ಇತ್ತೀಚಿನ ಸುದ್ದಿ
ಹುಡುಗಿ ಪ್ರಿಯಕರನ ಜತೆ ಪರಾರಿಯಾದ ಪ್ರಕರಣ: ಪೊಲೀಸರು ವಿಚಾರಣೆ; ತರುಣ ಆತ್ಮಹತ್ಯೆ
22/06/2026, 18:05
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪೊಲೀಸರು ವಿಚಾರಣೆ ಮಾಡಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಚಂದನ್ (20) ಎಂದು ಗುರುತಿಸಲಾಗಿದೆ.
ಕುಡ್ಲೂರು ಗ್ರಾಮದ ಹುಡುಗಿಯೊಬ್ಬಳು ಪ್ರಿಯಕರನ ಜೊತೆ ಹೋಗಿದ್ದಳು. ಆಕೆ ಮೊಬೈಲ್ ನಲ್ಲಿ ಚಂದನ್ ನ ನಂಬರ್ ಹಾಗೂ ಸಂಪರ್ಕದ ಬಗ್ಗೆ ಮಾಹಿತಿ ಇತ್ತು. ಮಾತುಕತೆ ನಡೆಸಿದ್ದರಿಂದ ರೆಗ್ಯುಲರ್ ವಿಚಾರಣೆಗೆ ಪೊಲೀಸರು ಕರೆದಿದ್ದರು. ವಿಚಾರಣೆ ಬಳಿಕ ನಿನ್ನೆ ಸಂಜೆ ಮನೆಗೆ ಕಳಿಸಿದ್ದ ಬೀರೂರು ಪೊಲೀಸರು
ಸಂಜೆ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿರೋ ಚಂದನ್.
ಆ ಹುಡುಗಿ ಹೋಗೋದಕ್ಕೆ ಈತನೇ ಕಾರಣ ಎಂದು ಜನ ಮಾತನಾಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ತಾಯಿಗೆ ಚಂದನ್ ಮೆಸೇಜ್ ಮಾಡಿದ್ದಾರೆ. ಚಂದನ್ ಆತ್ಮಹತ್ಯೆಗೆ ಪೊಲೀಸ್ ವಿಚಾರಣೆ ಕಾರಣವಾ?, ಬೇರೆ ಕಾರಣವಾ ತಿಳಿದು ಬಂದಿಲ್ಲ.
ಪೊಲೀಸರ ತನಿಖೆಯಿಂದ ಚಂದನ್ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












