4:31 AM Tuesday10 - November 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು | ತರೀಕೆರೆ‌ ಬಳಿ ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ: ಪುತ್ರಿ ಸಾವು; ತಂದೆ… ಎಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು: ಪಿಎ ವಾಟ್ಸಪ್​ ಚಾಟ್​ ಬಗ್ಗೆ ಡಿಸಿ… ಮುಖ್ಯಮಂತ್ರಿ ಡಿಕೆಶಿ ಹಾಸನಾಂಬೆ ದರ್ಶನ ಪಡೆಯುತ್ತಿರುವ ವೀಡಿಯೋಗೆ ಭಕ್ತರಿಂದ ಚಪ್ಪಲಿ ಎಸೆತ: ಸರತಿ… ಕೊಡಗಿನ ಜನತೆಗೆ ಬೆಲೆ ಏರಿಕೆ ನಡುವೆಯೇ ಮತ್ತೊಂದು ಶಾಕ್: ಖಾಸಗಿ ಬಸ್ ದರ… Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy…

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು | ತರೀಕೆರೆ‌ ಬಳಿ ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ: ಪುತ್ರಿ ಸಾವು; ತಂದೆ ಗಂಭೀರ

10/11/2026, 16:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸಂಬಂಧಿಕರ ಮನೆಗೆ ದೀಪಾವಳಿ ಹಬ್ಬಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ತಂದೆ-ಮಗಳು ತರೀಕೆರೆ‌ ತಾಲೂಕಿನ ಭೈರಾಪುರ ಕ್ರಾಸ್ ಬಳಿ
ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪುತ್ರಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ದ್ರಾಕ್ಷಾಯಿಣಿ (20) ಮೃತ ದುರ್ದೈವಿ, ತಂದೆ ರಮೇಶ್ ಸ್ಥಿತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೈಕ್ ನಿಯಂತ್ರಣ ತಪ್ಪಿ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ರಮೇಶ್ ಅವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಂದೆ- ಮಗಳು ಲಿಂಗದಹಳ್ಳಿ ಸಮೀಪದ ಶಾಂತಿನಗರ ನಿವಾಸಿಗಳು. ಶಾಂತಿನಗರದಿಂದ ಎಂ.ಸಿ.ಹಳ್ಳಿ ಗ್ರಾಮಕ್ಕೆ ‌ತೆರಳುವಾಗ ಈ ದುರ್ಘಟನೆ ನಡೆದಿದೆ. ಎಂ.ಸಿ.ಹಳ್ಳಿ ಗ್ರಾಮದಲ್ಲಿದ್ದ ಚಿಕ್ಕಮ್ಮನ ಮಗಳ ಮನೆಗೆ ಅವರು ತೆರಳುತ್ತಿದ್ದರು.ಲಿಂಗದಹಳ್ಳಿ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು