ಇತ್ತೀಚಿನ ಸುದ್ದಿ
ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬಸ್ಸಿನ ಚಕ್ರದಡಿ ಸಿಲುಕಿ ಮಹಿಳೆ ಸಾವು
17/08/2026, 11:44
ಕೊಡಗು(reporterkarnataka.com): ಕೊಡ್ಲಿಪೇಟೆ ಸಮೀಪದ ನಿಲುವಾಗಿಲು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಮತ್ತು ಸರಕಾರಿ ಬಸ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಮಹಿಳೆಯೊಬ್ಬರು ಮ್ರತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ಅರಕಲಗೂಡುವಿನಿಂದ ಕೊಡ್ಲಿಪೇಟೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಮಲ್ಲಿಪಟ್ಟಣ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬ್ಯೆಕ್ ಹಿಂಬದಿಯಲ್ಲಿದ್ದ ಮಲ್ಲಿಪಟ್ಟಣ ನಿವಾಸಿ ಮಂಜುಳಾ (65) ಬಸ್ ನ ಹಿಂಬದಿ ಚಕ್ರದಡಿ ಸಿಲುಕಿ ಸ್ಥಳದಲ್ಲೆ ಮೃತಪಟ್ಟರೆ,ಬ್ಯೆಕ್ ಚಲಾಯಿಸುತ್ತಿದ್ದ ಸ್ಥಳೀಯ ಕಿರಿಕೊಡ್ಲಿ ನಿವಾಸಿ ನಿವೃತ್ತ ಪೋಸ್ಟ್ಮ್ಯಾನ್ ದೇವಪ್ಪರವರು ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅರಕಲಗೂಡು ಸರಕಾರಿ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ,ಅಪಘಾತ ಪಡಿಸಿದ KA-13-F-2211 ನೊಂದಣಿ ಸಂಖ್ಯೆಯ ಬಸ್ ಹಾಗೂ KA-12-R-9392 ಸಂಖ್ಯೆಯ ಬ್ಯೆಕ್ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯ ಹಾಗೂ ಶನಿವಾರಸಂತೆ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮುಂದಿನ ಕಾನೂನು ಕ್ರಮ ಕ್ಯೆಗೊಂಡಿದ್ದಾರೆ.












