ಇತ್ತೀಚಿನ ಸುದ್ದಿ
ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ ಮಾಡುವ ‘ದಗಲ್ಬಾಜಿ’ ಸರಕಾರ
04/11/2026, 21:56
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರಕಾರ ಜನತೆಗೆ ಮತ್ತೊಂದು ಶಾಕ್ ನೀಡಿದೆ. ಸರಕಾರಿ ಬಸ್ ದರ ಕೂಡ ಏರಿಕೆ ಮಾಡಲಾಗಿದೆ. ಇದೆಲ್ಲ ದೀಪಾವಳಿ ಕೊಡುಗೆ ಎನ್ನುವಂತೆ ರಾಜ್ಯ ಸರಕಾರ ಒಂದೊಂದೇ ಘೋಷಣೆ ಮಾಡುತ್ತಿದೆ.


ಈಗಾಗಲೇ ಜನತೆ ಕೇಂದ್ರ ಸರಕಾರದ ಕೆಲವು ತಪ್ಪು ಆರ್ಥಿಕ ನೀತಿಯಿಂದ ಕಂಗಟ್ಟಿ ಹೋಗಿದ್ದಾರೆ. ಇದರ ಜತೆಗೆ ಜನರಿಗೆ ಪಂಚ ಗ್ಯಾರಂಟಿ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕೂಡ ‘ಹಿರಿಯಕ್ಕನ ಚಾಳಿ ಮನೆ ಮಂದಿಗೆ’ ಎನ್ನುವಂತೆ ಬಡ ಹಾಗೂ ಮಧ್ಯಮ ವರ್ಗದವರನ್ನು ಹಗಲು ದರೋಡೆ ಮಾಡಲಾರಂಭಿಸಿದೆ.
ಮೊನ್ನೆ ಮೊನ್ನೆ ಹಾಲಿನ ಮತ್ತು ಮೊಸರಿನ ದರ ಏರಿಕೆ ಮಾಡಲಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿನ ದರವನ್ನು 8 ರೂ. ಹೆಚ್ಚಿಸಲಾಯಿತು. ಇದೀಗ ಸರಕಾರಿ ಬಸ್ ದರ ಏರಿಕೆಯಾಗಿದೆ. ಸರಕಾರಿ ಬಸ್ ಅಂದ್ರೆ ಬಡ ಹಾಗೂ ಮಧ್ಯಮ ವರ್ಗದ ಜನರು ತಿರುಗಾಡುವ ರಥ. ರಾಜ್ಯದ ಮಹಿಳೆಯರಿಗೆ ಪುಕ್ಕಟೆ ಯಾತ್ರೆಗೆ ಅವಕಾಶ ಮಾಡಿಕೊಟ್ಟಿರುವ ಕಾಂಗ್ರೆಸ್ ಸರಕಾರ ಇದೀಗ ದರ ಏರಿಕೆಯ ಮೂಲಕ ಪುರುಷರಿಗೆ ಶಾಕ್ ನೀಡಿದೆ. ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕೊಟ್ಟಿರುವುದು ಶ್ಲಾಘನೀಯವೇ. ಆದರೆ ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ ಮಾಡಿದ್ರೆ ಹೇಗೆ ಮುಖ್ಯಮಂತ್ರಿಯವರೇ?
*4 ನಿಗಮಗಳಿಗೆ ಹೆಚ್ಚಳ*
ರಾಜ್ಯದ 4 ಸಾರಿಗೆ ನಿಗಮಗಳಾದ ಕೆಎಸ್ಸಾರ್ಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ, ಬಿಎಂಟಿಸಿ ಮತ್ತು ಕೆಕೆಆರ್ ಟಿಸಿ ಬಸ್ಗಳ ಪ್ರಯಾಣ ದರವನ್ನು ಸರ್ಕಾರ ಪರಿಷ್ಕರಿಸಿದ್ದು, ನೂತನ ದರಗಳು ನವೆಂಬರ್ 4ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.
*ದರ ಎಷ್ಟು ಹೆಚ್ಚಳ?*
*ಕೆಎಸ್ಸಾರ್ಟಿಸಿ: ಪ್ರತಿ ಟಿಕೆಟ್ಗೆ ಗರಿಷ್ಠ 9 ರೂಪಾಯಿ ಹೆಚ್ಚಳ.
*ಬಿಎಂಟಿಸಿ ಸಾಮಾನ್ಯ ಬಸ್: ಸ್ಟೇಜ್ ದರ 6 ರೂ.ನಿಂದ 10 ರೂ.ಗೆ ಏರಿಕೆ.
*ಬಿಎಂಟಿಸಿ ಕೊನೆಯ ಸ್ಟೇಜ್: 35 ರೂ. ಇದ್ದ ದರ 45 ರೂ.ಗೆ ಹೆಚ್ಚಳ.
*ವಾಯುವಜ್ರ ಬಸ್: ಕೊನೆಯ ಸ್ಟೇಜ್ ದರ 75 ರೂ.ನಿಂದ 90 ರೂ.ಗೆ ಏರಿಕೆ.












