3:23 PM Monday22 - June 2026
ಬ್ರೇಕಿಂಗ್ ನ್ಯೂಸ್
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ಮಣಿಪಾಲ: ಹಾಸ್ಟೆಲ್ ಸಿಗದಿದ್ದಕ್ಕೆ ಪಾಲಿಟೆಕ್ನಿಕ್ ವಿದ್ಯಾರ್ಥಿ ಪಿಜಿಯಲ್ಲಿ ಆತ್ಮಹತ್ಯೆ

02/12/2021, 09:43

ಮಣಿಪಾಲ(reporterkarnataka.com): ಮೆಕ್ಯಾನಿಕ್ ಡಿಪ್ಲೋಮಾ ವಿದ್ಯಾರ್ಥಿಯೋರ್ವ ಜೀವನದಲ್ಲಿ ಮನನೊಂದು ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಚಾರ್ವಿಕ್ ಪಿಜಿಯಲ್ಲಿ ನಡೆದಿದೆ.

ಸುನೀಲ್ ಕುಮಾರ್ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮಣಿಪಾಲ ಈಶ್ವರನಗರದ ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ 1ನೇ ವರ್ಷದ ಮೆಕ್ಯಾನಿಕ್ ಡಿಪ್ಲೋಮಾ ವ್ಯಾಸಂಗ ಮಾಡಿಕೊಂಡಿದ್ದನು. ಒಂದು ತಿಂಗಳಿನಿಂದ ಕಾಲೇಜು ಆರಂಭವಾದ ಕಾರಣ ಸುನೀಲ್ ಕುಮಾರ್ ಚಾರ್ವಿಕ್ ಪಿಜಿಯಲ್ಲಿ ವಾಸವಿದ್ದನು. ಆತನಿಗೆ ಪಿಜಿಯಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲದೇ ಇದ್ದು, ಈ ಬಗ್ಗೆ ತಂದೆ- ತಾಯಿಯ ಬಳಿ ಹೇಳಿಕೊಂಡಿದ್ದನು. ಅವರು ಮುಂದಿನ ವರ್ಷ ಹಾಸ್ಟೆಲ್ ಸಿಗುತ್ತದೆ, ಅಲ್ಲಿಯವರೆಗೂ ಪಿಜಿಯಲ್ಲಿ ಇರುವಂತೆ ಸಮಾಧಾನಪಡಿಸಿದ್ದರು. ಆದರೆ ಸುನಿಲ್ ಇದೇ ಚಿಂತೆಯಿಂದ ಅಥವಾ ಇತರೆ ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದ ಮನನೊಂದು  ಸೋಮವಾರ (ನ.29) ಬೆಳಿಗ್ಗೆ 9.45ರಿಂದ ಮಧ್ಯಾಹ್ನ 12 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಪಿಜಿಯ ಕೋಣೆಯ ಸೀಲಿಂಗ್ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು