ಇತ್ತೀಚಿನ ಸುದ್ದಿ
ಚಿಕ್ಕಮಗಳೂರು | ಬಸವ ಮಂಟಪ ಪುಸ್ತಕದ ವಿವಾದ: ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ
21/11/2026, 14:17
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಸವ ಮಂಟಪ ಪುಸ್ತಕದ ಬಗ್ಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ ವ್ಯಕ್ತಪಡಿಸಿದೆ.
12ನೇ ಶತಮಾನದ ಬಸವಣ್ಣನವರ ಬಗ್ಗೆ ಹಗುರವಾದ ಮಾತು ಆಕ್ಷೇಪಾರ್ಹ. ಯಾವುದೇ ವ್ಯಕ್ತಿಗಳು ಯಾವುದೇ ಮಹಾತ್ಮರ ಬಗ್ಗೆ ಇಂತಹ ಅಸಹನೀಯವಾದ ಮಾತುಗಳನ್ನಾಡುವುದು, ಬರೆಯುವುದು ತಪ್ಪು.
ಇಂತಹ ಘಟನೆಗಳು ಮರುಕಳಿಸ ಬಾರದು. ಇತಿಹಾಸವನ್ನ ಮೀರಿನ ಬಹು ಸಂಖ್ಯಾತ ಜನ ತಮ್ಮ ಆರಾಧ್ಯರ ಬಗ್ಗೆ ಭಕ್ತಿ ಭಾವಗಳನ್ನ ಇರಿಸಿಕೊಂಡಿರುತ್ತಾರೆ.
ಜನರ ಭಾವನೆಗೆ ನೋವಾಗುವ ಕೆರಳಿಸುವ ಕೆಲಸ ಯಾರು ಮಾಡಬಾರದು. ಸಂಪ್ರದಾಯ ಪರಂಪರೆಯ ಮಹಾತ್ಮರನ್ನ ಅವಹೇಳನ ಮಾಡುವುದು ಖಂಡನೀಯ












