9:25 PM Monday28 - September 2026
ಬ್ರೇಕಿಂಗ್ ನ್ಯೂಸ್
ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಆಗಸ್ಟ್ ತಿಂಗಳ ಟಾಪರ್ ಆಗಿ ಚಮನ್ ಎಚ್. ಬಂಗೇರ ಹಾಗೂ ನಿಧಿ ಜಿ. ಆಯ್ಕೆ

28/09/2026, 20:46

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ಟಾಪರ್ ಆಗಿ ಚಮನ್ ಎಚ್. ಬಂಗೇರ ವೇಣೂರು ಹಾಗೂ ನಿಧಿ ಜಿ. ಅವರು ಆಯ್ಕೆಯಾಗಿದ್ದಾರೆ.


ಚಮನ್ ಎಚ್. ಬಂಗೇರ ಬೆಳ್ತಂಗಡಿ ತಾಲೂಕಿನ ನಿಟ್ಟಡೇ ಗ್ರಾಮದ ಗೋಳಿಅಂಗಡಿ ನಿವಾಸಿ. ತಂದೆ ಹರೀಶ್ ಪಿ., ತಾಯಿ ವನಿತಾ.ಕೆ ಅವರು. ಚಮನ್ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ನಿಟ್ಟಡೆ ವೇಣೂರಿನಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದು ಚಿತ್ರಕಲೆ, ಭಕ್ತಿಗೀತೆ, ಅಭಿನಯಗೀತೆ, ಕಥೆ ನೃತ್ಯ ಇವೆಲ್ಲದ್ರಲ್ಲೂ ಆಸಕ್ತಿ ಹೊಂದಿದ್ದಾನೆ. ಈಗಾಗಲೇ ಕಟೀಲು, ಮೂಡಬಿದ್ರೆ, ಕಿನ್ನಿಗೋಳಿ, ಮಂಗಳೂರು, ಉಡುಪಿ, ಕಾರ್ಕಳ ,ಉಜಿರೆ, ಮಾರೂರು, ಮೈಸೂರು ಹೀಗೆ 25ಕ್ಕಿಂತಲೂ ಅಧಿಕ ವೇದಿಕೆಗಳಲ್ಲಿ ತನ್ನ ಚಾತುರ್ಯವನ್ನು ತೋರಿಸಿದ್ದಾನೆ. ಚಮನ್ ಡಾ. ನಾ ಡಿಸೋಜ ಅವರ 85ನೇ ಜನುಮ ದಿನದ ಅಂಗವಾಗಿ ನಡೆದ ರಾಜ್ಯಮಟ್ಟದ ಕಥೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ. 107.8FM ರೇಡಿಯೋ ಸಾರಂಗದ ಮಕ್ಕಳ ಮಂಟಪದಲ್ಲಿ ಭಾಗವಹಿಸಿದ್ದಾನೆ. ಅಭಿಮತ ಚಾನೆಲ್ ನಲ್ಲಿ ನಡೆದ ಪ್ರತಿಭಾ ಲೋಕದಲ್ಲಿಯೂ ಕೂಡ ಭಾಗವಹಿಸಿದ್ದಾನೆ. ಲಯನ್ಸ್ ಕ್ಲಬ್ ಕಾರ್ಕಳ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿದ್ದಾನೆ. ರಾಜ್ಯ ಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದಾನೆ. ಅಲ್ಲದೇ ಅನೇಕ ‘ಸ್ಮರಣಿಕೆ’ ಹಾಗೂ ‘ಪ್ರಸಂಶನಾ ಪತ್ರ’ಗಳು ದೊರಕಿವೆ. ಈತನ ಪ್ರತಿಭೆಯನ್ನು ಗುರುತಿಸಿ ಮೈಸೂರಿನಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನವರು “ಲಿಟಲ್ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದ್ದಾರೆ.
ಮಂಗಳೂರಿನ ಬೊಂದೆಲ್ ನಿವಾಸಿಗಳಾದ ಗುರುರಾಜ್ ಎಂ. ಹಾಗೂ ಅನಿತಾ ಟಿ.ಎಸ್. ದಂಪತಿಯ ಪುತ್ರಿಯಾದ ನಿಧಿ ಜಿ. ಕೆನರಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಈಕೆಗೆ ಸಂಗೀತ, ನೃತ್ಯ, ಕ್ರೀಡೆ, ಕೊಳಲು, ಕೀಬೋರ್ಡ್ ನಲ್ಲಿ ಆಸಕ್ತಿ ಹೊಂದಿದ್ದಾಳೆ. ಶಾಲಾ ಹಾಗೂ ಕಾಲೇಜಿನಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಸುಮಾರು 70 ಕ್ಕೂ ಹೆಚ್ಚು ಬಹುಮಾನ ಪಡೆದಿದ್ದಾಳೆ. NCC IGC Camp ನಲ್ಲಿ ಭಾಗವಹಿಸಿದ್ದಾಳೆ. ಶಾಲೆಯಿಂದ ಬೆಸ್ಟ್ NCC ಕೆಡೆಟ್ ಸರ್ಟಿಫಿಕೇಟ್ ಪಡೆದಿದ್ದಾಳೆ. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗೃಹರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯ ಸಿಬ್ಬಂದಿಯ ಮಕ್ಕಳಿಗೆ ರಾಷ್ಟ್ರ ಭಕ್ತಿ ಕುರಿತು ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು 5000 ರೂ. ನಗದು ಬಹುಮಾನ ಪಡೆದಿದ್ದಾಳೆ. ದತ್ತ ಪೀಠ ಮೈಸೂರು ಅವರು ನಡೆಸಿದ ಭಜನೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದಾಳೆ. ಡೈಜಿವರ್ಡ್ ಟಿವಿ ಚಾನಲ್ ನಡೆಸಿದ ಸಂಗೀತ ತಾರೆ ಕಾರ್ಯಕ್ರಮ,75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ V4 ನ್ಯೂಸ್ ಚಾನಲ್ ನಲ್ಲಿ ದೇಶಭಕ್ತಿ ಗೀತೆ ಕಾರ್ಯಕ್ರಮ, ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಾಯ್ಸ್ ಆಫ್ ಆರಾಧನಾ ತಂಡದಿಂದ ಅಭಿಮತ ಟಿವಿ ಕಾರ್ಯಕ್ರಮ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಆಕಾಶವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಮಕ್ಕಳ ದಿನಾಚರಣೆ ಅಂಗವಾಗಿ ದಾಸ್ ಕುಡ್ಲ ಇವೆಂಟ್ ನವರು ನಡೆಸಿದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಪುನೀತ್ ಗಾನ ರತ್ನ ಸೀಸನ 4, ಸೃಷ್ಟಿ ಕಲಾ ವಿದ್ಯಾಲಯ ಬೆಂಗಳೂರು ಹಾಗೂ ತುಳುನಾಡ ಜವನೇರ ಬೆಂಗಳೂರು ಅವರು ನಡೆಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ. ರಾಗ ತರಂಗದವರು ನಡೆಸಿದ ಅಂತರ್ ಜಿಲ್ಲಾಮಟ್ಟದ ಬಾಲಪ್ರತಿಭೋತ್ಸವ ಸ್ಪರ್ಧೆಯಲ್ಲಿ ಜಾನಪದ ಗೀತೆ ಯಲ್ಲಿ ಪ್ರಥಮ ಹಾಗೂ ದೇಶಭಕ್ತಿ ಗೀತೆಗಳಲ್ಲಿ ತೃತೀಯ ಬಹುಮಾನ ಪಡೆದಿದ್ದಾಳೆ. ರೋಟರಿ ಕ್ಲಬ್ ನವರು ನಡೆಸಿದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ಬೆಸ್ಟ್ ಎಂ.ಸಿ. ಹಾಗೂ ಗ್ರೂಪ್ ಡಾನ್ಸ್ ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾಳೆ. ಕರಾವಳಿ ಉತ್ಸವ, ಫುಡ್ ಫೆಸ್ಟ್ ಕಟೀಲು ದೇವಸ್ಥಾನ, ಕಾವೂರು ದೇವಸ್ಥಾನ, ಶಿವಳ್ಳಿ ಸಭಾ ಹಾಗೂ ಹಲವಾರು ವೇದಿಕೆಗಳಲ್ಲಿ ಸಾಂಸ್ಕತಿಕ ಕಾರ್ಯಕ್ರಮ ನೀಡಿದ್ದಾಳೆ. ಅಲ್ಲದೆ ರಿಲೆ, ರನ್ನಿಂಗ್ ರೇಸ್, ತ್ರೋಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಅಂತರ್ ಶಾಲಾ ಮಟ್ಟದಲ್ಲಿ ಬಹುಮಾನ ಪಡೆದಿದ್ದಾಳೆ. ಇದೆಲ್ಲದರ ಜೊತೆಗೆ ಎಸ್ಸೆಸ್ಸೆಲ್ಸಿಯಲ್ಲಿ 93% ಅಂಕ ಪಡೆದು ಕರ್ನಾಟಕ ಸರ್ಕಾರಿ ನೌಕರರ ಸಂಘ ಹಾಗೂ ಶಿವಳ್ಳಿ ಸಭಾದಿಂದ ಪ್ರತಿಭಾ ಪುರಸ್ಕಾರ ಪಡೆದಿದ್ದಾಳೆ. ವಾಯ್ಸ್ ಆಫ್ ಆರಾಧನಾ ತಂಡದ ಏಪ್ರಿಲ್ ತಿಂಗಳಿನಲ್ಲಿ ವಿಜೇತಳಾಗಿದ್ದಾಳೆ.
ಪ್ರಸ್ತುತ ಪದ್ಮಶ್ರೀ ಅವರ ವಾಯ್ಸ್ ಆಫ್ ಆರಾಧನಾ ತಂಡದ ಸಕ್ರೀಯ ಸದಸ್ಯೆ.

ಇತ್ತೀಚಿನ ಸುದ್ದಿ

ಜಾಹೀರಾತು