ಇತ್ತೀಚಿನ ಸುದ್ದಿ
ರಾಜ್ಯಾದ್ಯಂತ ನೀರಿನ ಘಟಕಗಳ ಮೇಲೆ ಅಧಿಕಾರಿಗಳ ದಾಳಿ: 24 ಘಟಕಗಳಿಗೆ ನೋಟಿಸ್; ಮುಳಬಾಗಿಲಿನಲ್ಲಿ ಅಸ್ವಚ್ಛ ನೀರಿನ ಘಟಕಕ್ಕೆ ಬೀಗ
30/10/2026, 15:48
ಬೆಂಗಳೂರು(reporterkarnataka.com):ರಾಜ್ಯಾದ್ಯಂತ ನೀರಿನ ಘಟಕಗಳ ಮೇಲೆ ಅಧಿಕಾರಿಗಳ ದಾಳಿ ನಡೆಸಿದ್ದು, 45 ಘಟಕಗಳಲ್ಲಿ ದಿಢೀರ್ ತಪಾಸಣೆ ನಡೆಸಿದ್ದಾರೆ. ಈ ನಡುವೆ 24 ಘಟಕಗಳಿಗೆ ನೋಟಿಸ್ ನೀಡಲಾಗಿದೆ.


ಕುಡಿಯುವ ನೀರಿನ ಗುಣಮಟ್ಟದಲ್ಲಿ ಲೋಪ ಕಂಡು ಬಂದಿದ್ದು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
*32 ನೀರಿನ ಮಾದರಿ ಲ್ಯಾಬ್ಗೆ ರವಾನೆ!*
ಮುಳಬಾಗಿಲಿನಲ್ಲಿ ಅಸ್ವಚ್ಛ ನೀರಿನ ಘಟಕಕ್ಕೆ ಬೀಗ ಹಾಕಲಾಗಿದೆ. ಮೈಸೂರು, ದಾವಣಗೆರೆಯಲ್ಲಿ ತಪ್ಪು ಲೇಬಲ್ ಬಾಟಲಿ ವಶಪಡಿಸಿಕೊಳ್ಳಲಾಗಿದೆ.
ನೀರಿನ ಬಾಟಲಿ ಖರೀದಿಸುವ ಮುನ್ನ ಎಚ್ಚರದಿಂದಿರಲು ಸರ್ಕಾರದಿಂದ ಮನವಿ ಮಾಡಿದೆ.













