2:05 AM Monday12 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಮಸ್ಕಿ: ಸತ್ಯಧ್ವನಿ ಪತ್ರಿಕೆ 4ನೇ ವರ್ಷದ ವಿಶೇಷಾಂಕ ಅನಾವರಣ; ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಕೆ

28/11/2021, 09:35

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ ರಾಯಚೂರು

info.reporterkarnataka@gmail.com 

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೆಯಾದ ಇತಿಹಾಸವಿದೆ. ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕೆಗಳು  ಮಾಡುತ್ತಿವೆ. ಸಮಾಜದಲ್ಲಿ ಪತ್ರಿಕಾರಂಗಕ್ಕೆ ದೊಡ್ಡ ಗೌರವ ಇದೆ ಮತ್ತು ಪತ್ರಿಕೆಯು ನೊಂದವರ ಧ್ವನಿಯಾಗಬೇಕು ಎಂದು ಮಸ್ಕಿಯ ಶ್ರೀ ಷಟಸ್ಥಲ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಅವರು ಅಂತರಗಂಗೆ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಸಾರಥ್ಯದಲ್ಲಿ ಮೂಡಿಬರುವ ಸತ್ಯಧ್ವನಿ ಪತ್ರಿಕೆ 4ನೇ ವರ್ಷದ ವಿಶೇಷಾಂಕ ಅನಾವರಣಗೊಳಿಸಿ ಮಾತನಾಡಿದರು.

ಸಮಾಜ ಮೆಚ್ಚುವಂತಹ ಸತ್ಯ ಅಂಶಗಳ ಸುದ್ದಿಗಳು ಪತ್ರಿಕೆಯಿಂದ ಹೊರ ಬಂದಾಗ ಪತ್ರಿಕೆಗೆ ಗೌರವ ಸಿಗುತ್ತದೆ. ಅಂತಹ ನಿಟ್ಟಿನಲ್ಲಿ ಅಂತರಗಂಗೆ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಸಾರಥ್ಯದಲ್ಲಿ ಮೂಡಿಬರುವ ಸತ್ಯ ಧ್ವನಿ ಪತ್ರಿಕೆ ಕೆಲಸ ಮಾಡುತ್ತಿದೆ. ಸಾಲಿಮಠ ಅವರಿಂದ ಒಳ್ಳೆಯ ಸುದ್ದಿಗಳು ಸಮಾಜದಲ್ಲಿ ಬಿತ್ತರವಾಗಲಿ. ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಲಿ ಎಂದು ಹಾರೈಸಿದರು.

ಸಮಾಜದ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಸತ್ಯ ಮಠ ಮಾತನಾಡಿ, ನಮ್ಮ ಸಮಾಜದ ಪತ್ರಿಕೆಯ ಸಂಪಾದಕರಿಗೆ ಶುಭವಾಗಲಿ. ಸಮಾಜ ಮೆಚ್ಚುವಂತ ವರದಿಗಳು ಸತ್ಯ ಧ್ವನಿ ದಿನಪತ್ರಿಕೆಯಿಂದ ಹೊರಬರಲಿ ಎಂದರು.

ಸಮಾಜ ಹಾಗೂ ಪತ್ರಿಕೆಯ ಪರವಾಗಿ ಗಣ ಮಠದಯ್ಯ ಸ್ವಾಮಿ ಸಾಲಿಮಠ ಮಾತನಾಡಿ,ಪತ್ರಿಕಾರಂಗವೂ ತನ್ನದೆಯಾದ ಇತಿಹಾಸವನ್ನು ಒಳಗೊಂಡಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆಗಳಲ್ಲಿ ನಿಖರ ಮತ್ತು ನೈಜ ಸುದ್ದಿಗಳು ಮೂಡಿದಾಗ ಸಮಾಜದಲ್ಲಿ ಪತ್ರಿಕೆಗಳಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಂಗಮ ಸಮಾಜ ಯುವ ಮುಖಂಡರು, ಸದಸ್ಯರು, ವೀರಶೈವ ಧರ್ಮದ ಮಸ್ಕಿಯ ಮುಖಂಡರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು