ಇತ್ತೀಚಿನ ಸುದ್ದಿ
ಭೂತಾನ್ನಲ್ಲಿ ಹಿಮನದಿ ಸರೋವರ ಸ್ಫೋಟ: ಅಸ್ಸಾಂ, ಬಂಗಾಳದಲ್ಲಿ ಪ್ರವಾಹದ ಎಚ್ಚರಿಕೆ
30/10/2026, 15:51
ಬೆಂಗಳೂರು(reporterkarnataka.com): ಭೂತಾನ್ನ ಗಾಸಾ ಜಿಲ್ಲೆಯ ಹಿಮನದಿ ಸರೋವರ ದಿಢೀರ್ ಸ್ಫೋಟಗೊಂಡ ಪರಿಣಾಮ ಸೃಷ್ಟಿಯಾದ ಪ್ರವಾಹವು ಭಾರತದ ಗಡಿ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಆತಂಕ ಸೃಷ್ಟಿಸಿದೆ.
ಪ್ರವಾಹದ ನೀರು ಸಂಕೋಶ್ ನದಿಯ ಮೂಲಕ ಭಾರತದ ಪ್ರದೇಶಗಳಿಗೆ ಹರಿಯುವ ಸಾಧ್ಯತೆಯಿರುವುದರಿಂದ ಎರಡೂ ರಾಜ್ಯಗಳ ಒಟ್ಟು 5 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹಿಮನದಿ ಸರೋವರ ಸ್ಫೋಟಗೊಂಡಿದ್ದು ಎಲ್ಲಿ?
ಭೂತಾನ್ನ ಗಾಸಾ ಜಿಲ್ಲೆಯ ಲಯಾ ಗೆವೋಗ್ನಲ್ಲಿರುವ ವಕಿಲಾ ಪರ್ವತದ ಕೆಳಗಿನ ‘ಶಿಂಟಾಫು ತಶೋ’ ಹಿಮನದಿ ಕೆರೆಯಲ್ಲಿ ಗುರುವಾರ ಸಂಜೆ ಈ ದುರಂತ ಸಂಭವಿಸಿದೆ. ಈ ಕೆರೆಯು ಭೂಟಾನ್ನ 17 ಅತ್ಯಂತ ಅಪಾಯಕಾರಿ ಹಿಮನದಿ ಕೆರೆಗಳ ಪಟ್ಟಿಯಲ್ಲಿದೆ. ಕೆರೆ ತುಂಬಿ ಹರಿದ ಪರಿಣಾಮ ಮೊ ಚೂ ನದಿ ಜಲಾನಯನ ಪ್ರದೇಶದ ಕೆಳಭಾಗಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿದೆ.












