ಇತ್ತೀಚಿನ ಸುದ್ದಿ
ಮದುವೆಯಾದ ಮಹಿಳೆಗೋಸ್ಕರ ಇಬ್ಬರು ಪುರುಷರ ಫೈಟಿಂಗ್: ಒಬ್ಬನ ಹಸ್ತ ಕಟ್
24/06/2026, 15:38
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮದುವೆಯಾದ ಮಹಿಳೆಗೋಸ್ಕರ ಇಬ್ಬರು ಪುರುಷರು ಫೈಟಿಂಗ್ ನಡೆಸಿದ್ದು, ಫೈಟಿಂಗ್ ನಲ್ಲಿ ಒಬ್ಬನ ಹಸ್ತ ಸಂಪೂರ್ಣ ತುಂಡಾದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ.


ಮಹಿಳೆಗಾಗಿ ಶೇಷಗಿರಿ (40) ಹಾಗೂ ಅರುಣ್ (35) ಮಧ್ಯೆ ಗಲಾಟೆ ನಡೆದಿತ್ತು. ಗಂಡನಿಂದ ಬೇರ್ಪಟ್ಟ ನಾಗರತ್ನ ಎಂಬ ಮಹಿಳೆಗೋಸ್ಕರ ಈ ಇಬ್ಬರು ಜಗಳವಾಡಿದ್ದರು. ಮಹಿಳೆಗಾಗಿ ಅರುಣ್ ಎಂಬುವನ ಮೇಲೆ ಶೇಷಗಿರಿ ಲಾಂಗ್ ಬೀಸಿದ್ದ. ಅರುಣನು
ಕೈ ಅಡ್ಡ ಕೊಟ್ಟ ಪರಿಣಾಮ ಹಸ್ತ ಸಂಪೂರ್ಣ ತುಂಡಾಗಿದೆ.
ಅರುಣನಿಗೆ ಚಿಕ್ಕಮಗಳೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












