮುಂದಿನ ಕ್ರಮದ ಬಗ್ಗೆ ಸಹಕರಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














