ಇತ್ತೀಚಿನ ಸುದ್ದಿ
ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್ ಹೋಟೆಲ್ಗೆ ನುಗ್ಗಿ ಭಾರತ ವಿರೋಧಿ ಘೋಷಣೆ ಕೂಗಿದ ಪ್ರತಿಭಟನೆಕಾರ
11/07/2026, 21:09
ಮೆಲ್ಬೋರ್ನ್(reporterkarnataka.com): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಮೆಲ್ಬೋರ್ನ್ನ ಹೋಟೆಲ್ಗೆ ವಲಸೆ ವಿರೋಧಿ ಪ್ರತಿಭಟನಾಕಾರನೊಬ್ಬ ನುಗ್ಗಿ, ಮೋದಿ ಹಾಗೂ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ. ವರದಿಗಳ ಪ್ರಕಾರ, ಹೋಟೆಲ್ನ ಬಾಲ್ಕನಿಗೆ ತೆರಳಿದ ಪ್ರತಿಭಟನಾಕಾರ ಕೆಲಕಾಲ ಘೋಷಣೆಗಳನ್ನು ಕೂಗಿದ್ದಾನೆ.ಕೂಡಲೇ ಸ್ಥಳಕ್ಕೆ ಧಾವಿಸಿದ ವಿಕ್ಟೋರಿಯಾ ಪೊಲೀಸರು ಆತನನ್ನು ವಶಕ್ಕೆ ಪಡೆದು ಹೋಟೆಲ್ನಿಂದ ಹೊರಗೆ ಕರೆದೊಯ್ದಿದ್ದಾರೆ.
ಈ ಘಟನೆ ನಡೆದರೂ ಪ್ರಧಾನಿ ಮೋದಿ ಅವರ ಭದ್ರತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರಧಾನಿ ಅವರ ನಿಗದಿತ ಕಾರ್ಯಕ್ರಮಗಳು ಎಂದಿನಂತೆ ಮುಂದುವರಿದವು.












