ಇತ್ತೀಚಿನ ಸುದ್ದಿ
ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್; ಸಿಕ್ಕಾಪಟ್ಟೆ ಬೈಗುಳ
25/08/2026, 18:04
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮದ್ಯ ವ್ಯಸನಿ ಯುವ ಚಾಲಕನೊಬ್ಬ ನಡು ರಸ್ತೆಯಲ್ಲಿ ಪೊಲೀಸ್ ಗೆ ಅವಾಜ್ ಹಾಕಿ ಹಿಗ್ಗಾಮುಗ್ಗಾ ಬೈದ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.



ಕುಡಿದು ಕಾರು ಓಡಿಸ್ತಿದ್ದಿದ್ದಕ್ಕೆ ಗಾಡಿ ಅಡ್ಡ ಹಾಕಿದ ಪೊಲೀಸ್ ಕಾನ್ ಸ್ಟೇಬಲ್ ಅವರು ಕಾರಿನ ಕೀ ತೆಗೆದುಕೊಳ್ಳಲು ಹೋದಾಗ ಏನೋ ಕಿತ್ಕೊಂತೀಯಾ ಎಂದು ಅವಾಜ್ ಹಾಕಿ ಬೈದಿದ್ದಾನೆ.
ಪೊಲೀಸರಿಗೆ ನಾನು ಹೇಗೆ ಮಾತನಾಡ್ತೀನಿ ಗೊತ್ತಾ… ನನ್ನದ್ದೇನು ಕಿತ್ತುಕೊಳ್ಳೋಕೆ ಆಗಲ್ಲ. ಹೇ… ಬ್ಯಾಡ… ಚೆನ್ನಾಗಿರೋಲ್ಲಾ… ಸುಮ್ನೆ ಹೋಗಲೇ..ಎಂದು ರೋಪ್ ಹಾಕಿದ್ದಾನೆ.
ಪೊಲೀಸಿಗೆ ನೂಕಾಡಿ-ತಳ್ಳಾಡಿ ಬೆದರಿಕೆ ಹಾಕಿದ್ದಾನೆ. ಕುಡಿದು ವಾಹನ ಚಲಾಯಿಸಿ ಬೇರೆ ಗಾಡಿಗೆ ಟಚ್ ಮಾಡಿಕೊಂಡು ಬಂದಿದ್ದ ಕಾರಣ ಆ ಕಾರಿನ ಮಾಲಕರು ಪ್ರಶ್ನೆ ಮಾಡಲು ಬಂದಾಗ ಗಾಡಿ ಮಾಲಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಮದ್ಯವ್ಯಸನಿ ಯುವಕ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ಎಂದು ತಿಳಿದು ಬಂದಿದೆ.













