5:56 AM Wednesday4 - March 2026
ಬ್ರೇಕಿಂಗ್ ನ್ಯೂಸ್
ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

ಡಿಗ್ಗಿ ಸಂಗಮೇಶ್ವರನಿಗೆ 101 ಸಿಡಿಗಾಯಿ ಒಡೆದು ಹರಕೆ ತೀರಿಸಿದ ಸಿಂದಗಿ ನೂತನ ಶಾಸಕ ಭೂಸನೂರ

06/11/2021, 11:10

ವಿಜಯಪುರ(reporterkarnataka.com);
ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಸಿಂದಗಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ಶಹಾಪೂರ ತಾಲೂಕಿನ ಡಿಗ್ಗಿ ಸಂಗಮೇಶ್ವರ ದೇವಾಲಯದ ೧೦೧ ಮೆಟ್ಟಲಗಳಿಗೆ ಸಿಡಿಗಾಯಿ ಒಡೆದು ಹರಕೆ ತೀರಿಸಿದರು.

ಡಂಬಳ ಗ್ರಾಮದ ಬಿಜೆಪಿ ಮುಖಂಡ ಸಂತೋಷಗೌಡ ಪಾಟೀಲ ಡಂಬಳ ಅವರು ಹರಕೆ ಹೊತ್ತಿಕೊಂಡಿರುವ ನಿಮಿತ್ತವಾಗಿ ಡಿಗ್ಗಿ ಸಂಗಮೇಶ್ವರಗೆ ಹರಕೆ ನೀಡಲಾಯಿತು.

ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದ ನೂತನ ಶಾಸಕರು ಡಿಗ್ಗಿ ಸಂಗಮೇಶ್ವರ ಗುಡ್ಡದ ಮೇಲೆ ಇರುವದರಿಂದ ೧೦೧ ಮೆಟ್ಟಲಿಗೆ ಸಿಡಿಗಾಯಿ ಒಡೆದು ಸಂಗಮೇಶ್ವರ ದೇವರಿಗೆ ಭಕ್ತಿ ಭಾವದಿಂದ ಹೂವು ಕಾಯಿ

ಕರ್ಪುರ ಮಹಾ ಪೂಜಾ ನೆರವೇರಿಸಿದರು.ಬಿಜೆಪಿ ಕಾರ್ಯಕರ್ತರು ಸಿಡಿಗಾಯಿ ಒಡೆದು ಸಂಭ್ರಮ ಪಟ್ಟರು. ಡಿಗ್ಗಿ ಸಂಗಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವೇ.ದೇವಯ್ಯ ಹಿರೇಮಠ ಅವರು ಶಾಸಕ ರಮೇಶ ಭೂಸನೂರ ಅವರನ್ನು ಸನ್ಮಾನಿಸಿದರು.

ಬಿಜೆಪಿ ಮುಖಂಡ ಸಂತೋಷಗೌಡ ಪಾಟೀಲ. ಸಿದ್ದು ಬುಳ್ಳಾ. ಪ್ರಶಾಂತಗೌಡ ಬಿರಾದಾರ ಬಂದಾಳ ರವಿ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು